ಹೂವು – ಹಣ್ಣು

ಕೆಂಪು ಸಂಜೆಯ ಮರದ ತಿರುವಿನಲಿ ಮಂದ ಮಾರುತದ ತಂಪಾದ ಬೀಸಿನಲಿ ಮಳೆನಿಂತ ಹನಿಗಳ ಜೋರು ಮಾತಿನಲಿ ಮಿಂದ ಎಲೆಗಳ ಸಮೂಹ ನೃತ್ಯದಲಿ ಲಲನೆ ಬಂದಳು ಬಿಂಕದಿಂದ ಒದ್ದೆಯಾಗಿ ಕಣ್ಣ ರೆಪ್ಪೆ ಅರಸುತಿರಲು ಹೂವಿಗಾಗಿ ಅದೊಂದು ಪುಷ್ಪ ಕರೆಯಿತು ಸೊಗಸಾಗಿ ಓಡಿದಳು ಅಂದಕ್ಕೆ ಬಣ್ಣಕ್ಕೆ ಮರುಳಾಗಿ ಮಾಯೆಯೋ ಮೋಹವೋ ಆವರಿಸಿ ಅವಸರದಿ ಕೀಳಲು ಹೋದಳು ತವಕಿಸಿ ಕೈತಾಕಿದ ಕ್ಷಣವೇ ಹೂ ಕದಲಿ ವಿಕಸಿಸಿ ನುಂಗಿ ಹಾಕಿತಂತೆ ಅವಳನು ಮಂತ್ರಿಸಿ ಹೋಗದಿರಿ ಮಳೆನಿಂತಾಗ ಸಂಜೆ ಅಲ್ಲಿ ಕಾಯುತಿಹಳು ಮಾಯೆ ಅದೃಶ್ಯದಲ್ಲಿ … Continue reading ಹೂವು – ಹಣ್ಣು

Advertisements

ಬಿಟ್ಟು ಹೋದ ಸಾಲುಗಳು

*************************** ​ಪುಟಗಟ್ಟಲೆ ಓದಿದರೂ ಮನಸಿಗೆ ಅಂಟಿಕೊಳ್ಳುವುದು ಅನುಭವಿಸಿದ ಸಾಲು ಮಾತ್ರ *************************** ನಗರಗಳಲ್ಲಿ ಕರೆಂಟ್ ಹೋದಾಗ ಮಾತ್ರವೇ ಜನ ಜೀವಿಸುತ್ತಾರೆ *************************** ಬೆವರಿನ ಹನಿಗಳೇ ಕಂಬನಿಯನ್ನು ಒರೆಸುವುದು *************************** ಬರವಣಿಗೆ ಕಲೆಯಲ್ಲ ಬದುಕಿನ ಕಲೆಗಳ ಚಿತ್ರ *************************** ಪ್ರೀತಿಯ ಮಹತ್ವಾಕಾಂಕ್ಷೆಯೇ ದ್ವೇಷ *************************** ಪ್ರೀತಿಗಾಗಿ ಬದುಕು ಮದುವೆ ನಂತರ ಬದುಕಿಗಾಗಿ ಪ್ರೀತಿ *************************** ಬೆಳಕಿನಲ್ಲಿ ಒಳಗುರುಡು ಕತ್ತಲೆಯಲ್ಲಿ ಜ್ಞಾನೋದಯ ***************************

ಸುಭಾಷಿತ

ಬೆಳಗೆದ್ದು ಚಳಿಯ ಮಡಿಕೆ ಸರಿಸಿ ಮಿಂದು ಮಡಿಯುಟ್ಟು ತುಳಸಿಯ ಸುತ್ತ ರಂಗೋಲಿ ಸುರಿಸುತ್ತಿದ್ದ ಕೈ ಬಳೆಗಳ ನಾದ ನಸುಕಿನ ಘಂಟಾನಾದದ ಜೊತೆಗೆ ಮಜ್ಜಿಗೆ ಕಡೆಯುವ ಅಜ್ಜಿಯ ಕೊರಳಲಿ ಅದೆಂತೋ ಇತಿಹಾಸ ಹೇಳುವ ಜನಪದ ಬೆಳಗೆದ್ದು ಹಬ್ಬದಂತೆ ಕಲರವ ದಿನವೂ ಸೂರ್ಯನೇ ಅವಸರದಿ ಬರುವ ಸಡಗರಕೆ ತಾನೂ ಅನುಭವಿಸಲು ಭುವಿಯ ಬಂಧ