ಕ್ಯಾಪ್ಟನ್ ನವೀನ್ ನಾಗಪ್ಪ ಸೇನಾ ಮೆಡಲ್

Unsungwarheroes.wordpress.com ನಿಂದ ಅನುವಾದ

ಇದನ್ನು ಹೇಗೆ ಪ್ರಾರಂಭಿಸಬೇಕೆಂದೇ ತಿಳಿಯುತ್ತಿಲ್ಲ. ಅದೆಷ್ಟು ಉತ್ಸಾಹ ನನ್ನಲ್ಲಿ ಈಗ ತುಂಬಿಕೊಂಡಿದೆ ಅಂದರೆ ಅದನ್ನು ಲೇಖನಿಯಿಂದ ಹಾಳೆಗಿಳಿಸಲು ಪದಗಳೇ ‌ಸಿಗುತ್ತಿಲ್ಲ. ಆದರೆ ನಾನಿದನ್ನು ನಿಮ್ಮೊಂದಿಗೆ ಹೇಳಲೇ ಬೇಕು. ಇಲ್ಲದಿದ್ದರೆ ನಿನ್ನೆ ತರಹ ಇನ್ನೂ ಸುಮಾರು ರಾತ್ರಿಗಳನ್ನು ನಿದ್ರೆಯಿಲ್ಲದೆ ನಾನು ಕಳೆಯ ಬೇಕಾಗುತ್ತದೆ.

1999 ರಲ್ಲಿ ನಾನು ಹನ್ನೊಂದನೇ ಕ್ಲಾಸಿನಲ್ಲಿದ್ದೆ. ಕಾರ್ಗಿಲ್ ಯುದ್ಧ ಮುಗಿದಿತ್ತು. ಇದೇ ಯುದ್ಧ ನನ್ನ ಬದುಕನ್ನೇ ಬದಲಿಸಿದ್ದು, ಇದೇ ಯುದ್ಧ ನನ್ನ ಕಣ್ಣುಗಳನ್ನು, ಮನಸನ್ನು , ಹೃದಯವನ್ನು ತೆರೆಸಿದ್ದು. ಇದರಿಂದ ನಾನು ಏನನ್ನು ಪ್ರೀತಿಸುತ್ತೇನೆಂದು ಅರಿವಾಯಿತು. ನನ್ನ ಗುರಿಯನ್ನು ಕಂಡುಕೊಂಡೆ, ನಾನು ಏನಾಗ ಬೇಕೆಂದು ಅರಿತುಕೊಂಡೆ. ಇಡೀ ಎರಡು ತಿಂಗಳು ನಾನು ದಿನ ಪತ್ರಿಕೆಗಳ, ನ್ಯೂಸಗಳ ಕಡೆಗೆ ಬಹಳ ಗಮನವಿಟ್ಟಿದ್ದೆ. ಸೈನಿಕರ  ಬಗ್ಗೆ, ಅವರ ಹೋರಾಟದ ಬಗ್ಗೆ, ಅವರ ಸಂಸಾರದ ಬಗ್ಗೆ ಹೀಗೆ ಎಲ್ಲವನ್ನು ಒಟ್ಟುಹಾಕಿ ಓದಿದೆ. ಇದೇ ನನ್ನ ಬದುಕಿನ ಮುಖ್ಯ ಭಾಗವಾಗಿತ್ತು. ಅವರ ಕಥೆಗಳಿಂದ ನನಗೆ ನನ್ನ ದೇಶದ ಮೇಲೆ, ಯುನಿರ್ಫಾಮಿನಲ್ಲಿ ಇರುವವರ ಮೇಲೆ, ಒಟ್ಟಿನಲ್ಲಿ ದೇಶ ಸೇವೆಯ ಮೇಲೆಯೇ ಪ್ರೀತಿಯುಂಟಾಯಿತು. ಅವತ್ತಿಂದ ಅವರೇ ನನ್ನ ನೆಚ್ಚಿನ ಹೀರೋಗಳಾದರು.

ನಿನ್ನೆ ನಾನು ಅಂತಹ ಒಬ್ಬರು ನಿಜವಾದ ನಾಯಕನ ನೋಡಿದೆ, ಭೇಟಿ ಮಾಡಿದೆ, ಮಾತನಾಡಿದೆ . ಅವರು ಕಾರ್ಗಿಲಿನಲ್ಲಿ ಯುದ್ಧ ಮಾಡಿದ್ದಲ್ಲದೆ 120 ಧೀರರನ್ನು ಮುನ್ನೆಡಿಸಿ ಒಂದು ಐತಿಹಾಸಿಕ ಗೆಲುವನ್ನು ತಂದು ಕೊಟ್ಟಿದ್ದರು. ಅವರೇ ಕ್ಯಾಪ್ಟನ್ ನವೀನ್ ನಾಗಪ್ಪ ಸೇನಾ ಮೆಡಲ್ ಅವರನ್ನು ನಾನು ಬೆಂಗಳೂರಿನ ಅವರ ಮನೆಯಲ್ಲೇ ಭೇಟಿಯಾದೆ. ಅವರ ಜೊತೆಗಿನ ಅಮೂಲ್ಯವಾದ ಎರಡು ಗಂಟೆಗಳ ಅನುಭವವನ್ನು ಹಂಚಿಕೊಳ್ಳುವ ಮೊದಲು ಅವರನ್ನು ನಿಮಗೆ ಪರಿಚಯಿಸುತ್ತೇನೆ. ಆಗಲೇ ನಿಮಗೆ ನನ್ನ ಈ ಅತೀ ಉತ್ಸಾಹದ ಕಾರಣ ಅರಿವಾಗುತ್ತದೆ.

ಅವರು ಭಾರತೀಯ ಸೇನೆಯ ಜಮ್ಮು-ಕಾಶ್ಮೀರದ 13 ನೇ ರೈಫಲಗೆ ಸೇರಿ ಹೆಚ್ಚು ಅಂದರೆ ಆರು ತಿಂಗಳಾಗಿರಬಹುದು. ಈ ಧೀರ ಪಡೆಯಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್ ಮ್ಯಾನ್ ಸಂಜಯ ಕುಮಾರರಂತಹ ಹಲವು ವೀರರಿದ್ದರು. ಅವರು ಈ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತ, ಹೊಸ ಕೆಲಸವನ್ನು ಶುರುಮಾಡಿದ್ದರು. ಆಗಲೇ 1999 ರ ಕಾರ್ಗಿಲ್ ಯುದ್ಧ ಪ್ರಾರಂಭವಾಯಿತು.

ಯುಧ್ದದ ಸಮಯದಲ್ಲಿ ಲೆಫ್ಟಿನೆಂಟ್ ನವೀನರಿಗೆ ಮಷ್ಕೋ ಕಣಿವೆಯ ಕಡೆಗೆ ಇಂಡಿಯನ್ ಬಂಕರಗಳ ಜವಾಬ್ದಾರಿ ನೀಡಲಾಗಿತ್ತು‌. 120 ಸೈನಿಕರ ಗುಂಪಿನ ಮೇಲ್ವಿಚಾರಣೆ ಇವರ ಮೇಲಿತ್ತು. ಅವರು ಯುದ್ಧಕ್ಕೆ ಹೊರಡುವ ಮೊದಲು ಈ ಗುಂಪಿಗೆ ನಾಲ್ಕು ವಿಚಾರಗಳನ್ನು ನೆನಪಿಡಲು ಹೇಳುತ್ತಾರೆ,

1. ನಾನು ನಿಮ್ಮಲ್ಲಿ ಯಾರೊಬ್ಬರಿಗೂ ಏನಾಗಲೂ ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ನನ್ನನ್ನು ನಾನು ಬಲಿ ಕೊಟ್ಟಾದರೂ ನಿಮ್ಮನ್ನು ಕಾಪಾಡುತ್ತೇನೆ.

2. ನಾನು ಓಡಿ ಹೋಗುವ ಮನುಷ್ಯನೇ ಅಲ್ಲ .ಯುದ್ಧದಲ್ಲಿ ಸತ್ತರೂ ಕೂಡ ಗುಂಡು ನನ್ನ ಎದೆಯೊಳಗೆ ಇರುತ್ತದೆ ವಿನಃ ಬೆನ್ನಿನಲ್ಲಿ ಅಲ್ಲ.

3. ನನಗೆ ಅನುಭವ ಕಡಿಮೆ ಇರಬಹುದು ಆದರೆ ಉತ್ಸಾಹದ ಕೊರತೆಯಿಲ್ಲ.

4. ನಮ್ಮ ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಹೋಗೋಣ ಏನೇ ಆಗಲಿ ಅದನ್ನು ಧ್ವಜಾರೋಹಣೆ ಮಾಡಿಯೇ ಹಿಂದಿರುಗೋಣ.

ಅವರಿಗೆ ಒಂದು ಬಂಕರ್ ದೊರಕಿತು ಮತ್ತು ಇನ್ನೊಂದು ಬಂಕರ್ ಪಾಯಿಂಟ್ 4875 ರ ಕಡೆಗೆ ಮುನ್ನೆಡೆಯುತ್ತಿತ್ತು ಅಲ್ಲಿಯೇ ಮುಂದೆ ಕ್ಯಾಪ್ಟನ್ ಬಾತ್ರ ಜೀವ ಕಳೆದುಕೊಳ್ಳುವುದು. ಇಂತಹ ಸಮಯದಲ್ಲಿ ಶತ್ರುಗಳ ಗ್ರೆನೇಡ್ ಒಂದು ನವೀನರ ಕಡೆಗೆ ಬಂದು ಎರಗಿತು. ತಮ್ಮ ತುಕಡಿಯ ಉಳಿಸಲು ಅವರು ತಕ್ಷಣ ಗ್ರೆನೇಡ್ ದಾಳಿಗೆ ಮುಂದಾದರು. ಆದರೆ ಬಂದ ಗ್ರೆನೇಡ್ ಅವರಿದ್ದ ಜಾಗಕ್ಕೆ ಅತೀ ಸಮೀಪದಲ್ಲೇ ಸಿಡಿಯಿತು. ಇದರಿಂದಾಗಿ ಅವರ ಕಾಲಿಗೆ ತೀವ್ರವಾಗಿ ಗಾಯವಾಯಿತು. ಆಗ ಶಹೀದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ನವೀನ ಅವರನ್ನು ಕಳುಹಿಸಿ ತಾವು ಚಾರ್ಜ್ ತೆಗೆದುಕೊಂಡರು. ವಿಕ್ರಮ್ ಅತ್ಯಂತ ವೀರತ್ವದಿಂದ ಯುದ್ಧದಲ್ಲಿ ಶೌರ್ಯ ಮೆರೆದು ಬಂಕರನ್ನು ಪಾಯಿಂಟ್  4875 ಗೆ ತೆಗೆದುಕೊಂಡು ಹೋದರು. ಅಲ್ಲಿಯೇ ಭಾರತದ ಹೆಮ್ಮೆಯನ್ನು, ಕೀರ್ತಿಯನ್ನು ಹೆಚ್ಚಿಸಿ ತಮ್ಮ ಪ್ರಾಣವನ್ನು ತ್ಯಜಿಸಿದರು.

ಲೆಫ್ಟಿನೆಂಟ್ ನವೀನ್ ನಂತರದಲ್ಲಿ ತಮ್ಮ ಶೌರ್ಯಕ್ಕಾಗಿ  ಕ್ಯಾಪ್ಟನ್ ಆಗಿ ಬಡ್ತಿ ಹೊಂದಿದರು ಮತ್ತು ರಾಷ್ಟ್ರಪತಿಗಳು ಅವರ ಸಾಧನೆಗಾಗಿ ಸೇನಾ ಮೆಡೆಲ್ ಎಂದು ಪುರಸ್ಕರಿಸಿದರು. ಅವರ ತೀವ್ರ ಗಾಯದಿಂದಾಗಿ ಅವರು ಸೇನೆಯಿಂದ ಹೊರಗುಳಿದರು.

ಇಂತಹ ಶ್ರೇಷ್ಠ ಸೈನಿಕನನ್ನು ಭೇಟಿಯಾಗುವ ಅದೃಷ್ಟ ನನಗೆ ಸಿಕ್ಕಿತು. ಇವರದೆಷ್ಟು ಸ್ನೇಹಮಯಿಯೆಂದರೆ ಎಷ್ಟು ಸಲ ಬೇಕಾದರೂ ಫೋನಾಯಿಸಿ , ಎಷ್ಟು ಸಲ ಬೇಕಾದರೂ ಇವರಿಗೆ ಪ್ರಶ್ನೆಗಳನ್ನು ಕೇಳ ಬಹುದಿತ್ತು.

ಅವರಿಂದಲೇ ನಾನು ಯುದ್ಧದಲ್ಲಿ ಅವರಿಗೆ ಏನಾಯಿತು ಎಂದು ತಿಳಿದುಕೊಂಡೆ. ಜುಲೈ 7 , 1999 ರ ಮುಂಜಾನೆ ಶತ್ರುವಿನ ಗ್ರೆನೇಡನ್ನು ಶತ್ರುವಿಗೆ ಅವರು ತಿರುಗಿ ಎಸೆದಾಗಿತ್ತು. ಆದರೆ ಹೇಗೋ ಅದು ಉರುಳಿ ಮತ್ತೆ ತಮ್ಮ ಹತ್ತಿರವೇ ಬಂದು ಸಿಡಿದಿತ್ತು. ಅಂತಹ ದಾಳಿಯಿಂದ ಅವರು ಬದುಕಿ ಉಳಿದುದೇ ಒಂದು ಪವಾಡ ಆದರೆ ಅವರ ಕಾಲುಗಳು ತೀವ್ರವಾಗಿ ಗಾಯಗೊಂಡಿತು. ಕೂಡಲೇ ಅವರು ತಮ್ಮ ಅರ್ಧ ದೇಹವನ್ನಾದರೂ ಉಳಿಸಿಕೊಳ್ಳಲೆಂದು ಮಲಗಿ, ನೋವನ್ನು ಮರೆಯಲು ಮಾತ್ರೆ ನುಂಗಿ , ಒಂದು ಬ್ಯಾಂಡೇಜ್ ಅನ್ನು ನೇತಾಡುತ್ತಿದ್ದ ಕಾಲಿಗೆ ಸುತ್ತಿಕೊಂಡರು. ನಂತರ ಸ್ವಲ್ಪ ದೂರದ ತನಕ ತೆವಳಿದರು ಅವರನ್ನು ಎತ್ತಲೂ ಕೂಡ ಸಂಪೂರ್ಣ ದಾಳಿಯಾದ ಸ್ಥಳವಾದುದರಿಂದ ಅಲ್ಲಿ ಯಾರೂ ಇರಲಿಲ್ಲ. ಆಮೇಲೆ ಅವರನ್ನು ಅವರ ತುಕಡಿಯವರು ಬಂದು ಹೋರಾಟದ ಮಧ್ಯೆಯೇ ಕೆಳಗೆ ಕರೆದುಕೊಂಡು ಹೋದರು. ಹಾಗೆ ಕರೆದು ಕೊಂಡು ಹೋಗುವಾಗಲೂ ಕೂಡ ಕಲ್ಲುಗಳು ತಾಗಿ ಅವರು ಸುಮಾರು ಸಲ ಕೆಳಗೆ ಬಿದ್ದಿದ್ದರು. ಹೇಗೋ ಆಸ್ಪತ್ರೆಯನ್ನು ಸೇರುವಾಗ ಗಾಯಗೊಂಡು 24 ಗಂಟೆಗಳಾಗಿತ್ತು. ಅಲ್ಲಿ ಮೊದಲಿಗೆ ಚಿಕ್ಕ ಮಟ್ಟದಲ್ಲಿ ಔಷಧೋಪಚಾರ ಮಾಡಿ ಸೇನೆಯ ಆಂಬುಲೆನ್ಸನಲ್ಲಿ ಶ್ರೀನಗರಕ್ಕೆ ಕಳುಹಿಸಲಾಯಿತು. ಅಲ್ಲಿಂದ ದೆಹಲಿಗೆ ಅವರನ್ನು ಹೆಲಿಕಾಪ್ಟರ್ ನಲ್ಲಿ ಕರೆದೊಯ್ಯಲಾಯಿತು. ಶ್ರೀನಗರಕ್ಕೆ ಹೋಗುವ ರಸ್ತೆ ಬಹಳ ದುಸ್ತರವಾಗಿತ್ತು . ಮಧ್ಯ ಎಲ್ಲಿಯೂ ಕೂಡ ಆಂಬುಲೆನ್ಸನ್ನು ನಿಲ್ಲಿಸಲೇ ಇಲ್ಲ. ಅದೇನಾದರೂ ನಿಲ್ಲಿಸಿದ್ದರೆ ಶತ್ರುಗಳು ಅದರ ಸ್ಥಳ ಗುರುತಿಸಿ ಮತ್ತೆ ದಾಳಿ ಮಾಡುತ್ತಿದ್ದರು. ನವೀನರು ತಮ್ಮ ನೋವನ್ನು ಇಡೀ ಪ್ರಯಾಣದ ವೇಳೆ ಅವಡು ಕಚ್ಚಿ ಅನುಭವಿಸಿದರು. ದೆಹಲಿಯಲ್ಲಿ ಕೂಡ ಅವರು ಒಂದುವರೆ ವರುಷಗಳ ತನಕ ಚಿಕಿತ್ಸೆಯಲ್ಲಿ ಇದ್ದರು. ಎಂಟು ಮೇಜರ್ ಶಸ್ತ್ರ ಚಿಕಿತ್ಸೆಗಳನ್ನು ಅವರಿಗೆ ಮಾಡಲಾಯಿತು. ನಂತರ ಅವರು ಪುಣೆಯಲ್ಲಿ ಕೆಲವು ತಿಂಗಳುಗಳನ್ನು ALC (Artificial Limb Centre) ಅಂಗವಿಕಲ ಕೇಂದ್ರದಲ್ಲಿ ಕಳೆದರು. ವೈದ್ಯರು ಅವರಿಗೆ ಇನ್ನು ಜೀವಮಾನದಲ್ಲಿ ನಡೆಯಲು ಸಾಧ್ಯವಿಲ್ಲವೆಂದು ಹೇಳಿದ್ದರು. ಆದರೆ ಇಂದು ನಾನು ಅವರು ಗೇಟಿನ ತನಕ ನಮಗಾಗಿ ನಡೆದು ಕೊಂಡು ಬಂದುದನ್ನು ನೋಡಿದೆ‌. ಇದೆಲ್ಲಾ ಸಾಧ್ಯವಾದದು ಅವರ ಸ್ಥೈರ್ಯದಿಂದ.

ನಾನು ಇಂತಹ ಧೀರೋದಾತ್ತರಾದ ನವೀನ ನಾಗಪ್ಪರನ್ನು ಭೇಟಿ ಮಾಡುವ ಅವಕಾಶ ನನ್ನ ಜೀವನದಲ್ಲಿ ಸಿಕ್ಕಿದ್ದು ಅದೃಷ್ಟವೆಂದೇ ಭಾವಿಸುತ್ತೇನೆ. ಅಂತಹ ಒಂದು ಅಪರೂಪದ ಅವಕಾಶವನ್ನು ದೇವರು ನಮಗೆ ನೀಡಿದ. ನಮ್ಮನ್ನು ರಕ್ಷಿಸಿ , ನಮಗೆ ನೆಮ್ಮದಿಯ , ಸುರಕ್ಷಿತ ಜೀವನ ನೀಡಿದುದಕ್ಕೆ ನಿಮಗೆ ಅದೆಷ್ಟು  ಧನ್ಯವಾದಗಳನ್ನು ಹೇಳಲಿ ಸರ್,

ಜೈ ಹಿಂದ್.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s