ಓಂಕಾರನಾದ

ನೀಗಿಸು ಬಾಳಿನ ಅಹಂ.. ಅಹಂ .. ಅಹಂ.. ಮಾನಸ ಮಂದಿರದಲ್ಲಿ.. ಬರೀ ಈ ಒಂದುವರೆ ಸಾಲಿಗೆ ನೋಡಬೇಕೆನಿಸಿದ್ದು “ಓಂ” ಚಿತ್ರ. ಆದರೆ ಅಮೆರಿಕ ಅಮೆರಿಕ, ಗೀತ, ಶ್, ಬಾ ನಲ್ಲೆ ಮಧು ಚಂದ್ರಕೆ, ಅಮೃತ ವರ್ಷಿಣಿ ಚಿತ್ರಗಳನ್ನು ಟಿವಿಯಲ್ಲಿ ನೋಡಿ ಆನಂದಿಸಿದ ಹಾಗೆ ಓಂ ನೋಡಲು ಅವಕಾಶವಿರಲಿಲ್ಲ. ವರ್ಷಗಳ ನಂತರ ಅದೊಂದು ಮಧ್ಯಾಹ್ನ ಸುಮ್ಮನೆ ಅಲೆಯುತ್ತಾ ಫೋರಂ ಗೆ ಕಾಲಿರಿಸಿದಾಗ ಕಂಡಿದ್ದು ಶಿವ ರಾಜಕುಮಾರ ಕೈಯಲ್ಲಿ ಲಾಂಗು,  ಬೆದರಿ ನಿಂತಿದ್ದ ಪ್ರೇಮ. ಹಠಾತ್ತನೆ ಉದಯ ಟಿವಿಯಲ್ಲಿ ಕರೆಂಟ್ ಇರುವಾಗ ಒಳ್ಳೆ ಮೂವಿ ಸಿಕ್ಕಂತಾಯಿತು.

ಈ ಚಿತ್ರ ಇಪ್ಪತ್ತು ವರ್ಷ ಹಳೆಯದು(1995 ರಲ್ಲಿ ಮೊದಲು ತೆರೆ ಕಂಡಿದ್ದು), ಈ ಇಪ್ಪತ್ತು ವರ್ಷಗಳಲ್ಲಿ ನಮ್ಮ ಬದುಕಿನಲ್ಲಿ ಲ್ಯಾಂಡ್ ಲೈನ್ ಮೊಬೈಲಾಗಿಯು, ದೋಸೆ ಪಿಜ್ಜಾವಾಗಿಯು, ಊರು ಬೆಂಗಳೂರಾಗಿಯು ಬದಲಾಗಿತ್ತು. ಇಪ್ಪತ್ತು ವರ್ಷ ಹಿಂದೆ ಹೋಗಿ ಆ ಆದಿ ಮಾನವರ ಬದುಕು ನೋಡಿ ನಗಲೆಂದೇ ಟಿಕೆಟ್ ತೆಗೆದುಕೊಂಡು ಕುಳಿತಿದ್ದೆ.

ಆದರೆ ನೋಡಿದ್ದೆಲ್ಲವೂ ಬರೀ ಅಚ್ಚರಿಯೇ…. ಈಗಿನ ಯಾವ ಚಿತ್ರವೂ ಮಾಡಲಾಗದ ಮೋಡಿಯದು. ಎಷ್ಟು ಸತ್ಯಕ್ಕೆ ಹತ್ತಿರವಾಗಿತ್ತೆಂದರೆ ಹೀರೋನೆ ವಿಲನ್ ಆಗಿದ್ದ. ಹೀರೋಗೆ ರೈಲು ಹಾರುವ ಶಕ್ತಿ ಇರಲಿಲ್ಲ, ಮನೆ ಜವಾಬ್ದಾರಿಯ ‘ಭಯ’ವಿತ್ತು. ಪ್ರೀತಿ .. ಜೀವ ಕೊಡುವ ಗೆಳೆತನವಾಗಿರಲಿಲ್ಲ,  ಜೀವನವನ್ನೇ ತೆಗೆಯುವ ವಾಸ್ತವವಾಗಿತ್ತು. ಬದುಕಿನ ಅತೀ ಸುಂದರ ಮುಖವನ್ನೇ ತೆರೆಯ ಮೇಲೆ ತಂದು ಸುಖದ ಭ್ರಾಂತಿ ಉಂಟು ಮಾಡುವುದು ಈಗಿನ ಸಿನಿಮಾಗಳು. ಆದರೆ ಓಂ ತೋರಿಸಿದ್ದು ವಾಸ್ತವ,  ಅದರಲ್ಲೂ ಕಟು ವಾಸ್ತವವನ್ನು ಬಿಚ್ಚಿಟ್ಟು ಅದಕ್ಕೆ ಉತ್ತರವನ್ನು ಕೂಡ ಕೊಡುತ್ತದೆ.

ಸ್ನೇಹ ಕೊನೆಗಾಣುವ ಆ ಮೆಟ್ಟಿಲು, ಪ್ರೀತಿಯ ಬಲೆ ತರುವ ನಷೆ, ಕುಟುಂಬದ ಕೊಂಡಿ ಜಾರಿದಾಗ ಆಗುವ ವ್ಯಥೆ, ತಪ್ಪು ದಾರಿ ಹಿಡಿದು ಹೊರಬರಲಾಗದ ಹುಚ್ಚುತನ ಇವೆಲ್ಲವೂ ಗೆಳೆತನ, ಪ್ರೇಮ,ಬಾಂಧವ್ಯ  ಹೀರೊಯಿಸಂಗಳ ಮತ್ತೊಂದು ಮುಖ ಅಥವಾ ಮುಚ್ಚಿಟ್ಟಿರುವ ಮುಖ. ಇದನ್ನು ಹೊರತೆಗೆದು ಅದಕ್ಕೆ ಉತ್ತರ ಹುಡುಕಿ ಅದನ್ನು ತೆರೆಯ ಮೇಲೆ ಯಶಸ್ವಿಯಾಗಿ ಪ್ರದರ್ಶನ ಮಾಡಿದ ಓಂ ಒಂದು ಅದ್ಭುತ ಕಥನ. ಒಮ್ಮೆ ನೋಡಿದರೆ ವಿಶ್ಲೇಷಣೆಯ ಬಂಡಿಯಲ್ಲಿ ಸಾಗಿಸುತ್ತಲೇ ಇರುವ ಮರೆಯಲಾಗದ ಚಿತ್ರ.

ಇದಿಷ್ಟು ಕಥೆಯ ಬಗೆಯಾದರೆ ಶಿವಣ್ಣನಿಗೆ ಮಾಸ್ ಲುಕ್ ತಂದು ಕೊಟ್ಟ ಹೆಗ್ಗಳಿಕೆ, ಸತ್ಯ ಕಥೆಯನ್ನು ಸತ್ಯನ ಕಥೆಯಲ್ಲಿ ತೋರಿಸುತ್ತಾ ನಿಜವಾದ ರೌಡಿಗಳನ್ನೇ ಹಾಕಿಕೊಂಡು ಮಾಡಿದ ಸಾಕ್ಷಿ ಚಿತ್ರ. ಹಳೆಯ ಮೆಜಸ್ಟಿಕ್, ಜಯನಗರದ ಗಲ್ಲಿಗಳನ್ನು ನೋಡುತ್ತಿದ್ದರೆ ಇದು ಒಂದು ಡಾಕ್ಯುಮೆಂಟರಿ ಅನಿಸುತ್ತದೆ. ಪ್ರೇಮ ಕೂಡ ಸಹಜವಾಗಿ ನಟಿಸಿ ಯಶಸ್ಸಿನಲ್ಲಿ ಪಾಲುದಾರರಾಗುತ್ತಾರೆ.

550 ರಿಲೀಸಗಳನ್ನು ಕಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸವಾಯಿತು. ರಾಜ್ ಕುಮಾರ್ ಕೂಡ ಚಿತ್ರದ ಉದ್ದಕ್ಕೂ ನಿಂತು ಸಹಕರಿಸಿದ್ದಾರೆ. ಅವರೇ ಬರೆದ ಓಂ ಟೈಟಲ್ ಡಿಸೈನ್ ಆದುದು ಅಚ್ಚರಿಯ ಸಂಗತಿ. ಹಂಸಲೇಖ ಸಂಗೀತ ನಿರ್ದೇಶನದ ಹಾಡುಗಳು ಕಿರೀಟವಿಟ್ಟಂತಿದೆ. ರಾಜ್ ಕಂಠಸಿರಿಯ “ಹೇ ದಿನಕರ” ಮತ್ತು “ಓ ಗುಲಾಬಿಯೇ” ಹಾಡುಗಳ ಸಾಹಿತ್ಯ ಎಲ್ಲಾ ಕಾಲಕ್ಕೂ ಇಷ್ಟವಾಗುತ್ತದೆ. “ಮೆಹಬೂಬ” ವಂತೂ ವಿಚಿತ್ರವಾಗಿ ದನಿಮಾಡಿ ಮನಸ್ಸು ಗೆಲ್ಲುತ್ತದೆ. “ಪ್ರೇಮ – ಕೋಮ” ಇಂದಿಗೂ ಜನಜನಿತ. ಉಪ್ಪಿ ಡೈರೆಕ್ಷನ್ ಮತ್ತು ಶಿವ ರಾಜಕುಮಾರರ ಅದ್ಬುತ ನಟನೆಯ ಅತ್ಯುತ್ತಮ ಪ್ರಯತ್ನ ಕನ್ನಡದಲ್ಲಿ ಮೈಲುಗಲ್ಲಾಗಿ ಒಂದು ಹೊಸಯುಗವನ್ನೇ ಸೃಷ್ಟಿಸಿತು.

Advertisements

4 thoughts on “ಓಂಕಾರನಾದ

  1. ಈಚೆಗೆ ನೋಡಿಲ್ಲವಾದರೂ ನೋಡಿದ ಆ ಹೊತ್ತಲ್ಲಿ ಒಂದು ರೀತಿಯ ದಿಗ್ಭ್ರಮೆ ಹಿಡಿಸಿದ ಚಿತ್ರ ‘ಓಂ’. ನೀವು ಹೇಳಿದ ಎಲ್ಲಾ ಅಂಶಗಳ ಜತೆಗೆ ಪರಿಸ್ಥಿತಿಯ ಕೈಗೊಂಬೆಯಾಗಿ ಸಿಕ್ಕಬಿದ್ದ ವ್ಯಕ್ತಿತ್ವವೊಂದು ಹಿಡಿಯುವ ದಾರಿಗೆ ಹೇಗೆ ಸಾಮಾಜಿಕ ಮತ್ತು ಪರಿಸರಿಕ ಅಂಶಗಳು ಪ್ರಭಾವ ಬೀರುತ್ತವೆನ್ನುವುದನ್ನು ಮನೋಜ್ಞವಾಗಿ, ನೈಜವಾಗಿ ಪ್ರೇಕ್ಷಕನಿಗೆ ತಲುಪಿಸಿದ ಚಿತ್ರ. ಚಿತ್ರಮಂದಿರದಲ್ಲಿ ಕೂತು ಮೊದಲ ಬಾರಿಗೆ ನೋಡಿದಾಗ ಮೈ ‘ಜುಂ’ ಅನಿಸುವಂತೆ ಮಾಡಿದ ಅನುಭವವನ್ನು ಮತ್ತೆ ನೆನಪಿಸಿತು ನಿಮ್ಮ ಲೇಖನ 🙂

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s