ಇನ್ಸೆಪ್ಷನ್ ;-)

ಎಲ್ಲರಿಗೂ ಏನೋ ಒಂದು ಭಾರಿ ಇಷ್ಟವಾದ ಆಸಕ್ತಿ ಇರುತ್ತದೆ. ಬುಕ್ಸ್ , ಬರವಣಿಗೆ, ಆಫೀಸ್ ಕೆಲಸಗಳು ! , ಸಿನಿಮಾ, ಕ್ರಿಕೆಟ್, ರಾಜಕೀಯ, ತಿಂಡಿ ತಿನಿಸು, ಕುಡಿತ, ಮೇಕಪ್, ಅಡಿಗೆ, ಫಿಸಿಕ್ಸ್, ಮ್ಯಾತ್ಸ್, ತಿರುಗುವುದು, ಕಾರ್ , ಬೈಕ್, ಆಕಾಶ ಹೀಗೆ ಸಂಬಂಧವೇ ಇಲ್ಲದ ವಿಚಾರಗಳ ಮೇಲೆ ಏನೋ ವಿಶಿಷ್ಟ ಅಭಿಮಾನವಿರುತ್ತದೆ. ಆ ವಿಷಯ ಎಲ್ಲಾದರೂ ಮಾತುಕತೆಯಾಗುತ್ತಿದ್ದರೆ ನಾವು ಸಂಪೂರ್ಣ ಚಾರ್ಜ್ ಆಗಿ ಚರ್ಚೆಗಿಳಿಯುತ್ತೇವೆ.

ಇನ್ನು ನಮ್ಮ ಈ ಏರಿಯಾದಲ್ಲಿ ಸಾಧನೆ , ಹೆಸರು ಮಾಡಿದವರ ಬಗೆಗೆ ನಮಗೆ ಗೊತ್ತೇ ಇರುತ್ತದೆ. ಅವರನ್ನು ನಾವು ಮನಸಿನ ಒಂದು ಮೂಲೆಯಲ್ಲಿ ಪ್ರತಿಷ್ಠಾಪಿಸಿಕೊಂಡಿರುತ್ತೇವೆ. ಅವರಂತೆ ಆಗುವ ಕನಸು, ಅವರನ್ನು ಇನ್ನೂ ವೈಭವೀಕರಿಸಿ ನಾವು ಕಲ್ಪಿಸಿಕೊಂಡಿರುತ್ತೇವೆ.

ಹೀಗೆ ನನಗೂ ಸಾಕಷ್ಟು ಆಸಕ್ತಿಗಳಿವೆ. ಅದರಲ್ಲಿ ಮೊದಲನೆಯದೇ ನಾನು ಮೊದಲು ಆ ‌ಪಟ್ಟಿಯಲ್ಲಿ 
ಸೇರಿಸಿದ್ದು. ಈ ವಿಷಯದಲ್ಲಿ ಬಹಳಷ್ಟು ಜನ ಮೇಲ್ಪಂಕ್ತಿಯವರಿದ್ದಾರೆ ಮತ್ತು ಅವರಿಗೆ ನಾನು ಅಭಿಮಾನಿ. ಇಂದು ಅಂತ ಒಬ್ಬ ವ್ಯಕ್ತಿ ಕನಸಲ್ಲಿ ಬಂದಿರುವುದಕ್ಕೆ ಈಗ ಇಷ್ಟೆಲ್ಲಾ ಪೀಠಿಕೆ.

ಕನಸಿಗೆ ಕೊನೆ ಮೊದಲು ಇರುವುದಿಲ್ಲ‌. ಇದು ಶುರುವಾಗಿದ್ದು ಇಂದು ಬಸ್ಸಿನಲ್ಲಿ ನಾನು ಮುಂದಿನ ಸೀಟಿನಲ್ಲಿ ಎಂದಿನಂತೆ‌ ಕುಳಿತು , ಕಿಟಕಿಯಾಚೆಗಿನ ಲೋಕವನ್ನು ನೋಡುತ್ತಿದ್ದೆ. ಬಸ್ಸಿನ ಕೊನೆಯಲ್ಲಿ ಆವರಿದ್ದರು, ನಾನು ಹೋಗಿ ಮಾತನಾಡಿಸಿ ಹಾಗೆ ಸಿಕ್ಕ ಸ್ವಲ್ಪ ಅವಕಾಶಕ್ಕಾಗಿ ತುಂಬ ಸಂತೋಷವಾಯಿತೆಂದು ತಿಳಿಸಿ ಬಂದು ಕುಳಿತೆ. ನಂತರ ನಾನು ಅದನ್ನೇ ಮೆಲುಕು ಹಾಕುತ್ತಾ ಇಳಿದು ಹೋದೆ. ಆದರೆ ಸ್ವಲ್ಪ ಸಮಯದ ನಂತರ ಅವರು ನಮ್ಮ ಮನೆಗೆ ಬಂದರು . ಈಗ ಅವರನ್ನು ಅತೀ ಹತ್ತಿರದಿಂದ ಕಾಣುವ ಅವಕಾಶವಿತ್ತು. ಅದು ಹೇಗೋ ಇರುವ ಸ್ವಲ್ಪ ಗುಂಗುರು ಕೂದಲು ಪೊದೆಯಂತೆ ಬೆಳೆದು ಋಷಿಯ ಜಟೆಯಂತೆ ನನ್ನ ಕನಸಿನಲ್ಲಿ ಕಂಡಿತ್ತು. ದೇಹವೂ ಕೂಡ ಧಡೂತಿಯಾಗಿ ನನಗೆ ಪೂರ್ಣ ಕಣ್ಣಿನ ನಿಲುವಿಗೆ ಸಿಗುತ್ತಿರಲಿಲ್ಲ.

ತುಂಬಾ ಬೋರಾಯಿತೆಂದು ನಮ್ಮ ಮನೆಗೆ ಬಂದಿದರೆಂದು ಹೇಳಿದರು. ಅವರ ಜೊತೆ ಇನ್ನರೋ ಒಬ್ಬರಿದ್ದರು. ನಾನು ಕೇಳಬೇಕೆಂದಿದ್ದ , ಕುತೂಹಲದ ಎಲ್ಲಾ ಪ್ರಶ್ನೆ ಕೇಳಿದೆ. ಎಲ್ಲಿ ಓದಿದರು? ಹೇಗೆ ಅಷ್ಟು ಬರೆಯಲು ಸಾಧ್ಯ ? ಅಷ್ಟೊಂದು ವಿಷಯದ ಮೇಲೆ ಹೇಗೆ ಪ್ರಭುತ್ವ .. ಇತ್ಯಾದಿ, ಇತ್ಯಾದಿ. ಆದರೆ ಯಾವ ಉತ್ತರಗಳೂ ನೆನಪಿಲ್ಲಾ ಎನ್ನುವುದೇ ಬೇಸರ. ಇಷ್ಟೆಲ್ಲದರ ಮಧ್ಯೆ ನಾನು ಇದೆಲ್ಲಾ ಕನಸು ಎಂದು ಕೂಡ ಹೇಳಿದ್ದೆ. ಅವರು ಇಲ್ಲ ನಿಜ ಎಂದಿದ್ದರು. ಆದರೆ ಇದೊಂದು ಕನಸೇ ಆಗಿತ್ತು. ಕನಸಲ್ಲೂ ನನಗಿದು ಕನಸು ಅನಿಸಿತ್ತು ಅಥವಾ ಸಾಮಾನ್ಯ ಡೈಲಾಗ್ ನಂತೆ ಹೇಳಿರಬಹುದು. ಏನೇ ಆದರೂ ಈಗ ಕನಸೇ ವ್ಯಕ್ತಿಗಿಂತ ಹೆಚ್ಚು ಸೆಳೆಯುತ್ತಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s