ಜನ-ಪದ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ವಾಟ್ಸ್ಯಾಪ್ ಮೆಸೇಜು ಕಳಿಸೋರ ವಾಟ್ಸ್ಯಾಪ್ ಮೇಸೇಜ್ ಕಳಿಸೋ ಜನರ ಎದ್ದೊಂದು ಗಂಟೆ ನೆನೆದೇನಾ ಮೆಸೇಜು ಕುಟ್ಟೋರಿಗೆ ಎಲ್ಲಾ ಭಾಗ್ಯವು ಬರಲಿ ಫಾರ್ವಡಲ್ಲಿ ನಿಮ್ಮ ಹೆಸರಿರಲಿ ಫಾರ್ವಡಲ್ಲಿ ನಿಮ್ಮ ಹೆಸರಿರಲಿ ಎಫ್ ಬಿ ಲಿ ಕೂಡ ನೀವು ಬರದದ್ದೇ ಶೇರಾಗಲಿ ಮೊಬೈಲು ಮಾತಾಯಿ ಬೇಗನೆ ಚಾರ್ಜಾಗಿ ಜಲ್ಲ ಜಲ್ಲನೆ ನೀ ಬೆಳಗಮ್ಮ ಜಲ್ಲ ಜಲ್ಲನೆ ಬೆಳಗಮ್ಮ ನಾ ನಿನಗೆ ಹೊಸ ಬ್ಯಾಕ್ ಕವರ್ ಹಾಕೇನು ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಮಾಡಬೇಕಾದ ನೂರೊಂದು … Continue reading ಜನ-ಪದ

ಪಾರಿಜಾತ ಪರಿಣಯ

ಒಂದು ಸಂಜೆ ಪ್ರೇಮಕಥೆಯ ಪುಟಗಳಲಿ ನಿನ್ನ ಹೆಸರ ನಾ ಕಂಡೆ  ಅದೇನೋ ದೇವಲೋಕದ ಪುಷ್ಪವಂತೆ ನೀ ನಿನ್ನ ಕನಸ ನಾ ಕಂಡೆ ಸುಲಭದಲಿ ಸಿಗದೆ ಅಡಗಿದೆ ಭೂಮಿಯಲಿ ನಿನ್ನ ಇರುವ ನಾ ಕಂಡೆ ಹವಳದ ಚುಕ್ಕೆಯಿತ್ತು ಮುತ್ತಿನ ನಕ್ಷತ್ರದಲಿ ನಿನ್ನ ಅಂದ ನಾ‌‌ ಕಂಡೆ ಸೆಳೆದೆ ಅರಿವಾಗದಂತೆ ನಿನ್ನ ಪರಿಮಳದಿ ಒಂದು ಅದ್ಭುತ ನಾ ಕಂಡೆ ಹೇಳು ನೀನೆ ತಾನೆ ಕಿಂಡಿ ದೇವಲೋಕಕೆ ನಿನ್ನ ಗುಟ್ಟೀಗ ನಾ ಕಂಡೆ

ಯಾರೊ ಏನೋ

ಕೆಳಗೆ ಬಿದ್ದ ಹನಿಯೋ ಒರೆಸಿದ ಕೈಗಳೋ ಅತ್ತುಕೊಂಡ ನೆನಪೋ ಸಿಗದ ಕನಸೋ ಕೈಕೊಟ್ಟ ಸ್ನೇಹವೋ ಮಾತಾಡದ ಪ್ರೀತಿಯೋ ಅದೆಷ್ಟು ಋಣವೋ ಮತ್ತೆಷ್ಟೋ ಮೋಸವೋ ಕೊಟ್ಟಿದ್ದೋ ತೆಗೆದುಕೊಂಡಿದ್ದೋ ಕೊನೆಗೆ ಉಳಿದುಬಿಟ್ಟದ್ದೋ ಬದುಕಿನ ಮೇಲಿನ ಕೆನೆಯೋ ಬುಡದಲ್ಲಿ ಉಳಿದ ಗಸಿಯೋ ಬಂಧವೆನ್ನುವುದು ಕಷಾಯವೋ ಅಥವಾ ಅದೇ ಖಾಯಿಲೆಯೋ