ಬರವಣಿಗೆ

ಶಾಯಿ ಸುರಿದಿದೆ ಲೇಖನಿಯಿಂದ ಆಕಾಶದಂತ ಬಿಳಿ ಹಾಳೆಯೊಳಗೆ ಭಾವವೇ ಭಾಷೆಯಾಗಿ ಜಾರುತಿದೆ ಮನದ ರಹಸ್ಯ ಬಯಲಾಗುತ್ತಾ ಬರೆಯುವ ಯೋಚನೆ ಎಲ್ಲಿದೆ ಬರೆಸುವ ಮಾಯೆಯೇ ಇದರಲ್ಲಿದೆ ತಾಳದೆ ಕೇಳದೆ ಮಾತನಾಡದೆ ತಾನಾಗಿ ಪದಗಳಾದ ಪದ್ಯವದು ಏಕಾಂತದಿ ಕೇಳುಗರಿಲ್ಲದೆ ಕೂತರೆ ಗುಟ್ಟಾಗಿ ಬಂದು ಬರೆಸಿಕೊಂಡು ಹೋಗಿ ಬಿಡುವುದೇ ಈ ಕವನ ಹೇಗೆ ಹೇಳಲಿ ಬಿಡಿಸಿ ಇದನ್ನ ಶುರುವಾಗಿ ನೋವ ಎಳೆಹಿಡಿದು ಬಿಡಿಸಿ ಬರೆಸಿ ತಿದ್ದಿ ಸರಿಪಡಿಸಿ ಮುಗಿದಾಗ ಸಂತೈಸುವ ಬೆರಳು ಕವಿಯನ್ನೇ ಕಾಯುವ ನೆರಳು

Advertisements

ಕಾಡಿನ ಕಥೆ

ಕತ್ತಲೆಯ ಸೆರಗಲ್ಲಿ ಗಾಢ ಚಿತ್ರ ಬಿಡಿಸಿತ್ತು ಮನೆಯ ಹಿಂದಿನ ಕಾಡು ಮಧ್ಯರಾತ್ರಿ ಕಾಡುತಿತ್ತು ಕರೆದಂತೆ ಕೇಳುವ ಅಜ್ಞಾತ ಹಕ್ಕಿಯ ಕೂಗು ಸೂರ್ಯ ಕಿರಣವು ತಾಕದಂತೆ ಹಬ್ಬಿತ್ತು ರುದ್ರ ರಮಣೀಯವದು ಕಾಲವು ಕಳೆದು ಜನರೆಲ್ಲಾ ಹೆಚ್ಚಾಗಿ ಕಾಡೊಳಗೆ ತೂರಿದರು ಕಾಡಿನ ಹಾಡಲ್ಲಿ ಹಕ್ಕಿಯ ಕೂಗಿಲ್ಲವೀಗ ಬರೀ ಕಡಿಯುವ ಸದ್ದು ಮನೆಯಲ್ಲೇ ಕೇಳಿ ಮಂಚ ಮಾತಾಡುತ್ತದೆ ಕಾಡಿನ ಎಲುಬುಗಳ ಹೊತ್ತು

ಇದ್ದಿದ್ದನ್ನ ಇದ್ದಂಗೆ ಹೇಳಿದ್ರಾ?

ಬಹಳಷ್ಟು ಸರಿ ಹಾಗಾಗತ್ತೆ. ಹೇಳಬೇಕಾಗಿದ್ದಕ್ಕಿಂತ ಚೂರು ಜಾಸ್ತಿ ಹೇಳುತ್ತೇವೆ. ಖುಷಿಗೋ, ಖುಷಿ ಪಡಿಸಲಿಕ್ಕೋ, ಗೊತ್ತಿಲ್ಲದೆಯೋ ಹಾಗೆ ಆಗಿರತ್ತೆ. ಅದನ್ನು ಸುಳ್ಳು ಅನ್ನಲು ಆಗುವುದಿಲ್ಲ, ಉತ್ಪ್ರೇಕ್ಷೆ ಮಾಡಿರುತ್ತೇವೆ ಅಷ್ಟೆ. ಇದು ಹೇಗೆ, ಎಲ್ಲಿ ಯಾರಿಗೆ ತೊಂದರೆಯಾಗುತ್ತದೆ ಎಂದು ಊಹಿಸಲು ಕೂಡ ಆಗುವುದಿಲ್ಲ, ಆದರೆ ಕೇಳುಗನ ಮನಸಿನ ಯಾವುದೋ ಮೂಲೆಗೆ ಪರಿಣಾಮ ಬೀರುವುದಂತೂ ಹೌದು. ಇನ್ನು ಕೆಲವು ಸಲ ತೀರ ಉಲ್ಟಾ.. ಹೇಳ ಬೇಕಾದುದನ್ನು ಪೂರ್ತಿ ಹೇಳಿರುವುದಿಲ್ಲ. ಯಾವುದೋ ಎಳೆಯಿಂದ ಶುರು ಮಾಡಿ ಅದೇಕೋ ಸಾಕೆನಿಸಿ‌ ನಿಲ್ಲಿಸಿ ಬಿಡುತ್ತೇವೆ. ಇದನ್ನು … Continue reading ಇದ್ದಿದ್ದನ್ನ ಇದ್ದಂಗೆ ಹೇಳಿದ್ರಾ?