ಮದುವೆ-ಅಭಿಪ್ರಾಯ

ಮದುವೆ ಬಗ್ಗೆ ಈಗಿನ ಕಾಲದ ಹುಡುಗಿಯರ ಅಭಿಪ್ರಾಯ ಬೇಕು ಅಂತ ಒಬ್ಬರು ಕೇಳಿದರು… ಹೌದಲ್ಲ ..ಯೋಚನೆ ಮಾಡುವಂತಹ ವಿಚಾರ ಅನಿಸಿ ಹಾಗೇ ಬರೆದಾಗ ಅನಿಸಿದ್ದು ಇಷ್ಟು… 

ಮದುವೆ  ಅಂದರೆ ಬದುಕನ್ನು ಸುಲಭ ಮಾಡುವ ಇನ್ನೊಂದು ಸಂಸ್ಕಾರ. ಈಗ ಸಮಾಜದಲ್ಲಿ ಮದುವೆಯೆಂಬುದೇ ಇಲ್ಲದಿದ್ದರೆ ಮನುಷ್ಯ ತನ್ನ ಇಡೀ ಜೀವನವನ್ನು ತಾನು ಹುಟ್ಟಿದವರ ಜೊತೆಗೆ ಕಳೆಯುತ್ತಿದ್ದ. ಹುಟ್ಟಿದ ಜಾಗ, ಹುಟ್ಟಿದ ಗುಣಗಳಾಚೆ ಅವನಿಗೆ ಹೊಂದಿಕೊಳ್ಳಲಾಗಲಿ , ತೆರೆದು ಕೊಳ್ಳಲಾಗಲಿ ಅವಕಾಶವೇ ಇರುತ್ತಿರಲಿಲ್ಲ. ಬೋರಿಂಗ್ ಎನ್ನುವುದು ಎಲ್ಲರ ಜೀವನದಲ್ಲೂ ಸಾಮಾನ್ಯ, ಹೀಗೆ ಏಕತಾನತೆಯಿಂದ ಅದೇ ಜನರೊಂದಿಗೆ ಬಾಳುತ್ತಾ ಅರವತ್ತು ಎಪ್ಪತ್ತು ನೂರು ವರುಷಗಳನ್ನು ಕಳೆಯುವುದಾದರೆ ಅದೂ ಕೂಡ ಕಲಹಕ್ಕೆ, ಅಶಾಂತಿಗೆ ನಾಂದಿಯಾಗುತ್ತಿತ್ತು.

ಇವೆಲ್ಲಾ ಸಾಮಾಜಿಕ ಸಮತೋಲನಕ್ಕೆ ಕೊಡುವ ಉದಾಹರಣೆಗಳಾದರೆ ಇನ್ನು ಬದುಕು ನಡೆಸಲು ಒಂಟಿಯಾಗಿ ಪಯಣಿಸುವುದಕ್ಕಿಂತ ಜೊತೆ ಜೊತೆಗೆ ಗುರಿಯ ಕಡೆಗೆ ಧ್ಯಾನವಿರಿಸಿಕೊಂಡು ಒಬ್ಬರಿಗೊಬ್ಬರು ಪೂರಕವಾಗಿ ನಡೆಯುವುದು ಸುಲಭ. 

ಇದೆಲ್ಲಾ ಮದುವೆ ಸಮಾಜದಲ್ಲಿ ನೆಮ್ಮದಿಯಾಗಿ , ಸಂತೋಷವಾಗಿ ಜೀವಿಸಲು ಅತೀ ಅವಶ್ಯ ಎಂದು ಹೇಳುತ್ತದೆ. ಹೇಗಿರಬೇಕು ಎಂದರೆ ಮೊದಲು ಅರೆಂಜ್ ಮ್ಯಾರೇಜ್ ಮತ್ತು ಲವ್ ಮ್ಯಾರೇಜ್ ಎಂಬ ಎರಡು ಭಾಗಗಳು ಕಾಣುತ್ತದೆ. ಆದರೆ ಹೆಚ್ಚಿನ ಸಂಸಾರಗಳನ್ನು ನೋಡಿದರೆ ನಂತರದ‌ ವರುಷಗಳಲ್ಲಿ ಎರಡರಲ್ಲಿ ವ್ಯತ್ಯಾಸವೇ ಇಲ್ಲ ಅನಿಸುತ್ತದೆ. ಯಾವುದೇ ಆದರೂ ಕೂಡ ಒಬ್ಬರನ್ನೊಬ್ಬರು ಗೌರವಿಸಿ , ಪ್ರೀತಿಸಿ ಬದುಕುವುದು ಮೊದಲು ಇರಬೇಕು. ನಂತರ ಬೌದ್ದಿಕ ಬೆಳವಣಿಗೆಗೆ , ವ್ಯಕ್ತಿತ್ವ  ವಿಕಸನಕ್ಕೆ ಪರಸ್ಪರ ಸಹಾಯ ಮಾಡಬೇಕಾಗುತ್ತದೆ. ಅಲ್ಲಿ ಕೂಡ ಮುಕ್ತವಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸಾಗಬೇಕಾಗುತ್ತದೆ.

ಇಬ್ಬರಿಗೂ ಕೂಡ ಬೇರೆ ಬೇರೆ ಗುರಿಗಳಿರುತ್ತವೆ. ಒಟ್ಟಾಗಿ ಅದನ್ನು ತಲುಪುವುದು ಮಾತ್ರ , ಅದಲ್ಲದೆ ಇನ್ನೊಬ್ಬರು ತೀರ ಹೊತ್ತೊಯ್ಯಲಿ ಎಂದು ಅಪೇಕ್ಷಿಸುವುದು ತಪ್ಪಾಗುತ್ತದೆ.

ಭಿನ್ನಾಭಿಪ್ರಾಯಗಳು ಬಂದಾಗ ಸರಿ ಪಡಿಸಲು‌ ಪ್ರಯತ್ನಿಸಬೇಕು. ಇಲ್ಲೂ ಕೂಡ ಸ್ವಲ್ಪ ವರ್ಷದ ನಂತರ ಬೋರಿಂಗ್ ಎನ್ನುವ ಭೂತ ಕಾಲಿಡುತ್ತದೆ. ಆಗಲೂ ಸಹ  ಬೇರೆ ಆಯ್ಕೆಯನ್ನು ಹುಡುಕುವ ಬದಲು ಸರಿಪಡಿಸಲು ಪ್ರಯತ್ನಿಸಬೇಕು. ಬೇರೆ ಬೇರೆ ಎಂದು ಹುಡುಕುತ್ತಾ ಹೋದರೆ ಆ ಹುಡುಕಾಟಕ್ಕೆ ಕೊನೆಯೇ ಇರುವುದಿಲ್ಲ.. ಅದರ ಬದಲು ನಮ್ಮನ್ನು ಸರಿಪಡಿಸಿಕೊಂಡು  ಬದುಕಿದರೆ ನೆಮ್ಮದಿ.

ಪರಿಪೂರ್ಣತೆ ಅನ್ನುವುದು ನಮ್ಮ ನಂಬಿಕೆಗಳಿಗೆ ನಾವು ಕಂಡು ಕೊಳ್ಳಬೇಕೆ ವಿನಹ ಇನ್ನೊಬ್ಬರಲ್ಲಿ ಒತ್ತಾಯ ಪಡಿಸುವುದಲ್ಲ. ಒಂಟಿಯಾಗಿ ಬಂದು ಒಂಟಿಯಾಗಿ ಹೋಗುವುದು  ಆದರೆ ಮದುವೆ ಬಂಧನದಿಂದ ಈ ಲೋಕದಲ್ಲಿ ಎರಡು ಜೀವಮಾನವನ್ನು ಒಂದೇ ಜೀವನದಲ್ಲಿ ಕಳೆಯಬಹುದು. ಈ ಭಾಗವನ್ನು ಸೊಗಸಾಗಿ ನಿರ್ವಹಿಸಿ ಜೊತೆಯಾದವರಿಗೆ ಸೊಗಸನ್ನೇ ಕಾಣಿಸಿದರೆ ಅದು ಸಾರ್ಥಕ ಸಮರಸ ಜೀವನ ಅನ್ನಬಹುದು.

2 thoughts on “ಮದುವೆ-ಅಭಿಪ್ರಾಯ

  1. ಮದುವೆ – ಅಭಿಪ್ರಾಯ

    ಜೀವಕ್ಕೆ ಮೌನವು ಎಂದಿಗೂ ಮಹಾ ಪಿಶಾಚಿ , ತನ್ನಿಂದ ತಾನೇ ದೂರವಾಗದೇ ಇರುವಷ್ಟು ಘೋರ ವಿಷಯ .
    ನಾಸ್ತಿಕತೆಯು ಅದೆಷ್ಟು ಕ್ರಿಯಾಶೀಲವಾಗಿದ್ದರೆ ಏನು ಬಂತು ?
    ಆಸೆ ಮತ್ತು ಶಕ್ತಿಯ ಪ್ರತಿರೂಪ ಹೆಣ್ಣು ,
    ಸೂತ್ರ ಮತ್ತು ಗುರಿಯ ಸಮನಾರ್ಥಕ ಗಂಡು ,
    ಹೆಣ್ಣು ಗಂಡಿನ ಬಾಳಿಗೆ ಅಭಿವೃದ್ದಿಯ ಸಂಕೇತವಾಗಿ ಬಂದರೆ , ಗಂಡು ಹೆಣ್ಣಿನ ಬಾಳಿಗೆ ರಕ್ಷಣೆಯ ರೂಪವಾಗಿ ಕಾಣುತ್ತಾನೆ .
    ಆಸೆಗೆ ಸೂತ್ರಗಳು ಎಸ್ಟು ಮುಖ್ಯವೋ ಗುರಿಗೆ ಶಕ್ತಿಯು ಅಷ್ಟೇ ಮುಖ್ಯ .

    ಇದೊಂಥರಾ ಅಂತ್ಯವಿಲ್ಲದ ಕುತೂಹಲಕ್ಕೆ ನಿಂತಲ್ಲಿoದಲೇ ಮುನ್ನುಡಿ ಎಂಬ ಹಾಗೆ …. 👍

    Liked by 1 person

  2. ಜೀವಕ್ಕೆ ಮೌನವು ಎಂದಿಗೂ ಮಹಾ ಪಿಶಾಚಿ, ತನ್ನಿಂದ ತಾನೇ ದೂರವಾಗದೇ ಇರುವಷ್ಟು ಘೋರ ವಿಷಯ.
    ನಾಸ್ತಿಕತೆಯು ಅದೆಷ್ಟು ಕ್ರಿಯಾಪೂರ್ಣವಿದ್ದರೆ ಏನು ಬಂತು ?
    ಆಸೆ ಮತ್ತು ಶಕ್ತಿಯ ಪ್ರತಿರೂಪ ಹೆಣ್ಣು ,
    ಸೂತ್ರ ಮತ್ತು ಗುರಿಯ ಸಮಾನಾರ್ಥಕ ಗಂಡು ,
    ಹೆಣ್ಣು ಗಂಡಿನ ಬಾಳಿಗೆ ಅಭಿವೃದ್ದಿಯ ಸಂಕೇತವಾಗಿ ಬಂದರೆ ಗಂಡು ಹೆಣ್ಣಿನ ಬಾಳಿಗೆ ರಕ್ಷಣೆಯ ರೂಪವಾಗಿ ಕಾಣುತ್ತಾನೆ .
    ಆಸೆಗೆ ಸೂತ್ರವು ಎಷ್ಟು ಮುಖ್ಯವೋ ಗುರಿಗೆ ಶಕ್ತಿಯು ಅಷ್ಟೇ ಮುಖ್ಯ .

    ಇದೊಂಥರಾ ಅಂತ್ಯವಿಲ್ಲದ ಕುತೂಹಲಕ್ಕೆ ನಿಂತಲ್ಲಿಯೇ ಮುನ್ನುಡಿ ಎಂಬಂತೆ ……. 👍

    Liked by 1 person

Leave a comment