ಏಕಾಂತದ ಸಂಗಾತ

image

ಯಾರೋ ಬಂದು ಕರೆದ ಹಾಗೇಕೆ
ನಿದ್ದೆಯಿಂದೆದ್ದರೆ ಮತ್ತದೇ ಕನವರಿಕೆ
ಯಾರ ನೆರಳು ಇಲ್ಲದ ಮನದ ಬಿಸಿಲಿಗೆ
ಕಾದು ಕನಲಿದಳು ನಿರೀಕ್ಷೆಯ ಪ್ರತಿಗಳಿಗೆ

ಮಧ್ಯರಾತ್ರಿಯಲ್ಲಿ ಹೀಗೆ ಕಾಡುವರಾರು
ಕನಸಿನಲ್ಲಿ ಕರೆದು ನಿದ್ದೆ ಕದ್ದುಕೊಂಡವರು
ಎದ್ದು ಬಂದಳು ಬೇಸರದಿ ಮೈಮುರಿದು
ದಿಟ್ಟೆಯವಳು ಸರಿದಳು ಬಾಗಿಲ ತೆರೆದು

ಮನೆಯ ಹಿತ್ತಲಲಿ ಚಂದಿರ ಬೆತ್ತಲಾಗಿದ್ದ
ಚಂದ್ರಿಕೆಯ ಪರದೆಯಲಿ ಮುಚ್ಚಿಟ್ಟು ಅಂದ
ಕಲ್ಯಾಣಿಯು ಹೂವಿನಪ್ಪುಗೆಗೆ ಕಲಕಿದಾಗ
ತಂಗಾಳಿಗೂ ಮೈನಡುಗಿತು ಹಾಗೆ ಬಳುಕಿದಾಗ

ಮುಚ್ಚಿದ ಕಂಗಳ ತೆರದು ಬೆರಗಿ ನಿಂತಳು
ಯಾರು ಕರೆದದ್ದು ಈ ಚಿತ್ರ ತೋರಿಸಲು
ಮನವೆಲ್ಲಾ ತಾದ್ಯತ್ಮದಿ ತುಂಬಿ ನಿಂತಿತು 
ಜೀವಂತ ಕಲಾಕೃತಿಯ ಒಳಗೆ ತಾನೂ ಸೇರಿತು

Advertisements

7 thoughts on “ಏಕಾಂತದ ಸಂಗಾತ

 1. ನಿಮ್ಮ ಈ ಸುಂದರ ಕವನ ‘ಯೆ ರಾತೆ, ಯೇ ಮೌಸಮ್, ಯೇ ನದಿಯಾ ಕಿನಾರೆ…’ ತರಹದ ಸುಮಧುರ ಹಿಂದಿ ಗೀತೆಗಳ ನೆನಪು ಮೂಡಿಸಿತು ( ನನ್ನ ಹಿಂದಿ ಜ್ಞಾನ ಅಷ್ಟಕ್ಕಷ್ಟೆ, ಪದಗಳನ್ನು ತಪ್ಪಾಗಿ ಬರೆದಿದ್ದರೆ ಕ್ಷಮಿಸಿ). ಸಹಜ ಸುಂದರ ಪ್ರಕೃತಿಯ ಅದ್ಭುತದಲ್ಲಿ ಭಾವೋನ್ಮೇಷಕ್ಕೊಳಗಾದ ಭಾವುಕ ಮನ ತಾನೂ ಅದರಲ್ಲಿ ತಲ್ಲೀನವಾಗಿ ಒಂದಾಗಿ ಹೋಗುವುದು ಸಹಜವೆ ಬಿಡಿ – ಕೆಲ ಕ್ಷಣದ ಮಟ್ಟಿಗಾದರು. ಅಂದಹಾಗೆ ಕಣ್ತಪ್ಪಿನಿಂದ ಟೈಪಿಸಿರುವ ಆ ‘ತಾದ್ಯತ್ಮ’ ಪದವನ್ನು ‘ತಾದಾತ್ಮ್ಯ’ ವಾಗಿ ಬದಲಿಸಿ (ಅದರರ್ಥ ನೀವೆ ವಿವರಿಸಿರುವಂತೆ – ಮಗ್ನತೆ, ತಲ್ಲೀನತೆ, ಅಭಿನ್ನತೆ, ಅದೇ ಆಗಿರುವಿಕೆ ಎಂದಿದೆ) 😊

  Liked by 1 person

  1. ಆ ಹಾಡಿನಿಂದ inspire ಆಗಿ ಬರೆದದ್ದು ಹೌದು…ಇನ್ನು ತಾದಾತ್ಮ್ಯ ನಾ ಹಾಗೆ ಓದಿಕೊಂಡಿದ್ದೆ ಅದಕ್ಕೆ ಬರೆಯುತ್ತ ಕೂಡ ಹಾಗೇ ಬಂತು…ತಿದ್ದಿದಕ್ಕೆ
   ಧನ್ಯವಾದಗಳು

   Liked by 1 person

   1. ಆದರೆ ಆ ಹಾಡಿನ ಪ್ರಭಾವದ ಲವಲೇಷವೂ ಕವಿತೆಯೊಳಗೆ ಇಣುಕದ ಹಾಗೆ ನಿಭಾಯಿಸಿರುವ ರೀತಿ ಮೆಚ್ಚಿಗೆಯಾಯ್ತು. ಆ ಹಾಡಿನ ಸನ್ನಿವೇಶವೆ ಬೇರೆ (ಪ್ರೇಮಿಗಳ ರೊಮ್ಯಾಂಟಿಕ್ ಮೂಡಿನ ಹಾಡಿರಬೇಕು ಅದು) ಇಲ್ಲಿನ ಹೂರಣವೆ ಬೇರೆ (ಪ್ರಕೃತಿಯಲ್ಲಿ ಪರವಶವಾಗುವ ಭಾವ). ಹೀಗಾಗಿ ಆ ಹೋಲಿಕೆ ಸಂಪೂರ್ಣ ಸಂಗತವಲ್ಲ ಎನ್ನಬಹುದಾದರು, ಹಾಡಿನಲ್ಲಿ ತುಸು ಸುಪ್ತ ಅಮೂರ್ತವಾಗಿ ಬಳಸಿದ ಹಿನ್ನಲೆ ಕವನದಲ್ಲಿ ಮೂರ್ತವಾಗಿ ನಲಿಯುತ್ತ ಪ್ರಕಟವಾಗಿದೆ ಎನ್ನಬಹುದು – ನಿಮ್ಮ ಕಲ್ಪನೆಯ ಹೂರಣದೊಂದಿಗೆ😊

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s