ತರ್ಕದ ಬಗ್ಗೆ ತರ್ಕ

ಮಳೆಗಾಲದ ತಂಪು ಹೊತ್ತಿನಲ್ಲಿ ಸಂಜೆಯ ಸಣ್ಣ ಕಲರವದಲ್ಲಿ ಸಿಕ್ಕ ಪುಸ್ತಕವೇ ತರ್ಕ. ಅದೇನೋ ಅದರ ಆರಂಭವೇ ತುಂಬಾ ಹಿಡಿಸಿಬಿಟ್ಟಿತು. ಸ್ವಲ್ಪ ಹೊತ್ತು ಅದರಲ್ಲಿ ಕಳೆದು ಹೋದ ಅರಿವೇ ಆಗಲಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಗುವ ನಿರೂಪಣೆ ಶ್ರೀರಂಗಪಟ್ಟಣದ ಗಾಂಜಾಂನಲ್ಲಿಯೇ ನಮ್ಮನ್ನು ಹಿಡಿದುಕೊಂಡು ಬಿಡುತ್ತದೆ. ಅಲೌಕಿಕತೆ ಮೊದಲಿಂದಲೂ ಕುತೂಹಲಕರವಾಗಿ ಜೊತೆಯಾಗುತ್ತದೆ. ಆತ್ಮ , ಪರಮಾತ್ಮ, ಆಧ್ಯಾತ್ಮ, ವಿಜ್ಞಾನ ಎಲ್ಲವನ್ನೂ ಸರಳವಾಗಿ, ಸೌಮ್ಯವಾಗಿ ಹೇಳಿದ್ದಾರೆ ಅನಿಸಿತು. ಶ್ರೀ ಚಕ್ರಾರಾಧನೆ ಇದರ ಮುಖ್ಯ ಭೂಮಿಕೆ , ಅದರ ಬಗ್ಗೆ ವೈಜ್ಞಾನಿಕವಾಗಿ, ಧಾರ್ಮಿಕವಾಗಿ ಸಾಕಷ್ಟು … Continue reading ತರ್ಕದ ಬಗ್ಗೆ ತರ್ಕ

Advertisements

ನಾವಲ್ಲ

ಸೇತುರಾಮ್ ಗೊತ್ತಾ ನಿಮಗೆ ? ಸೀತಾರಾಮ್ ಧಾರಾವಾಹಿಗಳಲ್ಲಿ ಮೊದಲು ನಟಿಸುತ್ತಿದ್ದರು. ಅವರ ಸಂಭಾಷಣೆಯ ಧಾಟಿ ತುಂಬಾ ವಿಶಿಷ್ಟ ಮರೆಯಲು ಸಾಧ್ಯವೇ ಇಲ್ಲ. ಆಮೇಲೆ 'ಮಂಥನ' ಮುಂತಾದ ಧಾರವಾಹಿಗಳನ್ನು ನಿರ್ದೇಶಿಸಿದರು ಕೂಡ. ಇವರ ಒಂದು ಪುಸ್ತಕ  'ನಾವಲ್ಲ'. ಅವರ ಸಂಭಾಷಣೆಯಂತೆ ಇದೂ ಇರುತ್ತದೆ ಅಂದುಕೊಂಡು ಮೊದಲು ಓದಿರಲಿಲ್ಲ. ಆದರೆ ಯಾವಾಗ ಫೇಸ್ ಬುಕ್ಕಿನಲ್ಲಿ ಅದರ  ಕಲರವ ಜಾಸ್ತಿಯಾಯಿತೋ ಆಗ ಕುತೂಹಲದಿಂದ ಓದಿದೆ. ಇದು ಆರು ಕಥೆಗಳ ಒಂದು ಕಥಾ ಸಂಕಲನ. ಮೊದಲ ಕಥೆಯೇ ಮೋಕ್ಷ. ಮಠದಲ್ಲಿ ಬಚ್ಚಿಟ್ಟ ರಾಜಕೀಯದ … Continue reading ನಾವಲ್ಲ

ಗ್ರಸ್ತ

ಗ್ರಸ್ತ ಅಂದರೆ ಆವರಿಸುವುದು ಎಂದು ಅರ್ಥ ಅಲ್ಲವೇ? ಈ 'ಗ್ರಸ್ತ'ವೂ ಹಾಗೆ ಆವರಿಸಿ ಬಿಡುತ್ತದೆ. ಮೊದಲಿಗೆ ಓದಲು ಶುರುವಿಟ್ಟಾಗ ಒಂದೇ ಗುಟುಕಿಗೆ ಪುಟ ತಿರುವಿ, ಅವಿನಾಶನ ಸುತ್ತ ಗಿರಕಿ ಹೊಡೆದು ಕೊನೆಯ ನಾಲ್ಕು ಪುಟವಿದ್ದಾಗ ನಿಂತು ಬಿಟ್ಟಿತು. ಅದೆಂಥ ಹೋರಾಟದ ಬದುಕು, ತೀರ ಬೆತ್ತಲಾದ ಸಂಬಂಧಗಳು, ಜೀವನದ ಇನ್ನೊಂದು ಮುಖವನ್ನೇ ದಿಟ್ಟಿಸಿ ನೋಡಿದಂತ ಅನುಭವ. ಏಕೋ ನಾಲ್ಕು ಪುಟ ಓದಲಾಗದೆ ಸ್ವಲ್ಪ ಸಮಯ ತೆಗೆದುಕೊಂಡು(ಅರಗಿಸಿಕೊಂಡು) ಕೊನೆಗೂ ಕೊನೆ ಮುಟ್ಟಿತು. ಬದುಕಿನಲ್ಲಿ ಕಥೆಯಾಗಲಿ, ರೋಮಾಂಚನವಾಗಲಿ, ಹಾಸ್ಯವಾಗಲಿ ಸಿನಿಮಾಗಳ ಹಾಗೆ … Continue reading ಗ್ರಸ್ತ