ಒಂದು ಮೂಡಿನ ಸುತ್ತಾ

‘ಮೂಡ್’ ಅಂದರೆ ಏನು? ಇದೊಂದು ನಿಗೂಢ ಮನಸಿನ ಸ್ಥಿತಿನಾ? ನಾವೇ ಕಂಡುಕೊಂಡ ಕಲ್ಪನೆಯಾ?ಯಾವುದಾದರೂ ಹೆಸರಿಡದ ರೋಗಾನ?
ದಿನಂಪ್ರತಿ ನಾವು ನೂರಾರು ಸಂಧರ್ಭಗಳನ್ನು, ಸಾಕಷ್ಟು ಜನರನ್ನು ಸಂಧಿಸುತ್ತೇವೆ. ಒಂದಲ್ಲಾ ಒಂದು ರೀತಿಯಲ್ಲಿ ಮನಸಿನ ಮೇಲೆ, ಮೂಡಿನ ಮೇಲೆ ಇದೆಲ್ಲಾ ಪ್ರಭಾವ ಬೀರುತ್ತದೆ. ಬೆಳಗ್ಗೆ ಎದ್ದಾಗ ಕರೆಂಟ್ ಇಲ್ಲದ ಸೆಕೆಯಿಂದ ಹಿಡಿದು ತಪ್ಪಿದ ಆಫೀಸು ವಾಹನದ ತನಕ ಮೂಡ್ ನಿರ್ಧಾರವಾಗುತ್ತದೆ.

ಹಾಗಾದರೆ ಇದರ ಜೊತೆ ಹೊಂದಿಕೊಳ್ಳುವುದು ಹೇಗೆ? ಯಾವಾಗಲೂ ಚೆನ್ನಾಗಿಯೇ ಇಟ್ಟು ಕೊಳ್ಳಬಹುದಾ? ಅಥವಾ ರಸಮಯ ಜೀವನಕ್ಕೆ ಅಳು, ನಗು, ಬೇಸರ, ಒಂಟಿತನ, ನೆಮ್ಮದಿ, ಸಿಟ್ಟು, ಹತಾಶೆ, ನಿರಾಶೆ ಎಲ್ಲವೂ ಬೇಕಾ? ಇಲ್ಲ..  ಬೇಡ. ನೆಗೆಟೀವ್ ಮೂಡುಗಳ ಬಲೆಯಲ್ಲೇ ಬಿದ್ದು ಒದ್ದಾಡುವುದೇ ಜೀವನ ಅಲ್ಲ. ಏಕೆಂದರೆ ಇದರಿಂದ ನಮ್ಮ ಮನಸ್ಸಷ್ಟೇ ಅಲ್ಲದೇ ಸುತ್ತ ಮುತ್ತ ಇರುವವರ ಮನಸ್ಸನ್ನು ಕೂಡ ಹಾಳು ಮಾಡಿ, ಬೈದಾಡಿಕೊಂಡು ಆ ಕ್ಷಣದ ಶಾಂತಿ ಕದಡಿ ರಾಡಿ ಮಾಡಿ ಬಿಡುತ್ತೇವೆ.

ಅದಕ್ಕೆಂದೇ ಈ ಆತ್ಮನ ಸಂತೋಷವನ್ನು ಬೇರೆಯಾಗಿ ಇಡಬೇಕಾಗಿದೆ‌. ಹೊರಗೆ ಜೋರು ಗಾಳಿ, ಮಳೆ, ಸಿಡಿಲು, ಮಿಂಚು, ಬಿಸಿಲು, ಚಳಿ ಏನೇ ವ್ಯತ್ಯಾಸವಾದರೂ ಮನೆಯೊಳಗೆ ತಣ್ಣಗಿರುವಂತೆ ಹೊರಗಿನ ಮಾತು, ಮೌನ, ತಿರಸ್ಕಾರ, ಅವಮಾನ, ಬೇಸರ ಯಾವುವೂ ಈ ಖುಷಿಯನ್ನು ಕದಡದಂತೆ ರಕ್ಷಿಸಿಬೇಕು.

ಮಳೆ ಜೋರಾಗಿ ಸುರಿಯುವಾಗ ಹದ್ದು ಮೋಡದ ಮೇಲೆ ಹಾರುವಂತೆ , ಎಷ್ಟೇ ಬಾಣಗಳು ಆತ್ಮ ಸಂತೋಷಕ್ಕೆ ಗುರಿಯಿಟ್ಟು ಕೆಡವಲು ಬಂದಾಗ ನಗುವಿನ ಪರದೆ ಹಾಕಿ ಪರಿಹಾರಕೆ ಯೋಚಿಸಿದರಾಯಿತು.

ಇದರಿಂದ ನಮ್ಮ ಮನಸಿನ ನೆಮ್ಮದಿಯೂ ಹಾಳಾಗುವುದಿಲ್ಲ, ಸುತ್ತಲಿನ ಜನರ ಮೇಲೆ ಹರಿಹಾಯುವುದೂ ತಪ್ಪುತ್ತದೆ. ಹಾಗೆಂದು ದುಃಖ, ಕಷ್ಟ ಹಂಚಿ ಕೊಳ್ಳಲೇಬಾರದು ಎಂದಲ್ಲ. ಸರಿಯಾದ ಕಡೆ ಮನಸಿಗೆ ಹತ್ತಿರ ಇರುವವರ ಜೊತೆ ಅದನ್ನು ಮಾತನಾಡಿ ಪರಿಹರಿಸಿ ಸಮಾಧಾನ ತಂದು ಕೊಳ್ಳಬೇಕು, ಆದರೆ ಎಲ್ಲಾ ಕಡೆ ಸೋರಿಸುತ್ತಾ ಹೋಗಬಾರದೆಂದು ಅಷ್ಟೆ.

ಇದೊಂಥರ ಸ್ವಾರ್ಥ, ಹೊರಗಡೆ ಭೂಕಂಪವಾಗಿ ಪ್ರಳಯವಾದಾಗಲೂ ನಾನು ಆತ್ಮನ ಸಂತೋಷ ಕಾಯುತ್ತಾ ನೆಮ್ಮದಿಯಾಗಿರುತ್ತೇನೆ ಅನ್ನಿಸಬಹುದು. ಆದರೆ ಎಮೋಷನಗಳಲ್ಲಿ ಸಿಕ್ಕಿ ವಿಚಲಿತರಾಗುವುದಕ್ಕಿಂತ , ಯೋಚಿಸುವುದು ಹೆಚ್ಚು ಸೂಕ್ತ. ಅವರವರ ಮಾನಸಿಕ ನೆಮ್ಮದಿಯನ್ನು ಅವರು ನೋಡಿಕೊಂಡರೆ ಅಕ್ಕ ಪಕ್ಕದವರು ಕೂಡ ಹಾಗೆಯೇ ಮಾಡಿ ಜಗದ ಜನ ಜೀವನ ಸ್ವಲ್ಪ ಶಾಂತಿ ನೆಮ್ಮದಿಯಿಂದ ಇರಬಹುದೇನೋ..

Advertisements

4 thoughts on “ಒಂದು ಮೂಡಿನ ಸುತ್ತಾ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s