ಮಳೆಗಾಲದ ಹೈಸ್ಕೂಲ್ ..

image

ಪುಟ್ಟ ಕೈಗಳಲ್ಲಿ ಹಿಡಿದ ಛತ್ರಿ ಆ ಬಿರುಸಿನ ಮಳೆಗೆ ಮಗಚುತ್ತಿದೆ. ಮಳೆರಾಯನ ಒದ್ದೆ ಸ್ಪರ್ಶ ಮುಖಕ್ಕೆ ಅಭಿಷೇಕ ಮಾಡುತ್ತಿದೆ. ರಸ್ತೆ ಕಾಣದೆ ಹೆಜ್ಜೆ ಹಾಕುವ ಆ ಬೂಟ್ಸ ಕಾಲು ನಿಲ್ಲುವುದು ಒಂದು ಶಾಲೆಯ ಬಳಿಗೆ.

ಮಳೆ ತೊಯ್ದ ನಾಡಹೆಂಚು ಕೆಂಪಾಗಿ ಶಾಲೆಯನ್ನು ಆ ಮಂಜಿನಲ್ಲೂ ಕಾಣುವಂತೆ ಮಾಡಿದೆ. ಬಿಳಿಯ ಸುಣ್ಣದ ಗೋಡೆಯ ಮೇಲೆ ನೀರು ಸೋರಿದ ದಾರಿಗಳು ಚಿತ್ತಾರ ಮಾಡಿದೆ. ಹುಲುಸಾಗಿ ಬೆಳೆದ ಗಿಡ, ಪೊದೆಗಳು ತಮ್ಮ ವನರಾಶಿಯನ್ನು ಶಾಲೆಯ ಅಲಂಕಾರಕ್ಕೆ ನೀಡಿದಂತಿದೆ. ಈ ಸುಂದರ ಶಾಲೆಗೆ ಇನ್ನು ಮೆರುಗು ಕೊಟ್ಟಿರುವುದು  ಹೆಣ್ಣು ಮಕ್ಕಳು. ಹೆಣ್ಣು ಮಕ್ಕಳದೇ ಶಾಲೆಯಾಗಿರುವುದರಿಂದ ಅವರ ಮುಗಿಯದ ಮಾತು-ಕಥೆಗಳು ಅಲ್ಲೊಂದು ಮಧುರ ನಾದವನ್ನು ಹೊರಡಿಸುತ್ತದೆ. ಪಕ್ಕ ವಾದ್ಯದಂತೆ ಗೆಜ್ಜೆಯ ಸದ್ದು ಕುಣಿಯುವ ಎರಡು ಜಡೆಗಳಿಗೆ ಸಾಥ್ ನೀಡುತ್ತದೆ.

ಇಂತಹ ಶಾಲೆಯನ್ನು ತೆಪ್ಪಗಾಗಿಸುವುದು ಗಣಿತ ಮಾಸ್ತರರ ಕರಕರ ಚಾಕ್ ಪೀಸ್ ಸದ್ದು. ಉಧೋ ಎಂದು ಸುರಿಯುವ ಮಳೆಯ ಥಂಡಿ ಗಾಳಿಯಲ್ಲೂ ಬೆವರಿಳಿಸುವುದು ಅವರ ಕೆಂಪು ಕಣ್ಣು. ಒದ್ದೆ ಲಂಗವನ್ನು ಸರಿ ಪಡಿಸಿಕೊಂಡು ಕೂರುವ ಹುಡುಗಿಯರಿಗೆ ಛತ್ರಿಯನ್ನು ಒಣಗಿಸುವ ಚಿಂತೆ. ಮೆತ್ತಗೆ ಹಿಂದಿನ ಬೆಂಚಿಗೆ ರವಾನಿಸುವಾಗ ಅದು ಯಾವುದೋ ಡಬ್ಬಿಯನ್ನು ಉರುಳಿಸುತ್ತದೆ. ತಲೆಗೆ ಹೋಗದ ಗಣಿತದ ಲೆಕ್ಕದೊಡನೆ ಕೇಳುವ ಟಣ್ ಟಣಾ ಟಣ್ ಟಣ್ ಶಬ್ದ ಮಕ್ಕಳ ಕಿವಿಗಳಿಗೆ ಇಷ್ಟದ ರಾಗದಂತೆ  ಖುಷಿ ಕೊಡುತ್ತದೆ. ಥಟ್ಟನೆ ತಿರುಗುವ ಕಣ್ಣುಗಳು ತೆರೆದ ಬಾಕ್ಸಿನ ಕಡೆಗೂ ಪರದಾಡುವ ಒಡತಿಯ ಕಡೆಗೂ ಸಿರಿಯಸ್ಸಾಗಿ ನೋಡ ತೊಡಗುತ್ತದೆ. ಈ ರಂಪಾಟ ಮುಗಿಯುವವರೆಗೆ ಪಾಠ ನಿಲ್ಲಿಸಬೇಕಾಗುವುದರಿಂದ ಮಾಸ್ತರರು ಮರೆತ ಸೂತ್ರಕ್ಕಾಗಿ ಬುಕ್ ಒಳಗೆ ತಲೆ ತೂರಿಸುತ್ತಾರೆ. ಬ್ರೇಕ್ ಸಿಕ್ಕ ವಿದ್ಯಾರ್ಥಿಗಳಿಗೆ ಮಳೆಯ ಶಬ್ದ, ಲಂಗದಿಂದ ಜಾರುವ ನೀರು, ಈಗ ತಾನೇ ಆದ ಪ್ರಕರಣ ಅವರದೇ ಪ್ರಪಂಚಕ್ಕೆ ಮೈಮರೆಯಲು ಆಹ್ವಾನ ನೀಡುತ್ತದೆ.

Advertisements

9 thoughts on “ಮಳೆಗಾಲದ ಹೈಸ್ಕೂಲ್ ..

 1. ಸುಂದರ ಚಿತ್ರದೊಡನೆ ಅನಾವರಣವಾದ ಮಳೆಯ ದಿನವೊಂದರ ಚಿತ್ರಣ ಹಳೆ ನೆನಪುಗಳನೆಲ್ಲ ಕೆದಕಿಬಿಟ್ಟಿತು. ಛತ್ರಿಯಿಲ್ಲದೆ ರೈನ್ಕೋಟ್ ಧರಿಸಿ ಸೈಕಲ್ ಹೊಡೆಯುತ್ತ ಮಳೆಯಲ್ಲೆ ಹೋಗುತ್ತಿದ್ದ ದಿನಗಳು. ಮಳೆ ತಂದ ಶೀತಲತೆಗೆ ಕ್ಲಾಸಿನಲ್ಲಿ ಕೂರಲು ನಡುಗಾಟ. ನೀವು ಕಟ್ಟಿಕೊಟ್ಟ ತರದ ಘಟನೆಗಳೊಂದು ತರದ ‘ವೆಲ್ಕಂ ಬ್ರೇಕ್’ ಆಗಿರುತ್ತಿತ್ತು. ಹಳೆ ನೆನಪಿನ ಕಚಗುಳಿಯಿಡಿಸಿದ್ದಕ್ಕೆ ಥ್ಯಾಂಕ್ಸ್ 😊

  Liked by 3 people

 2. Good one Manu 🙂 ‘ಮಳೆಗಾಲದ ಹೈಸ್ಕೂಲ್’ ಶೀರ್ಷಿಕೆ ಚೆನ್ನಾಗಿದೆ. ನೀನು ವರ್ಣಿಸಿರೊ ಕ್ಲಾಸ್ನಲ್ಲಿ ನಾನೂ ಒಬ್ಳು ಸ್ಟೂಡೆಂಡ್ ಆಗಿದ್ನೇನೊ ಅನ್ನಿಸ್ತು. ಚಾಕ್ ಪೀಸ್ ಶಬ್ದ, ಡಬ್ಬಿ ಶಬ್ದ ಎಲ್ಲಾ ಕೇಳಿಸ್ತು 🙂 ‘ಮಳೆಗಾಲದ ರಂಗೋಲಿ’ ಹಾಕಿದ ಕಲೆಗಾರ್ತಿ ನೀನು. ಮಳೆಗಾಲದ್ ಬಗ್ಗೆ ನಿನ್ಗಿಂತ ಚೆನ್ನಾಗ್ ವರ್ಣನೆ ಮಾಡೋಕ್ ಇನ್ಯಾರಿಗ್ ಸಾಧ್ಯ 😉

  Liked by 2 people

  1. ನಮಸ್ಕಾರ ಮಧು… 😊 😊 😊 😊 😊 thank u so much… ತುಂಬಾ ದಿನ ಆದ ಮೇಲೆ ಈ ಕಡೆ ಬಂದಿದ್ಯಾ.. ತುಂಬಾ ಖುಷಿಯಾಯ್ತು ಕಣೆ

   Liked by 1 person

   1. ನಿನ್ recent posts ತುಂಬಾ ಚೆನ್ನಾಗಿದೆ 🙂 🙂 ವಿಭಿನ್ನವಾಗಿವೆ ಕೂಡ. ಯಾವ್ದಕ್ಕು ಈಗ್ಲೇ ನನ್ಗೊಂದ್ ಆಟೋಗ್ರಾಫ್ ಕೊಡಿ madam 😉 Bigg fan 😉

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s