ಸಾರ್ಥ

ಸಾರ್ಥ ಒಂದು ರೋಚಕ ಕಾದಂಬರಿ. ವೈದಿಕ ಯುಗ ಮತ್ತು ಪರಕೀಯರ ದಾಳಿಯ ಸಂಧಿ ಕಾಲದ ಅಪರೂಪದ ಚಿತ್ರಣ. ಸಾರ್ಥ ಎಂಬ ವಿಶಿಷ್ಟವಾದ ನಡೆದಾಡುವ ವ್ಯಾಪಾರ ಕೇಂದ್ರದ ಸುತ್ತ ಸುತ್ತುವ ಕಥೆ. ಇದರೊಂದಿಗೆ ಎಂಟನೇ ಶತಮಾನದ ಜನ ಜೀವನ, ಸಂಸ್ಕೃತಿ, ಕಲೆ, ಧರ್ಮ, ರಾಜಕೀಯ ಎಲ್ಲದರ ನೋಟವನ್ನು ಅಧ್ಬುತವಾಗಿ ಚಿತ್ರಿಸಿದ್ದಾರೆ. ಯೋಗ, ವಾಮಾಚಾರ, ಬೌದ್ಧ ಭಿಕ್ಕುಗಳು, ನಲಂದಾ ವಿದ್ಯಾಲಯ ಎಲ್ಲದರ ಆಳವಾದ ಅಧ್ಯಯನ ಕಥೆಯಲ್ಲಿ ಕಾಣಿಸುತ್ತದೆ. ಕಥಾನಾಯಕ ನಾಗಭಟ್ಟನ ಮಾನಸಿಕ ತೊಳಲಾಟಗಳು, ದೌರ್ಬಲ್ಯಗಳು ಮೊದಲಿನಿಂದ ಕೊನೆಯವರೆಗೂ ಆತನಲ್ಲಾಗುವ ಪರಿವರ್ತನೆಯನ್ನು … Continue reading ಸಾರ್ಥ

ಕರಾಳ ರಾತ್ರಿ

ಅಂದು ಅಮವಾಸ್ಯೆ, ಸವದತ್ತಿಯ ಸೂರಣ್ಣ ಮೆಲ್ಲಗೆ ನಡೆದುಕೊಂಡು ಬರುತ್ತಿದ್ದರು. ಈ ಸಲ ಗದ್ದೆ ಬದಿಯಲ್ಲಿ ಒಡೆದು ಹೋದ ಕಟ್ಟೆಯ ಕಟ್ಟಿಸೋಕೆ ಖರ್ಚೆಷ್ಟಾಗಬಹುದು ಎಂಬ ಲೆಕ್ಕಾಚಾರ ಅವರ ತಲೆ ತುಂಬಾ. ಎದುರುಗಡೆ ರುದ್ರಪ್ಪ ಬಂದಿದನ್ನು ಅವರು ಗಮನಿಸಲಿಲ್ಲ. ನಗುತ್ತಾ ಬಂದ ರುದ್ರಪ್ಪ ಏನು ಗದ್ದೆ ಯೋಚನೇಲಿ ನಾವೆಲ್ಲಾ ಕಾಣೋದೇ ಇಲ್ಲವೋ ಎಂದು ನಗುತ್ತಾ ಮುಂದೆ ಸರಿದನು. ಆಗ ಎಚ್ಚರವಾದಂತೆ ಸೂರಣ್ಣ, "ಓಹ್ ರುದ್ರಪ್ಪ , ಏನು ಆರಾಮ‌?" ಎಂದು ಕೇಳುತ್ತಾ ನಿಂತರು. ಆದರೆ ಆಗಲೇ ಮುಂದೆ ಹೋದ ರುದ್ರಪ್ಪ … Continue reading ಕರಾಳ ರಾತ್ರಿ

ಊರೆಂಬ ಉದರದಲ್ಲಿ

ಊರೆಂಬ ಉದರ ಇದೊಂದು ಅದ್ಬುತ ಪುಸ್ತಕ ಇದನ್ನು ಆತ್ಮಕಥೆಯೆಂದಾಗಲಿ, ಜೀವನ ಚರಿತ್ರೆ ಎಂದಾಗಲಿ ಹೇಳಲಾಗುವುದಿಲ್ಲ. ಆದರೆ ಇದೊಂದು ಡೈರಿಯಂತೂ ಹೌದು, ಅದರಲ್ಲೂ ಅಪರೂಪದ ಡೈರಿ. ಇಲ್ಲಿನ ಕಾಲಘಟ್ಟ, ಸಂಕೇತಿಗಳ ಗುಂಪು ಒಂದು ಕುತೂಹಲಕಾರಿ ವಿಚಾರದಂತೆ ಪುಸ್ತಕದೊಳಗೆ ಎಳೆದುಕೊಂಡು ಬಿಡುತ್ತದೆ. ಬದುಕಿಗೆ ಬೇಕಾದ ನೀತಿ ಹೇಳುವ ಇಲ್ಲಿನ ಲೇಖನಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ಅಡುಗೆಮನೆಯೆಂದರೆ ಅದೊಂದು ಬಿಡುಗಡೆಯ ಸ್ಥಾನ ಎನ್ನುವ ಹೊಸ ಯೋಚನೆ ನಾನು ಇದರಲ್ಲೇ ಮೊದಲು ಓದಿದ್ದು, ಅಡುಗೆಯ ಮೇಲಿನ ಪ್ರೀತಿ, ಅಕ್ಕರೆ ಇಲ್ಲಿನ ಪ್ರತಿ ರೆಸಿಪಿಯಲ್ಲಿ … Continue reading ಊರೆಂಬ ಉದರದಲ್ಲಿ