ಕುವೆಂಪು ಜಯಂತಿ

ಕುವೆಂಪು ನಮ್ಮ ಮಲೆನಾಡಿನವರು … ಎಷ್ಟೋ ಬಾರಿ ಕುಪ್ಪಳಿ ನೋಡಿ ಇಲ್ಲಿ ಯಾರಿದ್ದರೂ ಕವಿಗಳೇ ಆಗುತ್ತಿದ್ದರು ಅಂದುಕೊಂಡಿದ್ದುಂಟು. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿಯಂತ ದಪ್ಪ ಕಾದಂಬರಿಗಳನ್ನು ಕನ್ನಡಕ್ಕೆ ಕೊಟ್ಟಿದ್ದರೂ ಹತ್ತಿರವಾಗಿದ್ದು ಅವರ ಕವನದ ಸಾಲುಗಳು…

image

image

image

image

image

ಸೌಂದರ್ಯದ ವರ್ಣನೆಯಲ್ಲಿ ತಾತ್ವಿಕ ಚಿಂತನೆಯನ್ನು ಜೊತೆಗೂಡಿಸಿ ಸೃಷ್ಟಿಸಿದ ಆ ಸಾಲುಗಳು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಆದರೂ ಕಾಡುವ, ಸೆಳೆಯುವ, ಮತ್ತೆ ಮತ್ತೆ ಗುನಗುನಿಸುವಂತೆ ಮಾಡುವ ಅಯಸ್ಕಾಂತೀಯ ಶಕ್ತಿಯಿದೆ..

ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ, ಸತ್ತಂತಿಹರನು ಬಡಿದೆಚ್ಚರಿಸು, ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿವನಿಲ್ಲದ ಸೌಂದರ್ಯವೇ ಶವ ಮುಖದ ಕಣ್ಣೋ, ತೇನವಿನಾ ತೃಣಮಪಿ ನಚಲತಿ ತೇನವಿನಾ, ಯಾವ ಜನ್ಮದ ಮೈತ್ರಿ, ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೇ, ಕನ್ನಡ ಎನೆ ಕಿವಿ ನಿಮಿರುವುದು, ಎಲ್ಲ ತತ್ವದೆಲ್ಲೆ ಮೀರಿ,ದೇವರು ರುಜು ಮಾಡಿದನು, ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ..

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ವಿವೇಕಾನಂದ ಪುಸ್ತಕದ “ಯಾರಿವನು” ಅಧ್ಯಾಯ ಮರೆಯಲಾಗದಂತೆ ಕಟ್ಟಿ ಕೊಟ್ಟವರು ಕುವೆಂಪು. ಇವೆಲ್ಲದರ ಜೊತೆಗೆ ಕನ್ನಡಕ್ಕೆ ಅವರ ಅಮೂಲ್ಯ ಕೊಡುಗೆ ಎಂದರೆ ಪೂರ್ಣ ಚಂದಿರ ತೇಜಸ್ವಿ 🙂 🙂 🙂 🙂 ..ಅದಕ್ಕೆಂದೇ ಇವತ್ತಿನ ದಿನ ಮತ್ತೊಮ್ಮೆ “ಅಣ್ಣನ ನೆನಪು”.

4 thoughts on “ಕುವೆಂಪು ಜಯಂತಿ

  1. ನಿಜದಿ ಕನ್ನಡ ಕುಲದ ಪ್ರದೀಪ
    ಮಲೆನಾಡ ಮೇಘದಂತೆ ತೊನೆದು ಎಮ್ಮನವ
    ಕಲಶವನಿತ್ತು ಭುವನೇಶ್ವರಿಯ ಮೆರೆಸಿಪ
    ನಿನಗೆ ಪ್ರಣಾಮವು ಕವಿಪುಂಗವ ವಿಶ್ವಮಾನವ

    Liked by 1 person

Leave a comment