ನವೆಂಬರ್ ಸಂಭ್ರಮ

ನವೆಂಬರ್ ತಿಂಗಳೆಂದರೆ ಅಚ್ಚು ಮೆಚ್ಚು. ಕನ್ನಡ ರಾಜ್ಯೋತ್ಸವ ಒಂದು ಕಡೆಯಾದರೆ ಇನ್ನೇನು ಹತ್ತಿರವಾಗುವ ಹುಟ್ಟಿದ ಹಬ್ಬಕ್ಕೆ ಮನಸ್ಸು
ಕಾಯುತ್ತಾ ಕೂತು ಬಿಡುತ್ತದೆ. ಹಾಗೆ ನೋಡಿದರೆ ಎಲ್ಲಾ ಮುಖ್ಯ ಸಂಗತಿಗಳು, ಘಟನೆಗಳು ಈ ತಿಂಗಳಲ್ಲೇ ನಡೆಯುತ್ತದೇನೋ ಎಂದು ಕೂಡ ಒಮ್ಮೊಮ್ಮೆ ಅನಿಸುತ್ತದೆ. ವರುಷವಿಡೀ ಹೋಗಿದ್ದೇ ಗೊತ್ತಾಗುವುದಿಲ್ಲ,  ಅದೇ ಈಗ ಇನ್ನೆರಡು ತಿಂಗಳಲ್ಲಿ ಈ ಸಂವತ್ಸರವೆ ಮುಗಿಯುತ್ತದೆ ಎನ್ನುವಾಗ ಮನಸು ಯೋಚನೆಯಲ್ಲಿ , ಅಥವಾ ಇನ್ನು ಸ್ವಲ್ಪ ಹುಮ್ಮಸ್ಸಿದ್ದರೆ ಏನೋ ಹೊಸ ಚಟುವಟಿಕೆಯಲ್ಲಿ ತೊಡಗುತ್ತದೆ.

ದೀಪಾವಳಿಯ ಸಂಭ್ರಮ ಕೂಡಿಕೊಂಡು ನವೆಂಬರ್ ಗೆ ಒಂಥರಾ ಹೊಸ ಬೆಳಕಿನ ಅದೃಷ್ಟ. ಅಪ್ಪನ ಕೊಡಿಸೊ ಹೊಸ ಬಟ್ಟೆ ,ಪುಸ್ತಕ, ಪಟಾಕಿ ಇವೆಲ್ಲಾ ಮತ್ತೊಂದು ಹೊಸ ಅಂಶವನ್ನು ವ್ಯಕ್ತಿತ್ವಕ್ಕೆ ಸೇರಿಸುತ್ತದೆ. ಪ್ರತಿವರ್ಷವೂ ಹರ್ಷದಾಯಕವೇ ಆಗಿದ್ದ ಈ ತಿಂಗಳು 2012 ರಲ್ಲಿ ಕಹಿ ನೆನಪನ್ನು ಕೊಟ್ಟ ವರ್ಷವೂ ಹೌದು. ಆಗಿದ್ದಿಷ್ಟೇ,  ನವೆಂಬರ್ ಮೊದಲನೇ ವಾರದಲ್ಲಿದ್ದ ಮೂರು ಕಂಪೆನಿಯ ಕ್ಯಾಂಪಸ್ ಸೆಲೆಕ್ಷನ್ ಅಲ್ಲಿ ಸೆಮಿಫೈನಲ್ ಅಲ್ಲಿ ಸೋಲು.  ಅಲ್ಲಿಂದೀಚಿಗೆ ಅಂದರೆ 2015 ವರೆಗೂ ಕೆಲಸ ಸಿಕ್ಕಿ ಎಲ್ಲಾ ಸರಿಯಾದರೂ ಆ ಕಪ್ಪು ಛಾಯೆ ಬಿಡಲಿಲ್ಲ. ಎಲ್ಲೋ ಕಳೆದು ಹೋದ ಕಾನ್ಫಿಡೆನ್ಸ್ ಮೂರು ವರ್ಷ ತುಂಬಾ ಕಾಡಿದ್ದಂತೂ ನಿಜ. ಏನೇ ಗೆದ್ದರೂ ಸೋತದ್ದೇ ಹೆಚ್ಚು ನೆನಪಾಗುವುದು ಹಾಗೆ ಒಂದು ಶೂನ್ಯಭಾವ ಉಳಿದೇ ಇತ್ತು. ಅದೇ ಹೆಚ್ಚು ಹೆಚ್ಚು ಆವರಿಸಿಕೊಂಡಿದ್ದು ಹೌದು.

ಇಂತಹ ಒಂದು ಒಂಟಿತನದ ಬೇಸರದ ಮಧ್ಯಾಹ್ನದ ವೇಳೆಗೆ ಊಟ ಸೇರದೆ,  ಹಸಿವು ಹೆಚ್ಚಾದಾಗ ಹುಟ್ಟಿದ್ದು ಮಳೆಯ ರಂಗೋಲಿ. ಅದೂ ಕೂಡ ನವೆಂಬರ್  ಎರಡರಂದು 2014 ರಲ್ಲಿ. ನಂತರ ಬೇಸರ, ಕಾತರ, ಮನಸಿನ ವ್ಯಾಪಾರವನ್ನೆಲ್ಲಾ ಕಾರಿಕೊಂಡಿದ್ದು ಇದರಲ್ಲೇ. ಏನೋ ಎಲ್ಲಾ ಸಿಕ್ಕಿದರೂ,  ಏನೇ ಸಿಗದಿದ್ದರೂ ಯಾವುದೋ ಮಾಯಾಮೃಗಕ್ಕಾಗಿ ಓಡುತ್ತಲೇ ಇರುವುದು ಎಲ್ಲರ ದೌರ್ಬಲ್ಯ ಅನಿಸುತ್ತದೆ. ಯಾರೊಬ್ಬರಿಗೆ ಕಾಯುವ ಹಪಹಪಿ, ಯಾರನ್ನೋ ನೆನೆಸಿಕೊಳ್ಳುವ ಕನಸು, ಯಾರ ಮಾತಿಗೋ ಅರಳುವ ಹೃದಯ ಕೆಲವೊಮ್ಮೆಯಂತೂ ಯಾರಾದರೂ ಬಂದು ನಮ್ಮ ಬದುಕನ್ನು ಅಪ್ಪಿ ನಡೆಸಲಿ ಎಂದು ಕಾಯುತ್ತೆವೇನೋ.. ಹೀಗೆ ಮರೀಚಿಕೆಯ ಹಿಡಿಯುವ ಓಟದಲ್ಲಿ ಎಲ್ಲವನು ಬಿಟ್ಟು ಇಲ್ಲದುದರೆಡೆಗೆ ತುಡಿಯುತ್ತಲೇ ಇದ್ದೆ. ಆಗ ನನ್ನ ಜೊತೆಗೆ ಇದ್ದುದ್ದು ಮಳೆಯ ರಂಗೋಲಿ. ಎಲ್ಲದರ ಅಂತ್ಯವೂ ಒಂಟಿತನದಲ್ಲೇ ಆಗಬೇಕು , ನೆರಳು ಕೂಡ ಕತ್ತಲಾಯಿತೆಂದರೆ ಜೊತೆ ನಿಲ್ಲಲಾರದು ಅಂಥದರಲ್ಲಿ ನಮ್ಮಂಥ ಮನುಷ್ಯರು ಎಲ್ಲಿ ತನಕ ಜೊತೆಗೆ ಬಂದಾರು? ಅದಕ್ಕೆ ಮಳೆಯ ರಂಗೋಲಿಯೇ ನನಗೆ ಬೆಸ್ಟ್ ಫ್ರೆಂಡ್.

ನನ್ನ ಈ ಫ್ರೆಂಡ್ ಗೆ ಇವತ್ತಿಗೆ ಒಂದು ವರ್ಷ. ಇದರ ಜೊತೆಗೆ ಅಕ್ಕ ಪಕ್ಕದ ಸ್ನೇಹಿತರ ಬ್ಲಾಗು ಕೂಡ ನನಗೆ ತುಂಬಾ ಇಷ್ಟ. ಅವರೆಲ್ಲರಿಗೂ ಇಷ್ಟು ದಿನ ಅದರ ರೋದನೆಯನ್ನ ಕೇಳಿ ತಿದ್ದಿದ್ದಕ್ಕಾಗಿ ನಾನು ಚಿರ ಋಣಿ. ಅದರಲ್ಲೂ ಅಂಬೆಗಾಲು, ಹೆಜ್ಜೆ ಗುರುತು, ಮನದಿಂಗಿತಗಳ ಸ್ವಗತ, ಭಾವ ಶರಧಿ, ಮಂದಾಕಿನಿ ಕಾಲ್ನಡಿಗೆ ಎಲ್ಲರಿಗೂ ತುಂಬಾ ಧನ್ಯವಾದಗಳು.
image

12 thoughts on “ನವೆಂಬರ್ ಸಂಭ್ರಮ

  1. ಏನೇ ಆಗಲಿ ಆ ಕಾಡುವ ನೆನೆಪಗಳು ನಿಮ್ಮೊಳಗಿನ ಒಬ್ಬ ಲೇಖಕಿಯನ್ನು ಪರಿಚಯಿಸಿತಲ್ಲ ಅದೇ ಸಂತೋಷ..

    Liked by 2 people

  2. ಚೆಂದದ ಬರಹ ನೋಡಿ, ಅನಿಸಿದ್ದಿಷ್ಟು ನೋಡಿ ;
    ಅನುಭವವಿರಬೇಕು ವರ್ಷಗಟ್ಟಲೆ ಬರೆಬರೆದು..
    ಬರಿ ಒಂದೇ ವರ್ಷದ ಮಗು – ಅನ್ನುತ್ತಾರಲ್ಲಾ ಮತ್ತೆ ?
    ಭಾರಿ ಸುಳ್ಳುಗಾರರಿರಬೇಕು ಅನಿಸಿದ್ದು ಸುಳ್ಳೇನಲ್ಲಾ! 😊

    ಒಂದು ವರ್ಷದ ಯಾತ್ರೆ ಎನ್ನುತ್ತೀರಿ – ಕಾಲಘಟ್ಟದಲ್ಲಿ ಅದು ತೀರಾ ಸಣ್ಣ ಅವಧಿ. ಆ ಪುಟಾಣಿ ವಿಸ್ತಾರದಲ್ಲೆ ನೀವು ಬ್ಲಾಗಿನಲ್ಲಿ ಹರವಿಕೊಂಡಿರುವ ವಿಸ್ತಾರವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಚಿಕ್ಕದಾಗಿ, ಚೊಕ್ಕವಾಗಿ, ಪ್ರಬುದ್ಧವಾಗಿ ಸಾರದಲ್ಲಿ ಕಟ್ಟಿಕೊಡುವುದು ನಿಮಗೆ ಸಿದ್ಧಿಸಿರುವ ಕಲೆ. ಅದು ಮತ್ತಷ್ಟು ಗಟ್ಟಿಯಾಗುತ್ತ ಹೋಗುತ್ತಿರುವುದು, ಬರಹಗಳಿಂದ ಬರಹಕ್ಕೆ ಹೋಲಿಸಿ ನೋಡಿದಾಗ ಸ್ಪಷ್ಟವಾಗುತ್ತದೆ – ನೀವು ಬೆಳೆಯುತ್ತಿರುವ ಬಗೆಯನ್ನು ತೋರಿಸುತ್ತ. ಹೀಗೆ ಬರೆಯುತ್ತಿರಿ, ಬೆಳೆಯುತ್ತಿರಿ.

    ಈಗ ಒಂದು ವರ್ಷ ತುಂಬಿದ ನಿಮ್ಮ ಅಭಿಮಾನದ ಕೂಸಿಗೆ, ಮತ್ತದನ್ನು ಜತನದಿಂದ ಲಾಲಿಸಿ, ಪೋಷಿಸಿ ಜೀವ ತುಂಬಿದ ನಿಮಗೆ ಮತ್ತು ನಿಮ್ಮ ಕರ್ತೃತ್ವ ಶಕ್ತಿಗೆ ಹೃತ್ಪೂರ್ವಕ ಅಭಿನಂದನೆಗಳು!

    Liked by 4 people

  3. “ಈ ಭೂಮೀಗೆ ಬಂದಾಗ ನಾವು ಎಲ್ಲೋ ಇದ್ದೋರು
    ಈ ನೂರಾರು ಚುಕ್ಕೀಲಿ, ನಾವು ಒಂದು ಆದೋರು
    ಪ್ರತಿ ಜೀವದ ಎದೆ-ಎದೆಯಂಗಳ
    ಅನುರಾಗದ ಗೆರೆ ಬಿಡಿಸೋ ನೆಲ
    ಈ ಜೀವದ ಕಲೆಗೆ ನಮನ”

    ‘ಮಳೆಗಾಲದ ರಂಗೋಲಿ’ … ಕೆಲ ತಿಂಗಳುಗಳ ಹಿಂದೆ ಮೊದಲ್ನೆ ಸಲ ನಾನ್ ನಿನ್ ಬ್ಲಾಗ್ ನೋಡ್ದಾಗ,ರಂಗೋಲಿ ಚಿತ್ರದ ನನ್ನ ನೆಚ್ಚಿನ ಗೀತೆಯ ಈ ಸಾಲುಗಳು ನೆನಪಾಗಿದ್ವು 🙂 ನಿನ್ನ ಪ್ರತಿಯೊಂದು ಕವಿತೆಯೂ ಚೆಂದದ ರಂಗೋಲಿಯಷ್ಟೇ ಸುಂದರ 🙂 ಮಾತಿಗೆ ಸಿಗದ ಶಬ್ದಗಳೆಂಬ ಚುಕ್ಕಿಗಳನ್ನ ಸೇರಿಸಿ ಮತ್ತಷ್ಟು ಮಗದಷ್ಟು ಕವಿತೆ/ಲೇಖನಗಳೆಂಬ ಸೊಗಸಾದ ರಂಗೋಲಿಗಳನ್ನ ರಚಿಸಿ, ಬ್ಲಾಗಿನ ಅಂಗಳವನ್ನ ಸಿಂಗರಿಸುವುದನ್ನು ಮುಂದುವರೆಸು ನೀ. ‘ಅಂಬೆಗಾಲಿಟ್ಟು’ ಅಂಗಳದಲ್ಲೆಲ್ಲಾ ಅಡ್ಡಾಡುತ, ಸೊಗಸಾದ ರಂಗೋಲಿಗಳನ್ನು ನೋಡುತ ಖುಷಿ ಪಡುವೆ ನಾ 🙂
    ‘ಮಳೆಗಾಲದ ರಂಗೋಲಿಗೆ’ ಜನ್ಮದಿನದ ಶುಭಾಶಯಗಳು ಹಾಗು ನಿನಗೆ ಅಭಿನಂದನೆಗಳು 🙂

    Liked by 2 people

    1. Super Kane… idu ishtu mundivareyake nimmelara protsahane Karana … ನಿನ್ನಷ್ಟು ಚಂದ ಹೇಳಕೆ ಬರಲ್ಲ .. ಆದರೆ ತುಂಬಾ ತುಂಬಾ ಥ್ಯಾಂಕ್ಸ್ ಕಣೆ

      Liked by 1 person

    2. ನೂರಾರು ಭಾವನೆಗಳ ಒಡನಾಟವಿಲ್ಲಿ…
      ಅವೆಲ್ಲ ಚುಕ್ಕಿಗಳಾಗಿ ಮನದ ಮುಗಿಲೇರಿದಾಗಿ..
      ಕಲೆಯೆಂಬ ಅನಂತದಾಗಸ ರಾತ್ರಿಯ ಆಕಾಶದಷ್ಟೇ ಸುಂದರ…

      Inspired by Madhu’s lines 😉 ಹೀಗೆ ಮುಂದುವರೆಸು ಭಾವನೆಗಳ ರಂಗೋಲಿಯನ್ನ ಮನು… ❤

      Liked by 2 people

Leave a comment