ವಕ್ರನೋಟ

ಕಾಡುವ ಮನಸಿದು ಕಾಣದ ಕಡಲಿಗೆ
ಬಯಕೆ ತೀರದ ಹಂಬಲ ಅದಾವುದು
ಓಡುತ ದಣಿದುದು ದೂರದ ಊರಿಗೆ
ಮರೆಯುತ ತನ್ನಯ ಸುತ್ತಲ ಬದುಕು

ಕಾಣುವ ಭೀಕರ ಪ್ರಪಂಚದ ಭ್ರಮೆಗೆ
ಕಣ್ಮುಚ್ಚಿ ಕುಳಿತು ವಾಸ್ತವ ಮರೆತು
ಬದುಕದೆ ನೆಪ ಹುಡುಕುವ ಹೇಡಿಗೆ
ಕನ್ನಡಿಯ ಬಿಂಬಕೆ ಮಹಾನ್ ಕನಸು

Advertisements

2 thoughts on “ವಕ್ರನೋಟ

 1. Manu aDigara ee padya nenapaytu…. Sorry for posting here without your permission….. 🙂

  ಎದೆಯು ಮರಳಿ ತೊಳಲುತಿದೆ,
  ದೊರೆಯದುದನೆ ಹುಡುಕುತಿದೆ,
  ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ,
  ತನ್ನ ಕುಡಿಯನು..

  ಸಿಗಲಾರದ ಆಸರಕೆ,
  ಕಾದ ಕಾವ ಬೇಸರಕೆ,
  ಮಿಡುಕಿ ದುಡುಕಲೆಳಸುತಿದೆ
  ತನ್ನ ಗಡಿಯನು..

  ಅದಕು ಇದಕು ಅಂಗಲಾಚಿ,
  ತನ್ನೊಲವಿಗೆ ತಾನೇ ನಾಚಿ,
  ದಡವ ಮುಟ್ಟಿ ಮುಟ್ಟದೊಲು,
  ಹಿಂದೆಗೆಯುವ ವೀಚಿ ವೀಚಿ,
  ಮುರುಟತಲಿದೆ ಮನದಲಿ.

  ನೀರದಗಳ ದೂರತೀರ,
  ಕರೆಯುತಲಿದೆ ಎದೆಯ ನೀರ,
  ಮೀರುತಲಿದೆ ಹೃದಯ ಭಾರ,
  ತಾಳಲೆಂತು ನಾ…

  ಯಾವ ಬಲವು, ಯಾವ ಒಲವು,
  ಕಾಯಬೇಕು ಅದರ ಹೊಳವು.
  ಕಾಣದೆ ದಳ್ಳಿಸಲು ಮನವು,
  ಬಾಳಲೆಂತು ನಾ…
  – ಎಂ. ಗೋಪಾಲಕೃಷ್ಣ ಅಡಿಗ

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s