ಹೃದಯಾಘಾತ

ಹೃದಯಾಘಾತದಿಂದ ಹೋದವರೆಷ್ಟೋ ಹೃದಯಾಘಾತದೊಂದಿಗೆ ಬದುಕುತ್ತಿರುವರೆಷ್ಟೋ -ಮಳೆ ಜಾಸ್ತಿ ಹಾರಾಡುವಾಗ ಕಾಲುಗಳು ನೆಲದಲ್ಲೇ ಇರಲಿ ಒಮ್ಮೆಲೆ ಮೇಲಿಂದ ಬಿದ್ದರೆ  ಆಗುವ ಪೆಟ್ಟಾದರೂ ಕಮ್ಮಿಯಾಗಲಿ -ಮಳೆ

Advertisements

ಕಾಡುವವ

ನೀನೆಂದರೆ ಬೆನ್ನೊಳಗಿನ ಚಳುಕು ಹೊದ್ದು ಮಲಗುವ ಒಲವು ಮೈ ನಿಮಿರುವ ರೋಮಾಂಚನ ನಡುಗಿಸುವ ತೆಳು ಕುಳಿರ್ಗಾಳಿ ಹಲ್ಲು ಕಟಕಿಸುವ ಮಹರಾಯ ಚರ್ಮ ಒಣಗಿಸುವ ಆಗಂತುಕ ತುಟಿಬಿರಿದು ಒಡೆದ ಅಪರಾಧಿ ಎದೆಯಾಳದ ಸೋಮಾರಿತನ ಬಿಸಿಗೆ ಹಾತೊರೆಯುವ ಮನ ತಣ್ಣಗೆ ಕೊರೆಯುವ ಹಿಮವಂತ ಮತ್ತೇನಲ್ಲ ನೀನು ಮಲೆನಾಡಿನ ಮಾಗಿಯ ಚಳಿ - ಮಳೆ

ಕಸ

ನಾನೊಬ್ಬ ಜಾಡಮಾಲಿ. ಮೊನ್ನೆ ಮೊನ್ನೆ ತನಕ ಕಸ ಗುಡಿಸುವ ಅನಾಮಿಕ ನಾನು. ಆದರೆ ಅವತ್ತೊಂದಿನ ಸಾರು ಬಂದು ಜಾಡಮಾಲಿಯ ಅರ್ಜಿಗೆ ಹೆಬ್ಬೆಟ್ಟು ಹಾಕು ಅಂದಾಗಲೇ ನನಗೆ ಜಾಡಮಾಲಿ ಅನ್ನುವ ಸುಂದರ ಹೆಸರಿದೆ ಎಂದು ಗೊತ್ತಾಗಿದ್ದು. ನಾನು ಗುಡಿಸುವುದು ಮಹದೇವಪುರದ ದೊಡ್ಡ ರಸ್ತೆಯ ಬಳಿ. ನನಗೆ ಓದಲು ಬರೆಯಲು ಗೊತ್ತು, ಆದರೂ ನನ್ನ ಕೆಲಸ ಕಸ ಗುಡಿಸುವುದೇ. ಈ ಕೆಲಸವೇ ಒಗ್ಗಿ ಹೋಗಿರುವುದರಿಂದ ನಾನು ಬೇರೆ ಹುಡಕಲು ಹೋಗಿಲ್ಲ. ನಾನು ಎಲ್ಲಾ ಕಡೆ ಅನಕ್ಷರಸ್ಥ ಎಂದೇ ಹೇಳಿರುವುದು. ನೀವು … Continue reading ಕಸ