‘ನನ್ನಿ’ಯ ಜೊತೆಗೆ

ಚಳಿಯ ಕೊರೆಯುವ ದಿನಗಳಲ್ಲಿ, ತಣ್ಣನೆಯ ನೀರಲ್ಲಿ ಕಾಲಿಟ್ಟು ಬಿಟ್ಟರೆ ಒಮ್ಮೆಲೇ ಮಿಂಚು ಸಂಚಾರವಾದಂತಾಗಿ ಹಿಂತೆಗೆದುಕೊಂಡು ಬಿಡೋಣ ಅನಿಸುತ್ತದೆ. ಆದರೆ ಹಾಗೆಯೇ ಮುಂದುವರಿದು ಒಂದೆರಡು ಹೆಜ್ಜೆ ಇಟ್ಟು ಮುಂದುವರಿದು ಅಪ್ಪಿಕೊಂಡರೆ ಬೆಚ್ಚನೆಯ ಅನುಭವವಾಗುತ್ತದೆ. ‘ನನ್ನಿ’ ಯಲ್ಲಿ ನನಗೆ ಕಂಡದ್ದು ಹಾಗೆಯೇ…. ಅಪರಿಚಿತ,ಅಪರೂಪದ ಕಥಾಹಂದರದಲ್ಲಿ ಓದುಗನನ್ನು ಕೂರಿಸುತ್ತದೆ. ನನ್ ಒಬ್ಬರ ಮನದಾಳಕ್ಕಿಳಿದು ನೋಡುವ ಚರ್ಚಿನ,ಮಿಷನರಿಗಳ ನೋಟ ಅಚ್ಚರಿಯೆನಿಸುತ್ತದೆ. ಸೇವೆಯ ವಿವಿಧ ಮುಖಗಳು, ಸೇವಾಕೇಂದ್ರದ ಒಳಹೊರಗನ್ನು ಬಿಚ್ಚಿಡುವ ಕಥೆ ಕುತೂಹಲಕಾರಿಯಾಗಿದೆ. ಸತ್ಯಾನ್ವೇಷಣೆಯೇ ಮೂಲವಾಗಿರುವ ಈ ಕಾದಂಬರಿ ನನ್ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದ ತತ್ವಗಳ ಮೇಲೆ ಪ್ರಶ್ನೆಯೆತ್ತುತ್ತದೆ. ಸತ್ಯಕ್ಕೆ ಹತ್ತಿರವಾದರೂ ,ದೂರವಾದರೂ ಸಾವು ಎಂಬ ತರ್ಕಕ್ಕೆ ಒಡ್ಡುತ್ತದೆ.

image

ಕಾಳಿಘಾಟಿನಲ್ಲಿ ಬಡತನದ ಚಿತ್ರಣ ಮತಾಂತರವಾದ ಸಮಯದ ಬಗೆಗಿನ ಕಲ್ಪನೆ ನೀಡುತ್ತದೆ. ದೇವರ ಹೆಸರಿನಲ್ಲಿ ನಡೆಯುವ ವ್ಯವಸ್ಥೆಯ ಹುಳುಕನ್ನು, ಒಳಗಿನ ಆಚಾರಗಳನ್ನು ಇದು ದಿಟ್ಟವಾಗಿ ಬಿಂಬಿಸಿದೆ. ‘ಫಾಬ್ರಿಗಾಸ್’ ಪಾತ್ರದ ಚಿತ್ರಣದಲ್ಲಿ ಸತ್ಯಾನ್ವೇಷಣೆಯ ದಿಕ್ಕನ್ನು ನಿಷ್ಠುರವಾಗಿ ಮತ್ತು ನಿಷ್ಪಕ್ಷಪಾತವಾಗಿ ತೆಗೆದುಕೊಂಡು ಹೋಗಿರುವುದು ಶ್ಲಾಘನೀಯ.ಮುಖ್ಯಪಾತ್ರವನ್ನು ನಾಯಕಿಯಂತಲ್ಲದೇ ದೌರ್ಬಲ್ಯಗಳನ್ನು ಕೂಡಿಸಿ ರೂಪಿಸಿರುವುದು ಕಾದಂಬರಿಯು ಮನಸಿಗೆ ಹತ್ತಿರವಾಗುತ್ತದೆ. ಧಾರ್ಮಿಕ ಸಂಘಟನೆಗಳಲ್ಲಿರುವ ಮೂಢನಂಬಿಕೆಗಳು ಅದರಲ್ಲಿನ ಅಸಹಾಯಕ ಕ್ಷಣಗಳು ಇದರ ಉತ್ತಮ ಅಂಶ.

ನನ್ನಿಯನ್ನು ಸತ್ಯದ ನೆಲೆಯಲ್ಲಿ ಬರೆಯಲಾಗಿದೆ ಎಂದು ಹಿನ್ನುಡಿಯಲ್ಲಿ ಸ್ಪಷ್ಟ ಪಡಿಸಿರುವುದರಿಂದ ಇದೊಂದು ಓದಿ ಮರೆಯುವ ಸಾಮಾನ್ಯ ಕಥೆ ಅನಿಸುವುದಿಲ್ಲ. ಕಥೆಯ ಭೂಮಿಕೆ ವಿಭಿನ್ನವಾಗಿರುವದರಿಂದಲೋ, ಇಂಗ್ಲಿಷ್ ನ ನೆರಳಿನಿಂದಲೋ ಓದುವಾಗ ನಿರೂಪಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಮುಗಿದಾಗ ಪ್ರಶ್ನೆಗಳು, ಅಚ್ಚರಿಗಳು ತುಂಬಿ ಸರಿ – ತಪ್ಪುಗಳ ತುಲನೆಯಲ್ಲಿ ಜಾರುತ್ತೇವೆ.

‘ಕರ್ಮ’ ದ ಅನುಭೂತಿಯಿಂದ ನಿರೀಕ್ಷೆ ಹೆಚ್ಚಿಸಿದ ಕೃತಿಯಾದರೂ ಅದರ ಯಾವುದೇ ಎಳೆಯೂ ಕಾಣದೆ ಸಂಪೂರ್ಣ ವಿಭಿನ್ನವಾಗಿ ಸ್ವತಂತ್ರವಾಗಿದೆ. ಚರ್ಚಿನ ಕಿಟಕಿಯಲ್ಲಿ ಇಣುಕಿ ಅಲ್ಲಿನ ನೈಜತೆ ಹೇಳಿ, ಅದರೊಂದಿಗೆ ಮನಸಿನಾಳದ ಸತ್ಯಾನ್ವೇಷಣೆಗೆ ತೊಡಗಿ ಸಾಕಷ್ಟು ಪ್ರಶ್ನೆ ಮೂಡಿಸುವ ಕೃತಿ ಚೆನ್ನಾಗಿದೆ. ಯಾವುದೇ ನಿಲುವಿಗೆ ಅಂಟಿಕೊಳ್ಳದೆ ಅನ್ವೇಷಣೆಯ ದಾರಿಯಲ್ಲಿ ಸಾಗುತ್ತದೆ ನನ್ನಿಯ ಜೊತೆಗಿನ ಪಯಣ. ಕನ್ನಡದ ಓದುಗರಿಗೆ ಒಳ್ಳೆಯ, ಹೊಚ್ಚ ಹೊಸ ಕಾದಂಬರಿಯೊಂದು ಕಳೆದು ಹೋಗಲು,  ಚಿಂತಿಸಲು ದೊರಕಿದೆ.

Advertisements

6 thoughts on “‘ನನ್ನಿ’ಯ ಜೊತೆಗೆ

 1. ಕನ್ನಡದಲ್ಲಿ ಹೊಸದಾದ, ವಿಭಿನ್ನವಾದ ಪುಸ್ತಕಗಳನ್ನು ಓದಿ, ಅದರ ಸಾರವನ್ನು ಅದ್ಭುತವಾಗಿ ಗ್ರಹಿಸಿ ಅಚ್ಚುಕಟ್ಟಾದ ಮತ್ತು ಸಾರವತ್ತಾದ ವಿಮರ್ಶೆಯಾಗಿ ಕಟ್ಟಿಕೊಡುವ ನಿಮ್ಮ ಗ್ರಹಣ ಶಕ್ತಿಗೆ ನಮನಗಳು. ತನ್ಮೂಲಕ ಪುಸ್ತಕ ಓದುವ ಕುತೂಹಲ ಮೂಡಿಸಿ ಕನ್ನಡಕ್ಕೆ ಮತ್ತು ಬರೆದ ಲೇಖಕರಿಗೆ ಮಹದುಪಕಾರ ಮಾಡುತ್ತಿರುವುದಕ್ಕೆ ನನ್ನ ‘ನನ್ನಿ’

  Liked by 1 person

  1. ಓಹ್… ಹಾಗೆಲ್ಲಾ ಉಪಕಾರ ಅಂತ ಅಲ್ಲ. ಓದಿದ ಕೂಡಲೇ ಯಾರಿಗಾದರೂ ಕಥೆ ಹೇಳೋಣ ಅನಿಸತ್ತೆ.. ಅದು ಆಗದಿದ್ದರೆ ಅದರ ಬಗ್ಗೆ ಮಾತಾಡಬೇಕು ಅನಿಸತ್ತೆ.. ಹಾಗೆಯೇ ಮುಂದುವರಿದು ಚೂರು ಪಾರು ಯೋಚನೆ ಮಾಡಿದಾಗ ಇನ್ನು ತಡೆಯಲಾರದೆ ಬರುವ ವಿವರಣೆಯೇ ಇದು…

   Liked by 1 person

   1. ಅದೇನೆ ಇದ್ದರೂ, ಓದಿ ಮುಗಿಸಿದ ಮೇಲಿನ ಗ್ರಹಣಾನುಭೂತಿಯನ್ನು, ಪದಾನುಭೂತಿಯಾಗಿ ಸೆರೆ ಹಿಡಿದು ಮಿಕ್ಕವರಿಗು ಅದರ ರಸಾನುಭೂತಿಯ ಪೀಯೂಷವನ್ನು ಹಂಚುವ ತುರ್ತಿನ ಮನಸಿದೆಯಲ್ಲ, ಅದು ಅಪರೂಪದ್ದು. ಅದರಲ್ಲೂ ಹೊಸ ಪೀಳಿಗೆಯಲ್ಲಿ ಆ ಮನೋಭಾವದವರನ್ನು ಹುಡುಕುವುದೆಂದರೆ ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದ ಹಾಗೆ. ಅದರಿಂದ ಕನ್ನಡದ ದೃಷ್ಟಿಯಿಂದ ಇದು ಸಂತಸದ ವಿಷಯವೆನ್ನುವುದನ್ನಾದರೂ ನೀವು ಒಪ್ಪಲೆ ಬೇಕು !

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s