ತೊಳೆಯುವ ಮಳೆಯೇ ಬಾ..

image

ಮಳೆಗಾಲದ ಒಂದು ಹಕ್ಕಿಯಂತೆ ನಾನು
ಬೇಸಿಗೆಯ ಬಿರು ಬಿಸಲಲಿ ಬಾಡಿರುವೆನು
ಎದೆಯ ತುಂಬಾ ಬರಗಾಲ ಬಂದಿರುವುದು
ಯಾವುದೋ ಆಸೆಯ ಹನಿಗೆ ಕಾದು ಕಾದು
ಉರಿಯ ಬೇಗೆಯಲಿ ತಂಪು ನೀಡಿದವರು
ಮನದ ಗೂಡಿಗೆ ಬಾರದೆ ಏಕೆ ಹೋದರು
ಸೆಕೆ ಮಿತಿಮೀರಿ ನಾನೇ ದೂರ ತಳ್ಳಿದೆನು
ಸುಮ್ಮನೀಗ ಕನವರಿಸುವೆ ನೆನಪುಗಳನು
ಕಾಯುತಿದೆ ಮತ್ತೊಂದು ಮಳೆಗೆ ಒಡಲು
ಹಳೇ ಬೇರಲಿ ಮತ್ತೆ ಹೂವು ಚಿಗುರಿಸಲು

Advertisements

8 thoughts on “ತೊಳೆಯುವ ಮಳೆಯೇ ಬಾ..

  1. ನೋಡಿ ಮಳೆ ಕವನ ಬರೆದ್ರಾ, ಎತ್ತೊತೊ ಕಾಣ್ತಿಲ್ಲ. ಏನ್ ಮಾಡಾದು ಹಂಗೆ ಇನ್ನೊಂದೆರಡು ಗೀಚರೆಲಾ. ಮಳಿ ಬತ್ತೊ ಕಾಂಬಾ!

    Liked by 1 person

    1. ಮಳಿ ಬಂದ್ರೆ ಮೂಡು ಬರತ್ರೀ ಅದಿಲ್ಲಾಂದ್ರೇ ಹ್ಯಾಂಗೇ ಬರೆಯೋದ್ರಿ ಅಮ್ಮೋರೆ

      Liked by 1 person

      1. ಏಯ್ ಕವಿಗಳಿಗೆ ತಲೆಯೊಳಗೆ ಎಲ್ಲಾ ಕೂತ್ಕಂಡ ಇರಾಕಿಲ್ವಾ? ಹಂಗಂಗ ಕಲ್ಪಿಸಿಕೊಂಡು ಬಿರೀನೆ ಬರಿರಲಾ. ಮಳೆ ಇಲ್ಲದೆ ಜನ ಲಬೊ ಲಬೊ ಅಂತವರ್ರೆ!

        Liked by 1 person

      2. ಅಂಗಂತೀರ ಸರಿ ಹಂಗಾರೆ ಬೇಗ ಒಂದು ಸುಡು ಮಧ್ಯಾಹ್ನ ಆಕಾಶ ಸೀಳಿ ನೀರು ಬೀಳ್ತಿದೆ ಅಂತ ಅನ್ಕೊಂಡು ಬರೀತಿನಿ.. ಒಳ್ಳೆ ಐಡಿರಿಯಾ ಕೊಟ್ಟೀರಿ (ಥ್ಯಾಂಕ್ಸ್ ಎಲ್ಲ ಎಂತ ಮಾರಾಯ್ರೆ ಇಕಾಳಿ ಎರಡು ಅಡ್ಕೆ) .. .ಇಂಪ್ಲಿಮೆಂಟ್ ಮಾಡ್ಕುತೀನಿ..

        Like

      3. ತಕಳಿ, ಇಲ್ಕಾಣಿ ನಮ್ಮನಿಯಾಗೆ ಹಬ್ಬಿದ್ ಎಲಿ ಕಲ್ಕತ್ತಾ ಪಾನ್, ಒಸಿ ಸುಣ್ಣ, ಊರಿನ ಆಪಿ ಅಡಿಕೆ ಎಲ್ಲ ವೈನಾಗಿ ಬಾಯಾಗಿಟ್ಕಂಡ ಬರಿರಿ. ಹಂಗೆ ಮೋಡತ್ತಾವ ಕಾಂಪ್ರಿಮೈಸ್ ಮಾಡ್ಕಳಿ… ನಾ ನಿಮ್ಮಡಕಿ ಮಡೀಕಂಡೆ. ಟ್ಯಾಂಕ್ಯೂ☺

        Liked by 1 person

  2. *ಮತ್ತೆ ಹೂ (ಜೀವ ತುಂಬುವುದು) ಅರಳಿಸಲು…

    ಚಿಗುರುವುದು ಬರಿ ಎಲೆಗಳು (ಬಯಕೆಗಳು) ಮಾತ್ರ …

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s