ಪರಮಹಂಸರ ದೀಪದ ಬೆಳಕಿನಲ್ಲಿ

ಅದೆಷ್ಟೋ ಸಾಧುಗಳು ಸಂತರು ಸಂನ್ಯಾಸಿಗಳು, ಯೋಗಿಗಳು ಭರತಭೂಮಿಯಲ್ಲಿ ಬಾಳಿದ್ದಾರೆ. ಬದುಕಿನ ಆಧ್ಯಾತ್ಮದ ಮಜಲನ್ನು ತಿಳಿದುಕೊಳ್ಳಲು, ಅದರಲ್ಲಿ ಸಾಗಲು ಪ್ರಯತ್ನಿಸಿದ್ದಾರೆ. ಇಂತಹ ಭಕ್ತಿ ಪರಂಪರೆಯಲ್ಲಿ ಚಿರಸ್ಥಾಯಿಯಾಗಿ, ಧ್ರುವ ನಕ್ಷತ್ರದಂತೆ ಮಿನುಗುತ್ತಿರುವವರು ಶ್ರೀ ರಾಮಕೃಷ್ಣ ಪರಮಹಂಸರು. ಪರಮಹಂಸ ಎನ್ನುವುದೇ ಸಂನ್ಯಾಸ ಜೀವನದಲ್ಲಿ ಒಂದು ಪರಮೋಚ್ಛ ಸ್ಥಾನ. ಅದನ್ನು ಮುಟ್ಟಿದವರು ಬೆರಳೆಣಿಕೆಯಷ್ಟು ಮಾತ್ರ. ಇಂತಹ ಮಹತ್ತರ ಪಾತ್ರದಲ್ಲಿರುವ ಶ್ರೀ ರಾಮಕೃಷ್ಣರ ಜೀವನ ಒಂದು ದಾರಿ ದೀಪ. ಅವರು ಕಂಡು ಕೊಂಡಿರುವ ಸತ್ಯಗಳು ಕೆಲವೊಮ್ಮೆ ಜೀವನ ಕತ್ತಲೆ ಅನಿಸಿದಾಗ ಬೆಳಕು ಚೆಲ್ಲುವ ಪ್ರಕಾಶಮಾನ ಕಿರಣಗಳಂತೆ.

ಅವರು ಹೇಳುವಂತೆ, ಒಂದರ ನಂತರ ಅದೆಷ್ಟು ಸೊನ್ನೆ ಹಾಕಿದರೂ ಅದರ ಬೆಲೆ ಹತ್ತು, ನೂರು, ಸಾವಿರ ಹೀಗೆ ಕೋಟಿ ಕೋಟಿಯಾಗುತ್ತದೆ‌. ಅದೇ ಆ ಒಂದನ್ನು ತೆಗೆದು ಬಿಟ್ಟರೆ ಬರೀ ಶೂನ್ಯವೇ ಉಳಿಯುತ್ತದೆ. ಹೀಗೆ ಮೊದಲು ಒಂದು ನಂತರ ಹಲವು. ಮೊದಲು ದೇವರು ನಂತರ ಜೀವ ಜಗತ್ತು ಎಲ್ಲವೂ. ಇಂತಹ ದೇವರನ್ನು ನೋಡಲು ಏಕಾಗ್ರ ನಿಷ್ಠೆ ಬೇಕೆಂದು ಹೇಳುತ್ತಾರೆ. ಮೊದಲು ಮನುಷ್ಯನ ದಿವ್ಯತೆಯನ್ನು ಅರ್ಥ ಮಾಡಿಕೋ. ದೇವರಿಗಾಗಿ ಮನಸ್ಸು ಮಿಡಿದು ಕಣ್ಣೀರು ಬಂದುದೇ ಆದರೆ ಅವನನ್ನು ನೋಡಬಹುದು. ಆದರೆ ಲೌಕಿಕ ಜೀವನದಲ್ಲಿ ಜನರು ಭೋಗ ಜೀವನ ಬಯಸುತ್ತಾರೆಯೇ ಹೊರತು ದೇವರಿಗಾಗಿ ಕಣ್ಣೀರು ಹಾಕಿ ನೋಡಲೇ ಬೇಕೆಂದು ಯಾರು ಬಯಸುವುದಿಲ್ಲ ಅನ್ನುತ್ತಾರೆ.

ಎಣ್ಣೆ ತಗುಲಿದ ಕಾಗದದ ಮೇಲೆ ಹೇಗೆ ಬರೆಯಲು ಸಾಧ್ಯವಿಲ್ಲವೋ ಹಾಗೆಯೇ ಇಂದ್ರಿಯ ಭೋಗಲಾಲಸೆಯಿಂದ ಕೆಟ್ಟು ಹೋದ ಮನಸಿನಿಂದ ಭಗವಂತನ ಧ್ಯಾನವೂ ಸಾಧ್ಯವಿಲ್ಲ. ತನ್ನಿಂದ ಹೊರಗೆ ದೇವರನ್ನು ಹುಡುಕವುದು ಅಜ್ಞಾನ. ತನ್ನೊಳಗೆ ದೇವರನ್ನು ಕಂಡುಕೊಳ್ಳುವುದು ಜ್ಞಾನ. ಹಾಗಾಗಿ ಪ್ರಾಪಂಚಿಕವಾಗಿ ಬದುಕುವುದು ಹೇಗೆಂದು ಕೂಡ ಅವರು ಹೇಳುತ್ತಾರೆ. ಮಾತು ಮತ್ತು ಆಲೋಚನೆ ಒಂದೇ ಆಗಿರುವುದೇ ಸಾಧನೆಯೆಂದು ಹೇಳುತ್ತಾರೆ. ತಮ್ಮ ಮನಸ್ಸನ್ನು ತಾವು ವಂಚಿಸದೇ ಇರುವುದೇ ಮುಕ್ತಿ. ರೇಷ್ಮೆ ಹುಳು ತನ್ನ ನೂಲಿನಲ್ಲಿಯೇ ಬಂಧಿಯಾಗುವಂತೆ ಮನುಷ್ಯ ತನ್ನ ಕರ್ಮಗಳಲ್ಲಿ ಬಂಧಿಯಾಗುತ್ತಾನೆ. ಒಬ್ಬನಿಗೆ ಪಿಶಾಚಿ ತನ್ನನ್ನು ಮೆಟ್ಟಿಕೊಂಡಿದೆ ಎಂದು ತಿಳಿದು ಬಿಟ್ಟರೆ ತಕ್ಷಣ ಅದು ಅವನನ್ನು ಬಿಟ್ಟು ಹೋಗುವುದು ಹಾಗೆಯೇ ಒಮ್ಮೆ ಮಾಯೆಯೆಂದು ತಿಳಿದು ಬಿಟ್ಟರೆ ಭ್ರಾಂತಿ ಇಳಿಯುವುದು‌.

ಆತ್ಮ ಸೂಜಿಯಂತೆ ಪರಮಾತ್ಮ ಅಯಸ್ಕಾಂತದಂತೆ. ಪರಮಾತ್ಮ ಆತ್ಮನನ್ನು ಸೆಳೆಯುತ್ತದೆ‌‌ . ಆದರೆ ಯಾವಾಗ ಆತ್ಮನನ್ನು ಕಾಮ ಕಾಂಚನವೆಂಬ ಮಣ್ಣು ಮೆತ್ತಿಕೊಳ್ಳುತ್ತದೆಯೋ ಆಗ ಆತ್ಮ ಪರಮಾತ್ಮನಿಂದ ದೂರವಾಗುತ್ತಾನೆ. ಈ ಜಗತ್ತಿನ ಮೋಹವನ್ನು ತೊರೆದು ಸಕಲ ಕಲಹಗಳಿಗೆ ಕಾರಣವಾದ ಸ್ವಾರ್ಥವನ್ನು ತ್ಯಜಿಸಿ ಸಚ್ಚಿದಾನಂದ ರೂಪವನ್ನು ಸಾಕ್ಷಾತ್ಕರಿಸಿಕೊಂಡ ಶ್ರೀ ರಾಮಕೃಷ್ಣರು ಯಾವಾಗಲು ಇಂದ್ರಿಯ ಲೋಭಗಳಿಂದ ದೂರವಿರಲು ಹೇಳುತ್ತಿದ್ದರು.

ಕೇವಲ ಕೇಳುವುದರಿಂದ ಅಥವಾ ಓದುವುದರಿಂದ ಏನೂ ಪ್ರಯೋಜನವಿಲ್ಲ‌. ಕೆಲವರು ಹಾಲಿನ ಬಗ್ಗೆ ಕೇಳಿರುತ್ತಾರೆ. ಕೆಲವರು ಹಾಲನ್ನು ನೋಡಿರುತ್ತಾರೆ ಆದರೆ ಕೆಲವರಷ್ಟೇ ಹಾಲನ್ನು ಕುಡಿದಿರುತ್ತಾರೆ. ಅಂತೆಯೇ ಶಾಸ್ತ್ರಗಳನ್ನು ಓದಿದರೆ ಕೇಳಿದರೆ ಸಾಲದು ಅದನ್ನು ನಿಷ್ಠೆಯಿಂದ ಅಳವಡಸಿ ಕೊಂಡರಷ್ಟೇ ಫಲ. ಹಲಸಿನ ಹಣ್ಣನ್ನು ಹೆಚ್ಚುವ ಮೊದಲು ಕೈಗೆ ಎಣ್ಣೆ ಹಚ್ಚಿ ಕೊಳ್ಳುವಂತೆ ಪ್ರಾಂಪಚಿಕದಲ್ಲಿ ಭಕ್ತಿಯೆಂಬ ಎಣ್ಣೆಯಿದ್ದರೆ ಕಾಮ, ಕಾಂಚನವನ್ನು ದೂರ ಇಡಬಹದು‌.

ತಾನೊಬ್ಬ ಬುದ್ದಿವಂತ ಎಂದು ತಿಳಿದು ಕೊಳ್ಳುವುದು ಮೂರ್ಖತನ. ಕಾಗೆ ಒಂದು ದೃಷ್ಟಿಯಿಂದ ಬಹಳ ಚುರುಕು ಆದರೆ ಹೇಸಿಗೆಯ ಮೇಲೆಯೆ ಜೀವಿಸ ಬೇಕಾಗಿದೆ. ಹೀಗೆಯೇ ಸುಳ್ಳು ಹೇಳುವುದನ್ನು ಯಾರು ಪ್ರಾಪಂಚಿಕ ಬುದ್ದಿವಂತಿಕೆಯೆಂದು ತಿಳಿದು ಕೊಂಡಿರುತ್ತಾರೋ ಅದು ಕೇವಲ ಹೀನ ಉಪಾಯಕ್ಕಿಂತ ಮೇಲಲ್ಲ.

ರಾಮಕೃಷ್ಣರ ಶ್ರೇಷ್ಠ ಶಿಷ್ಯರಾದ ವಿವೇಕಾನಂದರು ಹೇಳುವಂತೆ ಸಿದ್ದಾಂತಗಳನ್ನು ಲೆಕ್ಕಿಸಬೇಡಿ ಮೂಢ ನಂಬಿಕೆಗಳನ್ನು ಲೆಕ್ಕಿಸಬೇಡಿ. ಪ್ರತಿಯೊಬ್ಬ ಮನುಷ್ಯನ ಜೀವನದ ಸಾರವಾದ ಆಧ್ಯಾತ್ಮದೊಂದಿಗೆ ಇವನ್ನು ಹೋಲಿಸಿದರೆ ಇದಕ್ಕೆ ಬೆಲೆಯಿಲ್ಲ. ಮನುಷ್ಯನಲ್ಲಿ ಇದು ಹೆಚ್ಚು ವಿಷದವಾಗಿ ಸ್ಪಷ್ಟವಾದಷ್ಟು ಸತ್ಕಾರ್ಯ ಸಾಧನೆಗೆ ಅವನು ಮಹಾಶಕ್ತಿಯಾಗುತ್ತಾನೆ.ಮೊದಲು ಅದನ್ನು ಸಂಪಾದಿಸಿ ಸಾಧಿಸಬೇಕಿದೆ. ಪರಮಹಂಸರ ಜೀವನದ ಸಾರವನ್ನು ಅರಿತು ಅಳವಡಿಸಿಕೊಂಡು ಬೆಳೆಯಬೇಕಿದೆ.

Advertisements

3 thoughts on “ಪರಮಹಂಸರ ದೀಪದ ಬೆಳಕಿನಲ್ಲಿ

  1. ಮದಡಿಯನ್ನು ಎರಡನೇ ತಾಯಿ ಎಂತಂದ ಮಹಾಪುರುಷ,
    ಯಾವ ಪುಸ್ತಕದಿಂದ ಇಷ್ಟೆಲ್ಲ ವಿವರ ತಿಳಿದುಕೊಂಡಿರಿ ಅನ್ನೋದನ್ನು ಹೇಳಿದರೆ ಚೆಂದ.

    Liked by 1 person

  2. ರಾಮನೂ, ಕೃಷ್ಣನೂ ಆದ ಪರಮಹಂಸರಿಂದಲ್ಲವೇ ವೀರಸನ್ಯಾಸಿಯೋವ್ರವರು ಭರತ ಖಂಡಕ್ಕೆ ಲಭಿಸಿದ್ದು. ನರೇಂದ್ರನಿಗೆ ದೇವರನ್ನು ತೋರಿಸಿ ವಿವೇಕಾನಂದರನ್ನಾಗಿ ಮಾಡಿದ್ದು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s