ಏಳು ಎದ್ದೇಳು..

ಮುರಿದ ಮಾಡಿನ ಎದೆಯ ಗೂಡಿನ
ಮೂಲೆಯಲೊಂದು ಅಳುವ ಮಗು
ಕೈ ಬಿಡದ ನೆನಪುಗಳ ಶೋಕಗೀತೆಯ
ಹತ್ತು ಹಲವು ನೊಂದ ಸಾಲುಗಳು

ಮುಚ್ಚಿಟ್ಟ ಬೆಟ್ಟ ನಗುವಿನ ಪರದೆಯ
ಹರಿದು ಇಣುಕಿ ಕಣ್ಣೀರಿಡುತಿರಲು
ಎಲ್ಲಾ ಕಳೆದುಕೊಂಡ ಅನಾಥ ಭಾವ
ಏನೆಂದು ಹೇಳಲಾಗದು ತೀರದ ನೋವು

ಕೆಸರಲಿ ಮೈಮರೆತ ಬುದ್ದಿಗೇಡಿ ಮನವ 
ಆರೈಸಿ,ಆಲೈಸಿ,ಅಧಿಗಮಿಸಿ ತಿದ್ದಿ ತಂದು
ಮತ್ತೆ ಶರೀರದೊಳು ಪ್ರತಿಷ್ಠಾಪಿಸುವ ಛಲ
ಹೃದಯಲಿ ಕೀವು ಹಂಬಲದಲಿ ಬದುಕು

ಜೀವನಚಕ್ರದ ಜೊತೆ ಸಾಗಬೇಕು ನಗುತ
ಸಿಗದ ದ್ರಾಕ್ಷಿಯ ಹುಚ್ಚು ಪ್ರೀತಿಯ ತೊರೆದು
ಹೋರಾಟದ ಸವಾರಿಯಲಿ ಮನದ ಅಶ್ವವ
ಉತ್ಸಾಹದ ಪನ್ನೀರಲಿ ಮತ್ತೆ ತೊಳೆದು

image

8 thoughts on “ಏಳು ಎದ್ದೇಳು..

  1. ನೊಂದ ಅತ್ಮಕ್ಕೆ ಕನಸುಗಳ ತಿನಿಸುಣಿಸಿ ಮುನ್ನುಗ್ಗುವ, ಸಬಲರಾಗುವ ಧನಾತ್ಮಕ ಆಶಯದ ಕುದುರೆಯೇರಿದೆ ಕವನದ ತಿರುಳು.. ಆ ಅಶ್ವದ ಬೆನ್ನೇರಿ ಹೊರಟ ಧೀರ ವ್ಯಕ್ತಿ/ವ್ಯಕ್ತಿತ್ವಗಳು ಅಭಿನಂದನಾರ್ಹರು. ಕವನ ಚೆನ್ನಾಗಿದೆ.

    Liked by 3 people

    1. ಎಲ್ಲವೂ ಒಳ್ಳೆಯ ಕೊನೆಯನ್ನೇ ಕಾಣಬೇಕು, ಕಾಣುತ್ತವೆ. ಹಾಗೆ ಆಗಿಲ್ಲವೆಂದರೆ ಮುಗಿದಿಲ್ಲವೆಂದೇ ಅರ್ಥ..
      ಧನ್ಯವಾದಗಳು

      Liked by 3 people

  2. ತುಂಬ ಚೆನ್ನಾಗಿದೆ! “ದ್ರಾಕ್ಷಿಯ ಹುಚ್ಚು ಪ್ರೀತಿಯ” ಎಂದಿರಿ ನೀವು ನಾನು ಅರ್ಥ ಹುಡುಕುತ್ತ ಹೊರಟೆ – ಆದ್ರೆ ಸಿಕ್ಕಿದು ಸಾರಾಯಿ ಮತ್ತು ಇನ್ನೇನೋ

    Liked by 1 person

Leave a comment