ನಾನು ಮರ‌ ತಾನೇ

ಹೇಳಬಾರದು ನಾನು ಗುಟ್ಟನ್ನುಕೇಳಿ ಮರೆತುಬಿಡಿ ನೀವುಅಂದು ಸಂಜೆ ಸುಶೀಲೆ ಬಂದುಶ್ರೀನಾಥನಿಗೆ ಕಾದಿದ್ದಳುಅವ ಬಾರದೆ ಹೋದಾಗಬಿಕ್ಕಿ ಬಿಕ್ಕಿ ಅತ್ತು ಹೊರಟಳು ನಿಮಗೆ ಗೊತ್ತಿರಬೇಕಲ್ಲಸುಶೀಲೆಗೆ ಮದುವೆ ಗೊತ್ತಾಗಿದ್ದುಅವಳು ಪ್ರೀತಿ ಪ್ರೇಮವೆಲ್ಲಬದಿಗೆ ಸರಿಸಿ ಕೈಗೆ ಮದರಂಗಿಹಚ್ಚಿಕೊಂಡಳು ಎಂದು ಜನಮಾತಾಡಿದ್ದು ? ನಾನೇ ಮೂಕ ಸಾಕ್ಷಿ ಸುಶೀಲೆಯಗುಣಕ್ಕೆ ಶ್ರೀನಾಥನೇ ಅದೇಕೋಹಿಂದೇಟು ಹಾಕಿ ಮುಂದೆ ಹೊರಟಅವಳು ನಿಂತ ನಿಲುವಲ್ಲಿಹೊರಟು ಬಂದಿದ್ದಳು ನಾನು ನೆರಳುನೀಡಿದ್ದೆ ಅವಳು ಕಾಯುವಾಗನಾನು ಎಲೆ ಉದುರಿಸಿದ್ದೆಅವಳು ಅದುರುವಾಗಕೊನೆಗೆ ಹೋಗಿಬಾರಮ್ಮ ಎಂದುಹರಸಿ ಕಳುಹಿಸಿದೆಹೆಚ್ಚೇನು ಮಾಡಲಿ ನಾನು ಒಂದುಮರ ತಾನೇ

ವ್ಯಕ್ತಿವಿಭೂತಿ

ಶತಾವಧಾನಿ ಗಣೇಶರ ಬಗೆಗೆ ಮೊದಲಿನಿಂದಲೂ ಕುತೂಹಲ ಇದ್ದೇ ಇತ್ತು. ಅವರ ಕಗ್ಗದ ವ್ಯಾಖ್ಯಾನ, ಕೆಲವು ಅಷ್ಟಾವಧಾನಗಳನ್ನು ಆಸಕ್ತಿಯಿಂದ ಕೇಳಿದ್ದೆ. ಮಣ್ಣಿನ ಕನಸು ಓದಿದ ಮೇಲಂತೂ ಅಭಿಮಾನ ಇನ್ನೂ ಹೆಚ್ಚಾಗಿತ್ತು. ಆದರೆ ಅವರ ಜ್ಞಾನದ ಪ್ರಖರತೆಗೆ  ಕಣ್ಣಗಲಿಸಿ ನೋಡಲಾಗದೆ ಹೆಚ್ಚಿನ ಮಾಹಿತಿ ಏನೂ ತಿಳಿದುಕೊಂಡಿರಲಿಲ್ಲ. ಶಶಿಕಿರಣ್ ಎಂಬ ಲೇಖಕರು ಬರೆದಿರುವ ಈ ವ್ಯಕ್ತಿವಿಭೂತಿ ಹೊತ್ತಿಗೆ ಗಣೇಶರ ಜೀವನ-ಸಾಧನೆಗಳ ಕಿರು ಪರಿಚಯ ಮಾಡಿಕೊಡುತ್ತದೆ. ಚಕ್ರವರ್ತಿ ಸೂಲಿಬೆಲೆಯವರು ಬರೆದ ವಿಮರ್ಶೆ ನೋಡಿದ ಮೇಲೆ ಓದಲೇಬೇಕೆಂದು ತರಿಸಿಕೊಂಡ ಪುಸ್ತಕವಿದು‌. ಲೇಖಕರು ಸುಂದರವಾಗಿ ಅವರ … Continue reading ವ್ಯಕ್ತಿವಿಭೂತಿ