ಮರಳಿ ಮಣ್ಣಿಗೆ

ಪಾತಳದಷ್ಟು ಆಳದಲ್ಲಿ ಪುಟ್ಟ ಬೀಜ
ಕತ್ತಲೆಯ ಗರ್ಭದಲಿ ಮರೆತಂತ ನಿಜ

ತಾನಾಗಿಯೇ ಒಡೆಯಿತು ಭಾರಿ ಪದರ
ಇಣುಕಿ ನೋಡಿ ಜಗದ ವಿಶಾಲ ಹಂದರ

ಬಿಸಿಲು ಮಳೆಗೆ ಪ್ರತಿಯಾಡದೆ ಮುಟ್ಟಿ ಗಗನ
ಮತ್ತೆ ಬೇಕೆನಿಸುವುದು ಶಾಂತ ಮಡಿಲು ಅದುವೇ ಜೀವನ

Advertisements

4 thoughts on “ಮರಳಿ ಮಣ್ಣಿಗೆ

 1. ಬಿತ್ತನೆಯಾದ ಬೀಜವೊಂದು ಯಾರ ಸಹಾಯವೂ ಇಲ್ಲದೆ ಗಟ್ಟಿ ಕಲ್ಲುಮಣ್ಣಿನ ಆಳಕ್ಕೆ ಸಿಗಿದು ಬೇರಾಗಿ ಸಾರ ಹೀರಿ, ಅದನ್ನೆ ಬಂಡವಾಳವಾಗಿಸಿಕೊಂಡು ಭೂಮಿಯಿಂದ ಹೊರಕ್ಕೆ ಜಿಗಿದು, ಬೆಳೆದು ಹೆಮ್ಮರವಾಗುವ ಪ್ರಕ್ರಿಯೆಯೆ ಈ ಜೀವ ಜಗದ ಅದ್ಬುತಗಳಲ್ಲೊಂದು. ಪರಿಪಕ್ವತೆಯಾದಾಗ ಮಾಗಿ ಉದುರಿ ಮಣ್ಣಲ್ಲಿ ಮಣ್ಣಾದರು ಮುಂದಿನ ಸಂತತಿಯ ಬೀಜಗಳಿಗೆ ಜವಾಬ್ದಾರಿ ದಾಟಿಸಿಯಾಗಿರುತ್ತದೆ. ಈ ನಿರಂತರ ಚಕ್ರದಾವರ್ತನದ ಸಂಕೀರ್ಣತೆಯನ್ನು ಇಷ್ಟೇ ಸಾಲುಗಳಲ್ಲಿ ಹಿಡಿದಿಟ್ಟ ಬಗೆ ಅಮೋಘವಾಗಿದೆ – ಪರಂಪರೆ, ಬದುಕಿನ ಜತೆಗೆ ಸಮೀಕರಿಸುತ್ತ 😊

  Liked by 2 people

  1. ಎಲ್ಲಾ ಹೋರಾಟ ನಡೆಸಿ, ಬಯಸಿ ಬಯಸಿ ಮೇಲೇರಿ ಗುರಿಯ ಮುಟ್ಟಿದಾಗ ಅಥವಾ ಹತ್ತಿರವಾದಾಗ, ಇನ್ನೇನು ಸಾಧಿಸಿದೆ ಅನ್ನಿಸಿದಾಗ ಏನು ಬೇಡವಾಗಿ ಮತ್ತೆ ಆರಂಭಕ್ಕೆ ಬರಬೇಕೆನಿಸುತ್ತದೆ.ಬೆಳೆದ ಮೇಲೆ ಮತ್ತೆ ತಾಯಿಯ ಗರ್ಭದ ಅಂಧಕಾರದಲ್ಲಿ ಲೀನವಾಗುವ ಆಸೆಯಂತೆ.. ಹಾಗೊಂದು ಎಲ್ಲಾ ತೊರೆದು ಪುನಃ ಪ್ರಾರಂಭಿಸುವ ಬಯಕೆಯ ತುಡಿತವಷ್ಟೆ ಈ ಕವಿತೆ…
   ನಿಮ್ಮ ವಿಶ್ಲೇಷಣೆಗೆ ಧನ್ಯವಾದಗಳು

   Liked by 3 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s