ಕಥೆಯಾದಳು ಹುಡುಗಿ

ಬರೆಯಲು ಅವಳಿಗೆ ಬಿಡುವಿಲ್ಲ ಆದರೆ ಕವನವಾದವಳು ಅವಳು ಬೆಳಗಾದರೆ ಕೂದಲೆತ್ತಿ ಕಟ್ಟಿ ತಿಂಡಿಯೆಂದು ಒಲೆಯುರಿಸಿ ಮತ್ತೆ ತಯಾರಾಗಿ ಹೊರಡುವ ಗಡಿಬಿಡಿಯ ಲಲನೆ ಅವಳು ನಿದ್ದೆಯಿಲ್ಲದ ಕಣ್ಣಿಗೆ ಹಚ್ಚಿದ ಕಾಡಿಗೆಯ ನೋಡವರು ಜನ ನಗುವ ಪರದೆಯ ಹಿಂದಿನ ಕಥೆ ಕೇಳದೆ ಹರಟುವರು ದಿನ ಒಮ್ಮೊಮ್ಮೆ ಧ್ಯಾನಿಸುವಳು ಮತ್ತದೇ ಒಂಟಿತನ ನೆನಪಾಗಿ ಏಕಾಂತದಿಂದಾಚೆ ಓಡುವಳು ಅಲ್ಲಿಗೆ ಲೇಖನಿ ಜಾರುವುದು ಬರೆಯಲು ಅವಳಿಗೆ ಬಿಡುವಿಲ್ಲ ಆದರೆ ಕವನವಾದವಳು ಅವಳು

Advertisements

ಹೃದಯಾಘಾತ

ಹೃದಯಾಘಾತದಿಂದ ಹೋದವರೆಷ್ಟೋ ಹೃದಯಾಘಾತದೊಂದಿಗೆ ಬದುಕುತ್ತಿರುವರೆಷ್ಟೋ -ಮಳೆ ಜಾಸ್ತಿ ಹಾರಾಡುವಾಗ ಕಾಲುಗಳು ನೆಲದಲ್ಲೇ ಇರಲಿ ಒಮ್ಮೆಲೆ ಮೇಲಿಂದ ಬಿದ್ದರೆ  ಆಗುವ ಪೆಟ್ಟಾದರೂ ಕಮ್ಮಿಯಾಗಲಿ -ಮಳೆ

ಕಾಡುವವ

ನೀನೆಂದರೆ ಬೆನ್ನೊಳಗಿನ ಚಳುಕು ಹೊದ್ದು ಮಲಗುವ ಒಲವು ಮೈ ನಿಮಿರುವ ರೋಮಾಂಚನ ನಡುಗಿಸುವ ತೆಳು ಕುಳಿರ್ಗಾಳಿ ಹಲ್ಲು ಕಟಕಿಸುವ ಮಹರಾಯ ಚರ್ಮ ಒಣಗಿಸುವ ಆಗಂತುಕ ತುಟಿಬಿರಿದು ಒಡೆದ ಅಪರಾಧಿ ಎದೆಯಾಳದ ಸೋಮಾರಿತನ ಬಿಸಿಗೆ ಹಾತೊರೆಯುವ ಮನ ತಣ್ಣಗೆ ಕೊರೆಯುವ ಹಿಮವಂತ ಮತ್ತೇನಲ್ಲ ನೀನು ಮಲೆನಾಡಿನ ಮಾಗಿಯ ಚಳಿ - ಮಳೆ