ಪಾಂಚಾಲಿ ಪರ್ವ

image

ಧರ್ಮಕ್ಕೆ ಇನ್ನೊಂದು ಹೆಸರವನು. ಯುಧಿಷ್ಠಿರಯೆಂದು ಯಾರು ಕರೆದದ್ದು ನೆನಪಿಲ್ಲ. ನಾನವನ ಧರ್ಮಪತ್ನಿ, ಎಲ್ಲವನು ನಿರ್ವಂಚನೆಯಿಂದ ಮಾಡುವ ಅವನು ಬರೆದಿಟ್ಟ ಧರ್ಮಗ್ರಂಥದಂತೆ. ಬದುಕು ಕೂಡ ಹಾಗೆಯೇ ಶಾಸ್ತ್ರೋಕ್ತವಾಗಿ, ಧರ್ಮಬದ್ಧವಾಗಿ. ಆದರೆ ಯಾವಾಗಲೂ ತಪ್ಪು ಸರಿಯ ತುಲನೆ ಮಾಡಿಕೊಂಡೇ ಜೀವನ ಸವೆಸಿಬಿಟ್ಟ. ಅವನೆಡಗಿನ ನನ್ನ ಒಲವು ಮೊದಲ ಪ್ರೇಮಪತ್ರದಂತೆ, ಕೊನೆತನಕವು ಹೆಚ್ಚಾಗಲಿಲ್ಲ,  ಅಳಿಸಿ ಹೋಗಲು ನಾನೇ ಬಿಡಲಿಲ್ಲ.

ಇನ್ನು ನಕುಲ – ಸಹದೇವರು,  ಏಕೋ ಇವರಿಬ್ಬರಿಗೆ ಒಂದೇ ವ್ಯಕ್ತಿತ್ವ.  ನನಗು ಹಾಗೆಯೇ ಏನೂ ವಿಶೇಷ ಪ್ರೇಮವಾಗಲಿ, ಕೋಪವಾಗಲಿ,  ಸಲಿಗೆಯಾಗಲಿ ಬರಲೇ ಇಲ್ಲ. ಇಂದಿನವರೆಗೂ ಜೊತೆಗೆ ಇರುವ ಆತ್ಮೀಯ ಸಖಿಯರಂತೆ ಅನಿಸುತ್ತಾರೆ. ಕೆಲವೊಮ್ಮೆ ಬರೀ ಕೇಳುವ ಕಿವಿಯೇನೋ ಅನ್ನಿಸಿದರೂ ನಾನವರಿಂದ ಹೆಚ್ಚು ಅಪೇಕ್ಷಿಸಲೂ ಇಲ್ಲ.

ಮಧ್ಯಮ ಪಾಂಡವನಿಗಾಗಿ ಹೃದಯ ಮೊದಲು ಸ್ವಲ್ಪ ತುಡಿಯುತ್ತಿತ್ತು. ವಿವಾಹ ಪೂರ್ವದಲ್ಲಿ ಅಂತಃಪುರದ ಹರಟೆಯಿಂದ ಹುಟ್ಟಿದ ಭಾವವಷ್ಟೆ. ಮಾತು – ಕಥೆಯೆಲ್ಲ ತುಂಬಾ ಚಂದವೇ,  ಅವನ ಬಾಣದಷ್ಟೇ ಬಿರುಸು. ಆದರೊಮ್ಮೊಮ್ಮೆ ತೀರ ಗುಟ್ಟು ಮಾಡುತ್ತಾನೆ. ಎಲ್ಲವನ್ನು ಬಿಚ್ಚಿ ಹೇಳುವ ಗುಣವಿಲ್ಲ. ಹೆಂಗಸೆಂದರೆ ಅವನಿಗಿರುವ ಗೌರವ ಅಷ್ಟೇ ಏನೋ ಅನಿಸುತ್ತಿದೆ. ಪರಮಾತ್ಮನಿಗೆ ಪ್ರಿಯನಾದವನಾದರೂ ಅದು ಕೂಡ ಸಮ ವಯಸ್ಕರ ಸದರವೆಂದೇ ನನಗನಿಸುವುದು. ಸುಭದ್ರ, ಚಿತ್ರಾಂಗದ, ಉಲೂಚಿಯಂತ ಸವತಿಯರು ಬಂದ ಮೇಲೆ ನಾನೆಲ್ಲಿ ಕಾಣಿಸುತ್ತೇನೆ.

ಭೀಮಸೇನನಿಗೂ ಅಷ್ಟೇ,  ನನಗಿಂತ ಮೊದಲು ಹಿಡಂಬಿಯೊಡನೆ ಮದುವೆಯಾಗಿತ್ತು. ಆದರೆ ನನಗೆಂದು ಅವನು ಕಡೆಗಣಿಸಿದನೆಂದು ಅನಿಸಲಿಲ್ಲ. ಅರ್ಜುನನಂತಲ್ಲದೇ ಮಲ್ಲಯುದ್ಧದ ಪಟ್ಟುಗಳನ್ನು ಸಹ ನನ್ನೊಂದಿಗೆ ಹರಟುತ್ತಿದ್ದ. ನಿದ್ದೆ ಬಂದರೂ ಎಬ್ಬಿಸಿ ದುರ್ಯೋಧನನಿಗೆ ಧರ್ಮಾಧರ್ಮದ ಕಟ್ಟಿಲ್ಲದೇ ಹಳಿಯುತ್ತಿದ್ದ. ಮುತ್ತು,  ರತ್ನ,  ವಜ್ರ, ವೈಡೂರ್ಯಗಳ ಎಲ್ಲಾ ಆಭರಣಗಳನ್ನು ಹಾಕಿ ಗೊತ್ತಿದ್ದ ನನಗೆ ಭೀಮ ಕೊಟ್ಟ ಆ ಸೌಗಂಧಿಕ ಪುಷ್ಪವೇ ಹೆಚ್ಚು ಇಷ್ಟವಾಗಿತ್ತು. ಆದರೂ ಒಮ್ಮೊಮ್ಮೆ ತೀರ ಒರಟನಂತೆ ನಡೆದುಕೊಳ್ಳುತ್ತಿದ್ದ.

ಎಲ್ಲಾ ಅಣ್ಣ ತಮ್ಮಂದಿರು ಒಂದೇ ಅಂಶವಾಗಿಯೇ ಅನಿಸುತ್ತಿದ್ದರು. ಅದಕ್ಕೆಂದೇ ಏನೋ ಪಾಂಚಲಿ ಐದು ಬೆರಳಿರುವ ಒಂದು ಕೈಗಷ್ಟೇ ಹೆಂಡತಿಯಾಗಿದ್ದಳು. ಹಸ್ತಿನಾವತಿಯಲ್ಲಿ ಏನೇ ಮಾತನಾಡಿಕೊಂಡರೂ ನನ್ನ ಮನಸಿಗೆ ನಾನು ಸಮಾಧಾನಿಸಿಕೊಳ್ಳುತ್ತಿದ್ದೆ. ಸಮಾಜದಲ್ಲಿ ಒಬ್ಬನ ಹೆಂಡತಿಯಾಗಿ ಹೇಗೆ ಬದುಕ ಬೇಕೆಂಬ ನಿಯಮವಿದೆ . ನನ್ನಂಥವಳು ಇತಿಹಾಸದಲ್ಲಿ ಕಾಣಲೇ ಇಲ್ಲವಲ್ಲ , ನಾನು ಯಾರಂತೆ ಬದುಕಲಿ? ಅದಕ್ಕೆ ನಾನು ಸರಿ ಕಂಡ ಹಾಗೆ ಬದುಕಿದೆ. ಯಾರ ಬದುಕಲ್ಲಿ ಇಷ್ಟೆಲ್ಲಾ ಅನಾಹುತಗಳಾಗಿವೆ?  ಯಾರು ತಾನೇ ನನ್ನ ಮನಸ ಬಲ್ಲರು? ಗಾಯ ಮಾಯಲು ಕೊನೆಗೆ ಯುದ್ಧವೇ ಆಯಿತು. ಇತ್ತ ಉಳಿದ ಕೌರವರನ್ನು ಸಂತೈಸಿ , ರಾಜ್ಯ ಕಟ್ಟುವುದರಲ್ಲಿ ನೋವು ಸ್ವಲ್ಪ ಶಮನವಾಯಿತು. ಅಷ್ಟರಲ್ಲಿ ನಾನು ತೆರೆಮರೆಗೆ ಸರಿದು ನನ್ನ ಕಾಲವೇ ಮುಗಿದಿತ್ತು.

Advertisements

4 thoughts on “ಪಾಂಚಾಲಿ ಪರ್ವ

  1. ಪಾಂಚಾಲಿಯ ತಳಮಳಗಳನ್ನೆಲ್ಲ ಸ್ವತಃ ಪಾಂಚಾಲಿಯೆ ತಾನೇ ಮುಂದೆ ನಿಂತು ಹೇಳಿಕೊಂಡಷ್ಟು ಸರಾಗವಾಗಿ ಕಟ್ಟಿಕೊಟ್ಟ ಸುಲಲಿತ ಬರಹ. ತೀರಾ ವಿಶಿಷ್ಠ ಭೂಮಿಕೆ ನಿಭಾಯಿಸಬೇಕಾದ ದ್ರೌಪತಿಯ ದೃಷ್ಟಿಕೋನದಿಂದ ಹರಿದು ಬಂದ ಸ್ವಗತಗಳು ಬಹಳ ಕಡಿಮೆ. ಆ ಕೊರತೆಯನ್ನು ನಿವಾರಿಸುವ ನಿಟ್ಟಿನ ಈ ಸೊಗಸಾದ ಬರಹಕ್ಕೆ ಅಭಿನಂದನೆಗಳು..

    Liked by 2 people

  2. ತುಂಬಾ ಚಿಕ್ಕದಾಗಿ ಮುಗಿಸಿಬಿಟ್ಟೆ ಮನು. ದ್ರೌಪದಿಯ ಎಷ್ಟೋ ಭಾವಗಳು ಉಳಿದುಹೋದುವಲ್ಲಾ. ಇನ್ನೊಮ್ಮೆ ವಿಸ್ತಾರ ಬರಹ ಬರಲಿ on this matter 😊

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s