ಗೋಧಿ ಬಣ್ಣ ಅಸಾಧಾರಣ ಮೈಕಟ್ಟು

image

ಈ ಚಿತ್ರದ ಬಗೆಗೆ ಬರೆಯಲೇ ಬೇಕೆನಿಸುವಷ್ಟು ಭಾವನಾತ್ಮಕವಾಗಿದೆ. ಇಷ್ಟಕಾಮ್ಯದಂತ ಚಿತ್ರದ ಬಗ್ಗೆ ಬರೆದರೆ  ಕೇವಲ ದೂರುಗಳಿಂದಲೇ ಮುಗಿಯುತ್ತದೆ. ಯು ಟರ್ನ್ ಬಗೆಗೂ ಕೂಡ ಏನೂ ಬರೆಯದೆ ಕೇಳಿದವರಿಗೆ ಸುಮ್ಮನೆ ಹೋಗಿ ಬನ್ನಿ ಎಂದು ಕುತೂಹಲ ಕಾದಿರಿಸ ಬೇಕಿನಿಸುತ್ತದೆ. ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ , ಕೆಲವೊಮ್ಮೆ ಇಷ್ಟಪಟ್ಟು ಬರೆದ ಚಿತ್ರ ಹಲವರಿಗೆ ಏನೇನೂ ಇಷ್ಟವಾಗದೆ ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ. ಆದರೆ ಇದು ಮಾತ್ರ ಎಲ್ಲರಿಗೂ ಇಷ್ಟವಾಗುವ ಪ್ರಸ್ತುತವೆನಿಸುವ ಸಿಂಪಲ್ ಸ್ಟೋರಿ ಲೈನ್ ಇರುವ ಅದ್ಬುತ ಚಿತ್ರ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಈ ಚಿತ್ರದ ಬಗ್ಗೆ ಬರೆಯಲು ಪ್ರೇರಣೆಯೇ ಒಂದು ವಿಚಿತ್ರ. ನೋಡುವಾಗ ಆದ ಅನುಭೂತಿಯನ್ನು ದಾಖಲಿಸಿ ಮುಂದೆಂದಾದರೂ ಮತ್ತೆ ಅನುಭವಿಸಲು ಇರಲಿಯೆಂದು ಈ ಲೇಖನ.

ಕಥೆಯನ್ನು ರಿವ್ಯೂ ಅಲ್ಲಿ ಸ್ವಲ್ಪವೂ ತೋರಿಸಬಾರದು.  ಅಪ್ಪನ ಹುಡುಕಾಟದಲ್ಲಿ ಮಗನ ಹುಡುಕಾಟ ಎಂದು ಒಂದು ಸಾಲಿನಲ್ಲಿ ಹೇಳಬಹುದು . ನಾವೆಷ್ಟು ಕಳೆದು ಕೊಂಡಿದ್ದೇವೆ ಅಂದರೆ ಒಮ್ಮೊಮ್ಮೆ ಹುಡುಕಲು ಕೂಡ ಮರೆಯುತ್ತೇವೆ. ಅಷ್ಟೊಂದು ನಮ್ಮ ಒರಿಜಿನಾಲಿಟಿಯನ್ನು ಎಲ್ಲೋ ಬೀಳಿಸಿ ಕೊಂಡಿದ್ದೇವೆ. ಎದೆಯಾಳದಲ್ಲಿ ಇರುವ ಅಸ್ಪಷ್ಟ ಅಭದ್ರತೆ ನಮ್ಮನ್ನು ಎಷ್ಟೇ ಶಕ್ತಿಶಾಲಿಯಾಗಿ ಕಲ್ಪಿಸಿದರೂ ಅಲ್ಲೊಂದು ಅಸಹಾಯಕತೆಯಿದೆ. ತೀರ ನಮ್ಮವರಿಗೆ ಮಾತ್ರ ತೆರೆದುಕೊಳ್ಳುವ ನಾವಿದ್ದೇವೆ.

ನಮ್ಮದಲ್ಲದನ್ನೂ ಹಿಡಿಯುವ ತವಕದಲ್ಲಿ ಹುಟ್ಟನ್ನೇ ಮರೆತು ಬಿಟ್ಟಿದ್ದೇವೆ. ನಮ್ಮ ಹೊಸ ಕಥೆಯನ್ನು ಬರೆಯುವ ಹುಮ್ಮಸ್ಸಿನಲ್ಲಿ ನಾವಿದ್ದ ಕಥೆಯಿಂದ ಅರ್ಧಕ್ಕೆ ಹೊರಟು ಹೋಗಿದ್ದೇವೆ‌. ಈ ಚಿತ್ರ ಮನಸನ್ನು ನಿಮ್ಮದೇ ಕಣ್ಣೀರಿಂದ‌ ಮತ್ತೆ‌ ತೊಳೆದು ಹೊಸ ವಿಷನ್ ‌ಕೊಡುತ್ತದೆ.

ಚಿತ್ರ‌ತಂಡದ ಎಲ್ಲರಿಗೂ ಇಂತ ಸದಭಿರುಚಿ ಕೊಡುಗೆಗಾಗಿ ಅಭಿನಂದನೆಗಳು. ರಕ್ಷಿತ್ ಶೆಟ್ಟಿ ಈ ಮೊದಲೆ ಮನಸ್ಸು ಗೆದ್ದು ಬಿಟ್ಟಿದ್ದಾರೆ . ಅವರ ಈ ಚಿತ್ರ ವರ್ಚಸ್ಸಿಗೆ ಇನ್ನೊಂದು ನವಿಲುಗರಿ. ವಿಲನ್ ವಸಿಷ್ಠ , ರಾಜಾಹುಲಿಯದೇ ನೆನಪಾಗುವ ಇವರು ಕೂಡ ಮನಸ್ಸನ್ನು ಆವರಿಸುಕೊಂಡು ಬಿಡುತ್ತಾರೆ. ಅನಂತನಾಗ್ ನಿರ್ವಿವಾದವಾಗಿ ಅಪೂರ್ವ ನಟ. ನಟ ಎನ್ನಲೂ ತಡವರಿಸ ಬೇಕಾದಂತ ನೈಜ ನಟನೆ ಇವರದು. ಈ ಚಿತ್ರದಲ್ಲಿ ಯಾರೂ ಮಾಡಲಾಗದಷ್ಟು ಉತ್ತಮವಾಗಿ ಮಾಡಿದ್ದಾರೆ. ಇವರನ್ನು ನಾವೇ ಕಳೆದು ಕೊಂಡಂತೆ ಕಳವಳ ಪಡುತ್ತೇವೆ. ಅಪೂರ್ವ , ಅದ್ಬುತ, ಅಪರೂಪದ ಚಿತ್ರ ಏನೋ ಕಂಡು ಕೊಂಡ ಸಾರ್ಥಕ ಭಾವ . ದಯವಿಟ್ಟು ಮಿಸ್ ಮಾಡಬೇಡಿ ನೋಡಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s