ಕಾಫಿಯ ಜೊತೆ ಮಾತುಕತೆ

ಕಾಫಿ ಅಥವಾ ಟೀ ಯಾವತ್ತೂ ಚಟ ಅಂತ ಆಗಿರಲಿಲ್ಲ. ಮಲೆನಾಡಿನ ಬಿಡದ ಮಳೆಯಲ್ಲೂ, ಕುಳಿರ್ಗಾಳಿಯ ಚಳಿಯಲ್ಲೂ ಅಮ್ಮ ಕೈಗೆ ಕಾಫಿ ತಂದು ಕೊಟ್ಟರೆ ಟಿವಿಯ ಮೇಲಿನ ಕಣ್ಣು ಕದಲಿಸದೆ ಒಂದೇ ಗುಟುಕಿಗೆ ಮುಗಿಸುತ್ತಿದ್ದೆ. ಅದು ಲೋಟ ಜಾರಿಸುವ ಆತುರವೋ, ಅದರೊಂದಿಗಿನ ಹಪ್ಪಳದ ರುಚಿ ಹೆಚ್ಚು ಅನಿಸುವುದಕ್ಕೋ , ಊಟದ ಹಾಗೆ ಬಲವಂತವಾಗಿ ಕಾಫಿ/ ಹಾಲು ಕುಡಿಯುವುದು  ಕೂಡ ಒಂದು ಮುರಿಯಲಾರದ ನಿಯಮದಂತಾಗಿತ್ತು, ಅಪ್ಪನ ಹಾಗೆ ಅನುಭವಿಸುತ್ತಾ ಗಾಢ ಯೋಚನೆಯಲ್ಲಿ ಮುಳುಗಿ ಅರ್ಧಗಂಟೆ ಕುಡಿಯುವುದು ನನಗೆ ಬರಲೇ ಇಲ್ಲ. ಕೆಲವೊಮ್ಮೆ ನೆಂಟರ, ಅವರಿವರ ಮನೆಯ ಚೂರು ಕಾಫಿ ಇಷ್ಟವಾಗುತ್ತಿತ್ತಾದರೂ ಅದು ‘ಇಷ್ಟ’ ದ ಗಡಿ ಮುಟ್ಟಿತ್ತೇ ಹೊರತು ದಾಟಲಿಲ್ಲ. ಮನೆ ತೊರೆದು ಓದಲು ಶಿವಮೊಗ್ಗ ಸೇರಿದ ಮೇಲೆ ಹಾಸ್ಟೆಲ್ ನಲ್ಲಿ, ಮಧ್ಯಾಹ್ನ ಊಟದ ನಂತರ ತೀರ ಸ್ನಾಕ್ಸ್ ಗೆ ಕಾಯುವಾಗ ಕಾಫಿ ಕೂಡ ಕೇವಲ ಒಂದು ಹಸಿವು ಕಳೆಯುವ ದ್ರಾವಣವಾಗುತ್ತಿತ್ತು. ಇಲ್ಲದಿದ್ದರೆ ಹುಡುಗಿಯರ ಮಾತಿನ, ನಗುವಿನ ಅಲೆಯೊಡನೆ ಸೇರಿ ಡೈಲ್ಯೂಟ್ ಆಗುತ್ತಿತ್ತು. ಎಲ್ಲೂ ವ್ಯಾಮೋಹವಾಗಲಿ, ಚೂರು ಹೆಚ್ಚು ಆಸ್ಥೆಯಾಗಲಿ ಬರಲಿಲ್ಲ.

ಆದರೆ ಕಾಫಿಲೋಕಕ್ಕೆ ಹತ್ತಿರವಾಗಿದ್ದು ಬೆಂಗಳೂರಿನಲ್ಲಿ . ಕೆಫೆ ಕಾಫಿ ಡೇಯ ಅಚ್ಚ ಬಿಳಿಯ ಕಪ್ಪುಗಳಲ್ಲಿ , ಕಪ್ಪನೆಯ ಛೇರಿನಲ್ಲಿ ಕಾಫಿಯ ಶ್ರೀಮಂತಿಕೆ ಆಕರ್ಷಿಸುತ್ತಿತ್ತು. ಆದರೂ ಇಡೀ ಮೆನುವಿನಲ್ಲಿ ಟೇಸ್ಟ್ ಅಷ್ಟೇನೂ ಸೆಳೆಯಲಿಲ್ಲ. ಕಂಪ್ಯೂಟರ್ ಬಿಟ್ಟರೆ ಅವಳೊಬ್ಬಳು ತುಂಬಾ ಹತ್ತಿರದ ಫ್ರೆಂಡ್ ಆಗಿಬಿಟ್ಟಳು. ಬೆಳಿಗ್ಗೆ, ಸಂಜೆ ಟೀ ಗೆ ಎಳೆಯುತ್ತಿದ್ದವಳು ಅವಳೇ. ಪ್ಲೇನ್ ಟೀ, ಜಿಂಜರ್ ಟೀ, ಲೆಮನ್ ಟೀ, ಗ್ರೀನ್ ಟೀ,ಬ್ಲಾಕ್ ಟೀ,ಮಸಲಾ ಟೀ, ಐಸ್ ಟೀ ಹೀಗೆ ನೂರೆಂಟು ಟೀ ವಿಧಗಳು . ಇಲ್ಲೂ ಕೂಡ ಟೀ ಗಿಂತ ಕೆಲಸದ ನಡುವಿನ ಬ್ರೇಕ್ ಹೆಚ್ಚು ಆಪ್ಯಾಯಮಾನವಾಗುತ್ತಿತ್ತು. ಮತ್ತೆ ಕಾಫಿಯ ನೆನಪಾಗಿದ್ದು ನೆಸ್ ಕೆಫಯಿಂದ, ಸ್ವಲ್ಪ ದಿನ ಅದನ್ನೇ ಕೇಳಿ ತೆಗೆದುಕೊಳ್ಳುವಂತೆ ಮಾಡಿತ್ತಾದರೂ ಮನಸ್ಸು  ಪರಿಮಳಯುಕ್ತ ಮಾಮೂಲಿ ಕಾಫಿಯನ್ನು ಗ್ರಹಿಸಿಬಿಟ್ಟಿತ್ತು.

image

ಮೊನ್ನೆ ಮೊನ್ನೆಯವರೆಗೆ ಟೀ, ಕಾಫಿಯೆಂದರೆ ಒತ್ತಾಯ ಮಾಡಿ ಕರೆದಾಗ, ಒಂದು ಬ್ರೇಕ್ ಗೆ, ಯಾವುದೋ ಗಹನವಾದ ಗಾಸಿಪ್ ಗೆ, ತುಂಬಾ ಬೋರಾದಾಗ, ಏನೋ ಟೆನ್ಷನ್ ಗೆ, ಬೇಜಾರಿಗೆ, ಖುಷಿಗೆ ಒಟ್ಟಿನಲ್ಲಿ ಹೀಗೆ ಟೈಂ ಪಾಸ್ ಮಾಡಲು ನಮ್ಮ ಗಾಡಿಗೆ ಹಾಕುವ ಇಂಧನ ಅಂದುಕೊಂಡಿದ್ದೆ. ಆದರೆ MDP ಯ ಫಿಲ್ಟರ್ ಕಾಫಿಯ ಒಂದು ಸಿಪ್ ನ ನಂತರ ಕಾಫಿಯೆಂದರೆ ಜಾದೂನೇನೋ ಅನಿಸುತ್ತದೆ. ಅದೊಂದರ ಗುಟುಕಿಗಾಗಿ ನೆಪವೊಡ್ಡಿ ಹೋಗಬೇಕಾಗಿದೆ. ಇಷ್ಟು ವರ್ಷ ಕುಡಿದ ಎಲ್ಲಾ ಕಾಫಿಯ ರುಚಿಯನ್ನು ಮತ್ತೆ ನೆನಪಿಸುತ್ತದೆ. ಸುಂದರ ಬೆಳಗು ಶುರುವಾಗುವಲ್ಲಿ ಕಾಫಿಯ ಹಿತವಾದ ಪರಿಮಳವಿರುತ್ತದೆ. ಸುಸ್ತಾದ ಸಂಜೆಯಲಿ ಆಕಾಶ ನೋಡುತ್ತಾ ಹೀರುವ ಕಾಫಿಯು ಸೂರ್ಯಾಸ್ತವನ್ನು ಇನ್ನಷ್ಟು ರಂಗೇರಿಸುತ್ತದೆ. ನೊರೆ ನೊರೆಯ ಬಿಸಿಯಲ್ಲಿ ಎಡಬಿಡದೆ ಮಾತನಾಡಿದ ಗಂಟಲನ್ನು ಉಪಚರಿಸುವ ಶಕ್ತಿ ಕಾಣುತ್ತದೆ. ಕಾಫಿಯ ಸಮಯಕ್ಕೆ ಕಾಫಿಯೇ ಈಗ ಕ್ಲೋಸ್ ಫ್ರೆಂಡ್ ಆಗಿಬಿಟ್ಟಿದೆ.

Advertisements

2 thoughts on “ಕಾಫಿಯ ಜೊತೆ ಮಾತುಕತೆ

 1. ಕಾಫಿ ಅದರಲ್ಲು ಸರಿಯಾದ ಕಾಫಿ ಜತೆಯಾಗಿಬಿಟ್ಟರೆ ಅದನ್ನು ಬಿಟ್ಟರಿಲ್ಲ – ಸಖನಂತೆ ಸುಖ ನೀಡುತ್ತದೆ.

  ಕಾಫಿಯೆಂಬ ಸಖ ನೀಡುವ ಸುಖ
  ಬರಿ ಮಾತಿಗಲ್ಲ ಅನುಭವಿಸಬೇಕ
  ತೆರುವುದಲ್ಲ ಲೆಕ್ಕ ಪರಿಸರವು ಬೋರ
  ಸರಿ ರುಚಿಯಿದ್ದರೆ ದಿನವೆಲ್ಲವು ಹಗುರ!

  ಕಾಫಿಯನ್ನು ನೆನೆಸಿದಿರಿ, ಈಗ ಇಲ್ಲಿ ಸಿಗುವ (ಕೆಟ್ಟ) ಕಾಫಿಯನ್ನೆ ಹುಡುಕಿಕೊಂಡು ಓಡಬೇಕು .. ಇದೊ ಹೊರಟೆ😊

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s