​ಮಳೆಗಾಲದ ಕಥೆಗಳು – ೧

ಏಕಾತನತೆಯಿಂದ ಒಂದೇ ಸಮನೇ ಸುರಿಯುತ್ತಿದ್ದ ಮಳೆಗೆ ರೋಸಿ ಹೋಗಿದ್ದಳು ಪರಿಮಳ. ಮೂಲೆ ಕೋಣೆಯಲ್ಲಿ ಬೆಚ್ಚಗೆ ಮಲಗಿ ನಿದ್ದೆಯಿಂದ ಈಗಷ್ಟೇ ಎದ್ದಿದ್ದಳು. ಏನೋ ಮಲಗಿದಷ್ಟೂ ನಿದ್ದೆ, ಬೆಳಕೇ ಕಾಣದ ಮಬ್ಬು ಮಬ್ಬು ದಿನಗಳನ್ನು ದೂಡಿ ಅವಳಿಗೂ ಸಾಕಾಗಿತ್ತು. ಎದ್ದು ಚಳಿಯಲ್ಲಿ ನಡುಗುತ್ತಾ ಬಂದು ಟಿವಿ ಹಾಕಿದಳು. ಉಹು , ಕರೆಂಟಿಲ್ಲ, ಸರಿಯೆಂದು ಒಂದು ಲೋಟ ಕಾಫಿ ಮಾಡಿಕೊಂಡು ಬಂದು ಕೂತಳು. ಗಂಟೆ ಇನ್ನೂ ಮಧ್ಯಾಹ್ನ ಮೂರುವರೆ ಮನೆಯವರೆಲ್ಲಾ ಏಳುವುದು ಐದು ಗಂಟೆಗೆ. ಮಾಡಲು ಬೇರೆನು ಕೆಲಸವಿಲ್ಲದೆ ಪೇಪರ್ ತಂದು … Continue reading ​ಮಳೆಗಾಲದ ಕಥೆಗಳು – ೧

Advertisements

ಗ್ಯಾಸಲೈಟಿನ ಪುರಾಣ

ಅಂತೂ ಇಂತೂ ಜಗಳ ಆಡಿ ರಿಮೋಟ್ ಸಿಕ್ಕಿತ್ತು. ಇನ್ನೇನು ಚಾನೆಲ್ ಚೇಂಜ್ ಮಾಡಬೇಕು ಅನ್ನುವಷ್ಟರಲ್ಲಿ ಕರೆಂಟ್ ಹೋಯ್ತು. ಇನ್ನು ಹೇಗಿದ್ರೂ ಬೆಳಗಿನ ತನಕ ಕರೆಂಟ್ ಬರಲ್ಲ. ಟಿವಿ ನೋಡ್ತಾ , ಅಡಿಕೆ ಸುಲಿತಾ ಇದ್ದ ಸಿದ್ದಹಸ್ತರು ಈಗ ಕತ್ತಲಲ್ಲೇ ಶಬ್ಧ ಮುಂದುವರಿಸಿದ್ದರು. ಕತ್ತಲಲ್ಲಿ ಗ್ಯಾಸ್ ಲೈಟಿಗಾಗಿ ತಡಕಾಡುತ್ತಾ ನಾನು ಹೊರಟೆ. ಅಮ್ಮ ಹಿಂದಿನಿಂದ ಕತ್ತಿ ನಿಧಾನ ಎಂದು ಹೇಳುತ್ತಲೇ ಇದ್ದಳು. ಆದರೆ ನನಗೆ ಎಲ್ಲರ ಜಾಗ, ಎಲ್ಲರ ಕತ್ತಿ ಸ್ಪಷ್ಟವಾಗಿ ಗೊತ್ತು. ಜಾರುವ ಸಿಪ್ಪೆ ಮೇಲೆ ಉರುಳಾಡದೆ … Continue reading ಗ್ಯಾಸಲೈಟಿನ ಪುರಾಣ

ಒಮ್ಮೆ ಹೀಗೆ ಬಸ್ಸಲ್ಲಿ….

ಊರು, ಮನೆಯೆಂದರೆ ಯಾರಿಗೆ ಇಷ್ಟವಿಲ್ಲ. ಅದೇನೇ ಜಗಳ, ಮುನಿಸು ಇದ್ದರೂ ನಮ್ಮ ಮನೆಗೆ, ಊರಿಗೆ ಮನಸು ಸದಾ ಹಾತೊರೆಯುತ್ತಲೇ ಇರುತ್ತದೆ. ಹೀಗೆ ನನಗೂ ನನ್ನ ಊರೆಂದರೆ ತುಂಬಾ ಸೆಳೆತ. ಇದಕ್ಕೆ ಕಾರಣ ಅಲ್ಲಿರುವ ಶಾಂತಿಯೋ, ಕೆಲಸವಿಲ್ಲದೆ ಆರಾಮಾಗಿ ಕಾಲಹರಣ ಮಾಡಬಹುದೆಂದೋ, ಅಮ್ಮನ ರುಚಿ ಕಟ್ಟಾದ ಅಡುಗೆ, ತಿಂಡಿಗಳೋ, ಅಪ್ಪನ ಸುಪರ್ದಿಯೊಳಗಿರುವ ಬೆಚ್ಚನೆಯ ಸುಖವೋ, ನನ್ನ ಮುದ್ದಿನ ಬೆಕ್ಕೋ ಹೀಗೆ ಯಾವುದೆಂದು ನನಗೇ ಇನ್ನು ಸ್ಪಷ್ಟವಾಗಿ ಗೊತ್ತಿಲ್ಲ. ಒಟ್ಟಿನಲ್ಲಿ ಹಾಳು ಬೆಂಗಳೂರಿಗೆ ಅತೀ ತದ್ವಿರುದ್ದವಾಗಿ ನಮ್ಮೂರು, ಮನೆ ನಂಗಿಷ್ಟ. … Continue reading ಒಮ್ಮೆ ಹೀಗೆ ಬಸ್ಸಲ್ಲಿ….