ನೆನಪುಗಳ ಮಾತೇ ಮಧುರವಲ್ಲ

ಮನಸ್ಸು ಮತ್ತೆ ಮತ್ತೆ ಹಿಂದೆ ಓಡುತ್ತದೆ. ಸವೆಸಿ ಬಂದ ಕಾಲ ಅದೇಕೋ ಅತ್ಯಾಕರ್ಷಕ. ಮೊದಲಿದ್ದ ಮನೆ, ಓದಿದ ಸ್ಕೂಲು, ಬಂಕ್ ಹಾಕಿದ ಕಾಲೇಜು, ಹಳೇ ದೋಸ್ತಗಳು, ಆ ಅವಳು, ಈ ಇವನು ಹೀಗೆ ಒಂದೆರಡು ನಿಮಿಷ ಕಣ್ಣು ಮುಚ್ಚಿದರೆ ಪಟ್ಟಿಯದೇ ಒಂದು ಲೇಖನವಾಗಿ ಬಿಡುತ್ತದೆ. ಆದರೆ ಆ ಸಮಯದಲ್ಲಿ ಇರುವಾಗ ಅಂದರೆ ಸ್ಕೂಲು ಓದುವಾಗ, ಕಾಲೇಜಲ್ಲಿ ಮಣ್ಣು ಹೊರುವಾಗ ಮುಂದಿನದೇ‌ ಯೋಚನೆ , ಬೇಗ ದೊಡ್ಡವರಾಗಿ ಸ್ವತಂತ್ರರಾಗ ಬೇಕೆಂಬ ಹಂಬಲ. ಅದೆಲ್ಲಾ ಆದ ಮೇಲೆ ಮತ್ತೆ ಹಳೆ‌ ಬದುಕಿನ ಕನವರಿಕೆ.

ಈಗ ವರ್ತಮಾನದಲ್ಲಿ ಏನೂ ಇಲ್ಲವೆಂದಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅದಕ್ಕೆಂದೇ‌ ನಾವು ಕಳೆದ ಸಮಯಕ್ಕೆ ಹಪಹಪಿಸುವುದು. ಈಗ ಹತ್ತು ವರುಷಗಳ ನಂತರ ಈಗಿನ ಬದುಕು ಬೇಕು ಅನಿಸುತ್ತದೆಯೋ ಏನೋ. ಪ್ರತಿಕ್ಷಣವನ್ನು ಅನುಭವಿಸು, ವರ್ತಮಾನದಲ್ಲಿ ಬಾಳು ಇವೆಲ್ಲಾ ಹೇಳುವಷ್ಟು ಸುಲಭವಾಗಿ ಅನುಕರಿಸಲಾಗಲ್ಲ. ಹಾಗಿದಿದ್ದರೆ ಪ್ರತೀ ನೆನಪುಗಳೊಂದಿಗೆ ಸಣ್ಣ ನೋವೇಕೆ ಕಾಡುತ್ತದೆ? ಮಿಸ್ ಮಾಡಿಕೊಳ್ಳುವ ಆ ಮಧುರ ಯಾತನೆ ಯಾವಾಗಲೂ ಮೇಘಾ ಧಾರಾವಾಹಿಯಂತೆ ಏಕೆ ಹೃದಯದ ಮೂಲೆಯಲ್ಲಿ ಚಾಲೂ ಇರುತ್ತದೆ?

ನಿಮಗೆ ಇಷ್ಟು ಕಾಡುವ ಭೂತಕಾಲಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ.. ಅಲ್ಲಿರಲು ಆಗುವುದಿಲ್ಲ. ಸ್ಕೂಲು , ಕಾಲೇಜಿನಲ್ಲಿ ಕಳೆದ ದಿನಗಳು ಮಜ-ಮಸ್ತಿಯ ಉತ್ತುಂಗದಲ್ಲಿ ಇರಬಹುದು . ಆದರೆ ಮೊದಲ ಸಂಬಳ ಕೊಟ್ಟು , ಅಸ್ತಿತ್ವಕ್ಕೆ ಒಂದು ಬೆಲೆ ಕೊಟ್ಟು , ಊಟ ಕೊಟ್ಟ , ಅನುಭವ ಕೊಟ್ಟ ಆಫೀಸೇನು ಕಡಿಮೆಯಲ್ಲ. ಬ್ರಹ್ಮಾಂಡದಲ್ಲಿ ಎಲ್ಲಾ ಇದ್ದರೂ ಎದೆಯಲ್ಲಿ ಶೂನ್ಯ ಸೃಷ್ಟಿಸಿದ ಆ ಕಳೆದುಕೊಂಡ ಸ್ನೇಹವನ್ನೋ, ಅರ್ಧದಲ್ಲೇ ಕೊನೆಕಂಡ ಪ್ರೀತಿಯನ್ನೋ ಭೇಟಿಯಾಗಿ ನೋಡಿ. ಅದೇ ರಾಗ, ಅದೇ ತಾಳದಲ್ಲಿ ಹೊಂದಿಕೆಯಾಗುವುದಿಲ್ಲ, ಕಂಡ ಮರುಕ್ಷಣ ಎಲ್ಲಾ ಹಾಗೆ ಇದೇ ಅನಿಸುತ್ತದೆ ಆದರೆ ದಿನಗಳದಂತೆ‌ ಬರೀ ಅಪಸ್ವರವೇ , ಒಂದು ಸಹನೀಯ ದೂರ ಸೃಷ್ಟಿಯಾಗುತ್ತದೆ.

ಇದಕ್ಕಿಂತ ಉತ್ತಮವಾದುದು ಏನೂ ಹಿಂದೆ ಇಲ್ಲ. ಅದಕ್ಕೆಂದೇ ಅದನ್ನು ಹಿಂದೆ ಬಿಟ್ಟು ನಾವು ಮುಂದುವರಿದದ್ದು. ಅಲ್ಲಿ ಮತ್ತೆ ಹೋಗಿ ಹುಡುಕಿದರೇ ಏನೂ ಸಿಗುವುದಿಲ್ಲ. ಅದೇ ಈಗಲೇ ನಾವು ಸುಂದರ ನೆನಪುಗಳನ್ನು ಸೃಷ್ಟಿಸಿಕೊಳ್ಳುತ್ತಾ, ಪ್ರತಿ ಹೆಜ್ಜೆಯನ್ನೂ ಹೊಸತೆಂಬ ಉತ್ಸಾಹದಿಂದ ಇಟ್ಟರೇ ಕಳೆದ ಕಾಲದ ಅಮೂಲ್ಯ ಕ್ಷಣಗಳು ಮತ್ತೆ ಸೃಷ್ಟಿಯಾಗುತ್ತದೆ. ನಾವಾಗಿಯೆ ಹಿಂದೆ ಹೋದರೆ ಯಾವುದೂ ಮರಳಿ ಬರುವುದಿಲ್ಲ, ಅದೇ ಮುಂದೆ ಸಾಗುತ್ತಿದ್ದರೆ ಮತ್ತೆ ಎದುರಾಗುವ ಸಂಭವವಿದೆ. ಭೂತಕಾಲದ ನೆನಪನ್ನು ಪ್ರೀತಿಸುವ ಹಾಗೆ ಭವಿಷ್ಯವನ್ನು ಪ್ರೀತಿಸಿ ಎಲ್ಲಾ ಒಳ್ಳೆಯದೇ ಆಗಿದೆ. ಇನ್ನೂ ಬೇಕಾದಷ್ಟು ಯಶಸ್ಸು, ಸಂತೋಷ ಮುಂದೆ‌ ಇದೆ.

image

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s