ಭಾವಾಂತರ ಭಾಷಾಂತರ

ಸೂರ್ಯ ಪಶ್ಚಿಮದಲ್ಲಿ ಜಾರಲು
ಚಂದ್ರನ ಬೇಗೆಯ ಹುಸಿಬಿಸಿಲು
ಆಕಾಶ ಈ ಬಿಸಿಗೆ ಕರಗುತಿರಲು
ನಾ ಕಲ್ಲಾದೆ, ಭುವಿಯೇ ತಿರುಗುತಿರಲು

ಎದೆಯ ಬಡಿತ ಜೋರಾಗಲು
ಉಸಿರೇ ನಿಂತು ಹೋಗಿರಲು
ಇದೇನಾ ಪ್ರೀತಿಯ ಅಮಲು
ನನಗೇಕೋ ಎಲ್ಲಾ ಮೊದಮೊದಲು

ಅತೀಸುಂದರ ಈ ಕ್ಷಣಗಳು
ಎಲ್ಲವೂ ಏನೋ ಬದಲು
ವಾಸ್ತವದಲ್ಲಿ ಜರಗುತ್ತಿರಲು
ಕಂಡ ಎಲ್ಲಾ ಕನಸಿನ ಕಲ್ಪನೆಗಳು

ಜನ್ಮ ಜನ್ಮಾಂತರದ ಬಂಧವಿರಲು
ನಾವು ಮತ್ತೆ ಹೀಗೆ ಸೇರಿರಲು
ಪ್ರೀತಿಯ ಈ ಕಾಲ ಉರುಳುತಿರಲು
ನೀನೆ ಸಿಗುತ್ತಿರು ಪ್ರತೀ ಬದುಕಿನಲು

ನಿನ್ನದೇ ಬಣ್ಣದಿಂದ ನಾನಿಷ್ಟು ಮಿಂಚಲು
ನನ್ನೇ ಕಳೆದುಕೊಂಡೆ ನೀ ಸಿಗಲು
ಮುಳುಗಿದೆನು ನಿನ್ನ ಪ್ರೇಮದ ಕಡಲು
ಈಗ ಪ್ರೀತಿಗೆ ತೀರವೇ ನಾನಾಗಿರಲು

ಸಾಗರವೇ ಇಂದು ಬಾಯಾರಿರಲು
ಎಚ್ಚರಗೊಂಡಳು ಮಲಗಿದ್ದ ಇರುಳು
ಅದೇಕೋ ಬೆಂಕಿಯ ಎದೆಯಲ್ಲೂ
ವಿರಹದ ಉರಿಜ್ವಾಲೆ ದಹಿಸಲು

Advertisements

2 thoughts on “ಭಾವಾಂತರ ಭಾಷಾಂತರ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s