ಬಿಗ್ ಬಾಸ್ ನಲ್ಲಿ ಕಿಟ್ಟಿ

image

ಕೆಲವೊಂದು ಸಲ ಬರೆಯೋದು ಏಕೆ ಎಂದು ಅನಿಸುತ್ತದೆ. ಒಂದು ಸಾರಾಂಶವಾಗಲಿ, ಸಂದೇಶವಾಗಲಿ, ಸಂದರ್ಭವಾಗಲಿ, ಸುದ್ದಿಯಾಗಲಿ ಅಥವಾ ಕೊನೆಪಕ್ಷ ಸಂದೇಹವಾಗಲಿ ಇಲ್ಲದಿರುವಾಗಲೂ ಬರೆಯುವ ಮನಸಾಗುತ್ತದೆ. ಅದು ಕೇವಲ ಸಂವಹನಕ್ಕೆ ಮಾತ್ರ, ಸುಮ್ಮನೆ ಕುಳಿತು ಮಾತನಾಡುವ ಹಾಗೆ. ಈಗ ಹೇಳ ಹೊರಟಿರುವುದು ಹಾಗೆಯೇ …. ಸುಮ್ಮನೆ ಒಂದು ಹರಟೆ.

ಮಾತನಾಡದೆ, ಬರೆಯದೆ, ಯೋಚಿಸದೆ,  ಒಟ್ಟಿನಲ್ಲಿ ಏನೂ output ಇಲ್ಲದೆ ಇರುವಾಗ ಸಿಗುವುದು big boss. ಈ big boss ಪೂರ್ವ ಯೋಜಿತವಿರಲಿ ಅಥವಾ ಇನ್ನೇನೇ ಇರಲಿ. ನಾನಿದರ ಮೇಲೆ ಒಂದು ಕಣ್ಣಿಟ್ಟಿರುತ್ತೇನೆ. ಮಾನವರ ವಿವಿಧ ವಾನರ ಮುಖಗಳನ್ನು ಅನಲೈಸ್ ಮಾಡುವುದು ಒಂಥರಾ ಇಲ್ಲಿ ಸುಲಭ.

ಹೀಗೆ ನೋಡಿಕೊಂಡು, ಆಡಿಕೊಂಡು ಬಂದ ಈ ಮನೆ ವಿಚಾರಗಳು ಮೊನ್ನೆ ಸ್ವಲ್ಪ ಜಾಸ್ತಿನೇ ಯೋಚಿಸುವಂತೆ ಮಾಡಿತು. ಈ ಆಟಗಾರರಲ್ಲಿ ಒಬ್ಬ ಸುನಾಮಿ ಕಿಟ್ಟಿ. ಈತನ ಫ್ಲ್ಯಾಷ್ ಬ್ಯಾಕ್ ಅಂದರೆ ತರಕಾರಿ ಮಾರುತ್ತಿದ್ದ ಓದು ಬರಹ ಬಾರದ ಒಬ್ಬ ಹಳ್ಳಿ ಗಮಾರ.ಇಂಡಿಯನ್ ಎಂಬ ರಿಯಾಲಿಟಿ ಷೋನಲ್ಲಿ ತುಂಬಾ ಕಷ್ಟ ಪಟ್ಟು, ಗಣನೀಯ ಸಾಧನೆ ಮಾಡಿ ಒಮ್ಮತದಿಂದ ಗೆದ್ದು ಬಂದವ. ನಿಷ್ಠೆ,  ಶ್ರದ್ಧೆ,  ಶಕ್ತಿ ಇವೆಲ್ಲಕ್ಕೂ ಅತ್ಯಂತ ನ್ಯಾಯ ಒದಗಿಸುವವನು. ಅನಂತರ ಡ್ಯಾನ್ಸಿಂಗ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ನೃತ್ಯ ಪ್ರವೀಣರ ನಡುವೆ ಹಗಲು ರಾತ್ರಿ ಶ್ರಮವಹಿಸಿ ಕುಣಿದು ಮತ್ತೆ ವಿಜಯಿಯಾದವನು. ಹೀಗೆ ಎಲ್ಲೇ ಇದ್ದರೂ ಮುಗ್ಧತೆಯಿಂದ 100% ಪ್ರಯತ್ನ ಹಾಕಿ, ಅದಕ್ಕಿಂತಲೂ ಹೆಚ್ಚು ಆತ್ಮ ವಿಶ್ವಾಸವಿಟ್ಟುಕೊಳ್ಳುವವನು. ಹೀಗಿರುವಾಗ ಬಿಗ್ ಬಾಸ್ ಗೆ ಇವನು ಸ್ಪರ್ಧಿಯಾಗಿ ಪಾಲ್ಗೊಳ್ಳುತ್ತಾನೆ.

ಈ ಕಾರ್ಯಕ್ರಮವೇ ವಿಚಿತ್ರ. ಇಲ್ಲಿ ಹೆಸರು ಗಳಿಸಿದ ಜನ ಅವರದೇ ಆದ ವಿಶೇಷ ವ್ಯಕ್ತಿತ್ವದಲ್ಲಿ ಇರುತ್ತಾರೆ. ಭಾಷೆ, ಆಧುನಿಕತೆ, ಆಚಾರ, ವಿಚಾರ ಇವುಗಳ ಅರಿವೇ ಇಲ್ಲದ ಕಿಟ್ಟಿ ಇವೆಲ್ಲವೂ ಅತ್ಯಧಿಕವಾಗಿ, ಅನವಶ್ಯಕ ತೋರಿಕೆಯಾದ ಜಾತ್ರೆಯ ಬಯಲಿಗೆ ಬಂದು ಬಿಡುತ್ತಾನೆ. ತುಂಬಾ ಬುದ್ಧಿವಂತ(ವಿದ್ಯಾವಂತನಲ್ಲ), ಬಲಿಷ್ಟ, focussed, ಒಳ್ಳೆಯ ಮನುಷ್ಯ ಈತ, ಆದರೆ ಇಲ್ಲಿ ಹೆಣಗುವುದು ನೋಡಿದರೆ ಆಶ್ಚರ್ಯ ಅನಿಸುತ್ತದೆ. ಎಲ್ಲಾ ಒಳ್ಳೆಯ ಗುಣಗಳು ಒಬ್ಬರಲ್ಲೇ ಇರುವುದು ಅಸಾಧ್ಯ, ತಪ್ಪುಗಳು ಎಲ್ಲರಲ್ಲಿಯೂ ಸಾಮಾನ್ಯ, ಯಾರೂ ಕೂಡ ಪರ್ಫೆಕ್ಟ್ ಅಲ್ಲ. ಆದರೆ ಈ ಹಂತವನ್ನು ಮೀರುವ ಛಲ, ಹಂಬಲ ಅವನಲ್ಲಿ ಅತೀವವಾಗಿತ್ತು. ತಾರೆಗೆ ನೆಗೆಯಲು ಪದಶಃ ತಯಾರಾಗಿದ್ದ. ಈ ಜೀವನ ಪ್ರೀತಿಯೇ ಗೆಲುವು, ಇದೇ ಜೀವನ.

ಆದರೆ ಅಂತ್ಯದಲ್ಲಿ ಗುರಿಯು ಸೋಲಾದರೆ ಅಸಹನೀಯ. ಬೆಡಗಿನ, ನಾಜೂಕುತನದ, ಚೆಲ್ಲಾಟದ ರಂಗಿನ ಎದುರು ನೈಜತೆಯ ಬಣ್ಣ ಮಾಸಿತು. ಭಾವನೆಗಳ ಜೊತೆಗೆ ಆಡಿ, ಅದರಲ್ಲೇ ಕಲಿತು ಮುಂದುವರಿಯುತ್ತಿದ್ದ ಕಿಟ್ಟಿಯ ಆಟ ಹಠಾತ್ ಕೊನೆಗೊಂಡಿತು. ನೂರಕ್ಕೆ ನೂರರಷ್ಟು ತೊಡಗಿ ಕೊಂಡಿದ್ದ, ಗೆಲ್ಲಲೆಂದೇ ಅಲ್ಲಿ ಪ್ರತಿ ಕ್ಷಣವೂ ಹೊಂದಿಕೊಂಡ, ತಿದ್ದಿಕೊಂಡ ಗುಣಗಳು ಸತತವಾಗಿ ಕಣ್ಣೀರು ಹರಿಸಿತ್ತು.

ಬಿಗ್ ಬಾಸ್ ಗೆಲ್ಲಲು ಬಹಳಷ್ಟು ಅಂಶಗಳು ಕಾರಣವಾಗುತ್ತದೆ. ಆದರೆ ಫೈನಲ್ಸ್ ನ ಅದ್ದೂರಿಯಲ್ಲಿ ಇರಬೇಕಾದ ಸ್ಪರ್ಧಿಯನ್ನು ಚಾನೆಲ್ ನ ತಂತ್ರ ಕಡೆಗಾಣಿಸಿತೇನೋ ಅನಿಸುತ್ತದೆ.

Advertisements

2 thoughts on “ಬಿಗ್ ಬಾಸ್ ನಲ್ಲಿ ಕಿಟ್ಟಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s