ಪುಸ್ತಕದಿನದಂದು…

ಒಂದು ಕಾಲ ಇತ್ತು, ಚಂದಮಾಮ, ಬಾಲಮಂಗಳ, ಬಾಲಮಂಗಳ ಚಿತ್ರಕಥಾ, ತುಂತುರು, ಸುಧಾ, ತರಂಗ, ಮಂಗಳ, ಕಸ್ತೂರಿ, ಚಂಪಕ, ಅಮರ ಕಥಾ ಚಿತ್ರ ಕೋಶ ಹೀಗೆ ದಿನಬೆಳಗು ಬರೀ ಈ ಪುಸ್ತಕಗಳ ಪುಟಗಳಲ್ಲೇ ತಿರುವುತ್ತಿತ್ತು. ಅದೆಲ್ಲಿಂದ ಬಂದ ಆವೇಶವೋ ಅಂಗಡಿಯಿಂದ ತಂದ ಪೊಟ್ಟಣವನ್ನೂ ಸಹ ಬಿಡಿಸಿ ಓದುವ ಕುತೂಹಲ.

ಕಾದಂಬರಿಯ ಪರ್ವ ಶುರುವಾಗಿದ್ದು ಚಿಕ್ಕಪ್ಪನ ಮನೆಯ ನೂರೊಂದು ಬಾಗಿಲು ಎಂಬ ಪುಸ್ತಕದಿಂದ.. ಅಲ್ಲಿಂದ ಓದಿಸಿಕೊಂಡು ಹೋದ ಪುಸ್ತಕಗಳ ಮಹಾ ಸಾಲೇ ಇದೆ.ಅದೆಷ್ಟೋ ಗ್ರಂಥಾಲಯಗಳ ಪರಿಮಳಕ್ಕೆ ಮಾರು ಹೋಗಿ ಅಲ್ಲಿನ ಲೈಬ್ರರಿಯನ್ ಕೆಲಸವನ್ನು ಅದೆಷ್ಟು ಹೊಟ್ಟೆ ಕಿಚ್ಚಿನಿಂದ ನೋಡಿದ್ದು.

ದಶಕಗಳಿಂದ ಓದಿದ ಪುಸ್ತಕಗಳನ್ನು ಲೆಕ್ಕ ಹಾಕಲಂತೂ ಆಗುತ್ತಿಲ್ಲ‌. ಕರೆಂಟು ಹೋದಾಗ ಚಿಮಣಿ ದೀಪದಲ್ಲಿ ಓದಿದ್ದು, ಮಧ್ಯಾಹ್ನದ ಹೊತ್ತು ಕೆರೆದಂಡೆಯ ಮೇಲೆ ಕುಳಿತು ಓದಿದ್ದು, ಹಾಸ್ಟೆಲಿನ ಕಲರವದಲ್ಲಿ ಕಿತ್ತಾಡಿಕೊಂಡು ಓದಿದ್ದು, ಮನೆಯ ನೀರವ ಮೌನದಲ್ಲಿ ಮಧ್ಯರಾತ್ರಿ ಓದಿದ್ದು, ಎಲ್ಲದರಲ್ಲೂ ಬೇರೆ ಲೋಕಕ್ಕೆ ಕಿಟಕಿಯಿಂದ ಜಿಗಿದಂತ ಅನುಭವ.

ಈ ಪುಸ್ತಕಗಳ ಸೆಳೆತ ಹೀಗೇ ಇರಲಿ, ಇನ್ನಷ್ಟು ಉತ್ಕೃಷ್ಟ ಪುಸ್ತಕಗಳು ಬರಲಿ, ಓದುಗ ವೃಂದ ಬೆಳೆಯಲಿ.

Advertisements

4 thoughts on “ಪುಸ್ತಕದಿನದಂದು…

  1. ಬಾಲ್ಯದ ಬಾಲಮಂಗಾಳದಿಂದ ಜೊತೆಗೆ ಬಂದಿರುವ ಓದು ಜೀವನ ಪೂರ್ತಿ ಜೊತೆಗಿದ್ದು ಮಾರ್ಗದರ್ಶನ, ಜೀವನಕ್ಕೊಂದು ಗತಿ ನೀಡಲಿ.

    Liked by 1 person

  2. ಓದಿನ ಹುಚ್ಚು ಹಿಡಿಸಿಕೊಂಡರೆ ಅದು ಬಿಡದೆತ್ತಿನ ಬಾಲ. ವಾಸ್ತವ ಮರೆತು ಕಳೆದು ಹೋಗುವ ಕ್ಷಣವಲ್ಲವೆ ಗೆಳತಿ?☺

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s