ದಿ ಥಿಯರಿ ಆಫ್ ಎವೆರಿಥಿಂಗ್…

image

ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಒಂದಷ್ಟು ಜನ ವಿದ್ಯಾರ್ಥಿಗಳು. ಒಬ್ಬರಿಗಿಂತ ಒಬ್ಬರು ಬುದ್ಧಿವಂತರು , ಭವಿಷ್ಯದ ವಿಜ್ಞಾನಿಗಳು . ಅವರಲ್ಲಿ ಒಬ್ಬ ನಮ್ಮ ಹೀರೋ, ಸದಾ ನಗುತ್ತಿರುವ,  ಕಣ್ಣಡಕದಿಂದ ಇಣುಕಿ ನೋಡುವ ಚುರುಕು ಕಣ್ಣಿನ ಅತೀ ಉತ್ಸಾಹದ ತರುಣ. ಆದರೇಕೋ ನಡೆಯುವಾಗ ತಾಳ ತಪ್ಪಿದಂತೆ, ಕಾಲಗಳು ಮಾತೇ ಕೇಳದೆ ಎತ್ತೆತ್ತಲೋ ಹಾರಿದಂತೆ. ಗೆಳೆಯರ ಸಂಗಡ ಹೆಜ್ಜೆ ಹಾಕಲು ತುಂಬಾ ಕಷ್ಟ ಪಡಬೇಕಾಗಿತ್ತು. ಆದರೆ ಈ ಪ್ರಾಬ್ಲಮ್ ಎಲ್ಲಾ ಅವನ ಬುದ್ಧಿವಂತಿಕೆಯಿಂದ, ವೈಜ್ಞಾನಿಕ ನೋಟದಿಂದ ಗೌಣವಾಗಿಬಿಟ್ಟಿತ್ತು. ಅದಕ್ಕೆಂದೇ ಅವನ ಸ್ನೇಹಿತರು ತುಸು ತಡವಾದರೂ ಅವನೊಂದಿಗೆ ನಿಧಾನವಾಗಿ ನಡೆಯುತ್ತಿದ್ದರು.

ಹೀಗಿರಲು,  ಜೇನ್ ನ ಬೇಟಿಯಾಗುತ್ತದೆ. ಜೇನ್ ಎಂದರೆ ಸಿಹಿ ಜೇನಿನಂತ ಒಬ್ಬಳು ರಿಸರ್ಚ ವಿದ್ಯಾರ್ಥಿ. ಹೇಗಿದ್ದರೂ ನಮ್ಮ ಹೀರೋಗೆ ಕೂಡ ಅವಳು ಇಷ್ಟವಾಗಿದ್ದರಿಂದ ಇನ್ನೇನು ಸುಖವಾಗಿ  ಮದುವೆಯಾಗಬೇಕಿತ್ತು. ಆದರೆ ಇತ್ತೀಚೆಗೆ ಏಕೋ ನಮ್ಮ ಹೀರೋಗೆ ಕೈಗಳೇ ಬಲ ಇಲ್ಲ,  ದೊಡ್ಡ ದೊಡ್ಡ ಪ್ರಮೇಯಗಳನ್ನು ಬೋರ್ಡಿನಲ್ಲಿ ಬರೆಯಲು ಕೈಗಳು ಸಹಕರಿಸುತ್ತಿಲ್ಲ. ಕಾಲುಗಳು ಇನ್ನು ಆಗುವುದಿಲ್ಲವೆಂದು ಅವನನ್ನು ಬೀಳಿಸಿಬಿಟ್ಟವು. ಚಿಕಿತ್ಸೆ ಮಾಡಿದ ಡಾಕ್ಟರ್ ಹೇಳುತ್ತಾರೆ,  ಇದು ಪ್ರೋಗ್ರೆಸ್ಸಿವ್ ಮೋಟಾರ್ ನ್ಯೂರಲ್ ಡಿಸೀಸ್ ಅಂದರೆ ಒಂದೊಂದೇ ಅಂಗವನ್ನು ನರ ದೌರ್ಬಲ್ಯ ನುಂಗಿ ಹಾಕುತ್ತದೆ. ಮೆದುಳಿನ ಸಂದೇಶ ಇವುಗಳಿಗೆ ತಾಗುವುದೇ ಇಲ್ಲ. ಹಾಗೂ ಹೀಗೂ ಲೆಕ್ಕ ಮಾಡಿದರೆ ಎರಡು ವರ್ಷ ಬದುಕಿದರೆ ಹೆಚ್ಚು,  ಅದರಲ್ಲೂ ಕೈ, ಕಾಲು, ಮಾತು ಎಲ್ಲವೂ ಸ್ವಾಧೀನ ಕಳೆದು ಕೊಳ್ಳುತ್ತವೆ. ನಮ್ಮ ಹೀರೋ ಈಗ ಹೀರೋ ಆಗಿಲ್ಲ. ಕಾಲಗಳ ಬಲವಿಲ್ಲದೆ ಹೇಗೋ ಒದ್ದಾಡಿಕೊಂಡು ತನ್ನ ಕೋಣೆಗೆ ಬಂದು ಬೀಳುತ್ತಾನೆ. ತಾನೇ ಓದಿದ ಪುಸ್ತಕಗಳು, ಥಿಯರಿಗಳು, ದೊಡ್ಡ ವಿಜ್ಞಾನಿಯ ಕನಸಿನ ಪುಟ್ಟ ಹೆಜ್ಜೆಗಳು, ಎಷ್ಟೋ ಸಾಧನೆಗಳು ಎಲ್ಲಾ ಸಾವಿಗೆ ಎದುರು ನೋಡುತ್ತಾ ಟಿ.ವಿ ಯ ಮುಂದೆ ಕುಳಿತು ಬಿಡುತ್ತದೆ.

ಸದಾ ನಲಿದಾಡಿಕೊಂಡು, ಓದುತ್ತಾ,  ಬರೆಯುತ್ತಾ ಟೈಂ ವೇಸ್ಟ್ ಮಾಡದೆ ಇದ್ದ ಹುಡುಗ ಸುಮ್ಮನೆ ಕುಳಿತು ಬಿಟ್ಟಿದ್ದ. ಅಕಾಲಿಕ ಮುಕ್ತಾಯದತ್ತ ನಡೆದಿದ್ದ ಬಾಳು ಮತ್ತೆ ಚಿಗುರೊಡೆಯುತ್ತಿದ್ದಂತೆ  ಅವನ ಜೀವನದಲ್ಲಿ ಬರುವ ಹೊಸ ಪಾತ್ರಗಳು, ಕಥೆಯ ಲಾಘವವನ್ನೆ ಮತ್ತೆಲ್ಲಿಗೊ ಒಯ್ದು ನಿಜ ಜೀವನವೆ ಕಥೆಗಿಂತ ಅದ್ಭುತವೆನ್ನುವ ಹಾಗನಿಸುವಂತೆ ಮಾಡಿಬಿಡುತ್ತವೆ, ವೈಜ್ಞಾನಿಕ ಜಗದ ಅತಿಶಯಾದಿ ವಿಸ್ಮಯಗಳ ಅನಾವರಣದೊಂದಿಗೆ. ಅದೇ ಬಿರುಸಿನಲ್ಲೆ ಇಂತಹ ಬದುಕಿನ ಸಂಕೀರ್ಣತೆಗಳು ಹೇಗೆ ದೈನಂದಿನ ಜೀವನದ ಸಾಮಾನ್ಯ ನಿಯಮಗಳ ಅನುಕರಣೆಯಲ್ಲಿ ಹೆಣಗಬೇಕಾಗುತ್ತದೆ ಎನ್ನುವ ‘ಕಾಂಪ್ರಮೈಸ್’ ಕೂಡ ಮನತಟ್ಟುವಂತೆ, ಮನೋಜ್ಞವಾಗಿ ತೆರೆದುಕೊಳ್ಳುತ್ತ , ಅದೆ ಬದುಕಿನ ಕ್ರೂರ ಮುಖಗಳನ್ನು  ತಣ್ಣನೆಯ ನಿರ್ಭಾವುಕತೆಯಲ್ಲಿ ಪರಿಚಯ ಮಾಡಿಕೊಡುತ್ತದೆ.

ಇದು ಬರೀ ಮೂವಿಯಲ್ಲ. ನಿಜ ಜೀವನ ತೆರೆ ಮೇಲೆ ನೋಡುವ ಅವಕಾಶ ಅಷ್ಟೇ.  ಹೀರೋ ನಮ್ಮ ಕಾಲಮಾನದ ಶ್ರೇಷ್ಠ ವಿಜ್ಞಾನಿ ಸ್ಟೀಫನ್ ಹಾಕಿಂಗ್. ದಿ ಥಿಯರಿ ಆಫ್ ಎವೆರಿಥಿಂಗ್ ಈ ಮೂವಿ ಜೀವನ ಪ್ರೀತಿಗೆ, ಛಲಕ್ಕೆ ನಿಜವಾದ ಅರ್ಥ ಕೊಡುತ್ತದೆ. ನೋಡಲೇಬೇಕಾದ ಎಂದು ಮರೆಯಲಾಗದ ಒಂದು ಜಾಗೃತ ಮನಸನ್ನು ಬಿಟ್ಟು ಹೋಗುವ ಅದ್ಭುತ ಚಿತ್ರ.

Advertisements

4 thoughts on “ದಿ ಥಿಯರಿ ಆಫ್ ಎವೆರಿಥಿಂಗ್…

 1. ಕಥೆಗಿಂತ ಬದುಕು ರೋಚವಾಗಿಯೂ ಸಾಹಸಮಯವಾಗಿಯೂ ಇರುವುದೆನ್ನುತ್ತಾರೆ. ಸ್ಟೀಫನ್ ಹಾಕಿಂಗ್ಸ್ ಜೀವನ ಇದಕ್ಕೊಂದು ಉತ್ತಮ ಉದಾಹರಣೆ. ಅಂಥಾ ಮಹಾನ್ ವಿಜ್ಞಾನಿಯ ಜೀವನ ಹಂಚಿಕೊಂಡು, ಅವನ ಕಷ್ಟಗಳಿಗೆ ಹೆಗಲಾಗಿ ಅವನೆಲ್ಲಾ ಏಳುಬೀಳನ್ನೂ ಸಮೀಪದಿಂದ ನೋಡಿದ – ತನ್ನದಾಗಿಸಿಕೊಂಡ ಜೇನ್ ಹಾಕಿಂಗ್ಸ್ ಕೂಡಾ ಧೀಮಂತ ಮಹಿಳೆ. ಇವರ ಜೀವನ ಚರಿತ್ರೆಯನ್ನು ತುಂಬಾ ಚೆನ್ನಾಗಿ ಪರದೆಯಮೇಲೆ ಕಟ್ಟಿಕೊಟ್ಟಿದ್ದಾರೆ. “The theory of everything ” ನನಗೂ ಮೆಚ್ಚಿನ ಚಿತ್ರಗಳಲ್ಲೊಂದು. 😄 good write up.

  Liked by 2 people

 2. ಎಂದೊ ವಿಮಾನದಲ್ಲಿ ಪಯಣಿಸುತ್ತಿದ್ದ ಹೊತ್ತಲ್ಲಿ ಅಕಸ್ಮಾತಾಗಿ ಅಲ್ಲಿನ ಟೀವಿ ಪರದೆಯ ಮೇಲೆ ಮೂಡಿಬಂದಿದ್ದ ಈ ಚಿತ್ರವನ್ನು ಅರ್ಧಂಬರ್ಧ ಮಾತ್ರವೆ ನೋಡಲು ಸಾಧ್ಯವಾಗಿತ್ತು – ಸಿಕ್ಕ ಕಾಲಾವಕಾಶದಲ್ಲಿ. ನಿಮ್ಮ ಬರಹ ನೋಡುತ್ತಿದ್ದಂತೆ ಆ ಮಿಕ್ಕರ್ಧದ ಕುತೂಹಲ ಮತ್ತೆ ಕೆರಳಿ ಆ ಭಾಗವನ್ನು ನೋಡಲು ಪ್ರೇರೇಪಿಸಿತು.. ವಿಕಲ ಚೇತನಾದಿ ದೌರ್ಬಲ್ಯಗಳು ಕೇವಲ ದೈಹಿಕ ಮಾತ್ರವೆ ಹೊರತು ಮಾನಸಿಕ ಶಕ್ತಿಯ ಬಲದ ಮುಂದೆ ಅವೇನು ಅಲ್ಲಾ ಎನ್ನುವುದಕ್ಕೆ ಸ್ಟೀಫನ್ ಹಾಕಿಂಗ್ಸನ ಜೀವನವೆ ಒಂದು ದೊಡ್ಡ ಉದಾಹರಣೆ. ಕಾಲದ ಮೂಲದ ಕುರಿತಾದ ಅವನ ಸಂಶೋಧನೆ ಕಾಲಾತೀತವಾಗಿ ನಿಲ್ಲುವಂತದ್ದು ಎನ್ನುವುದು ಕೇವಲ ಅತಿಶಯೋಕ್ತಿಯೇನಲ್ಲ. ಇದೇ ರೀತಿ ಈಚೆಗೆ ನಾನು ನೋಡಿದ ಮತ್ತೊಂದು ಚಿತ್ರ ಸ್ಟೀವ್ ಜಾಬ್ಸ್ ಜೀವನ ಚರಿತ್ರೆ ಆಧರಿಸಿದ್ದು. ಈ ಅಪರೂಪದ ವ್ಯಕ್ತಿಗಳನ್ನು ಒಂದಲ್ಲಾ ಒಂದು ರೀತಿಯ ದೈಹಿಕ ದೌರ್ಬಲ್ಯ ಕಾಡಿ ಕಣ್ಮರೆಯಾಗಿಸುವುದು ಮಾತ್ರ ವಿಪರ್ಯಾಸವೆ ಸರಿ. ಸೊಗಸಾದ ಕಿರು ಪರಿಚಯಾತ್ಮಕ ವಿಮರ್ಶೆ – ಹಾಗೂ ನೋಡಲೇಬೇಕಾದ ಅಪರೂಪದ ‘ನಿಜ ಜೀವನದ’ ಚಿತ್ರ !

  Like

 3. ಎಂದೊ ವಿಮಾನದಲ್ಲಿ ಪಯಣಿಸುತ್ತಿದ್ದ ಹೊತ್ತಲ್ಲಿ ಅಕಸ್ಮಾತಾಗಿ ಅಲ್ಲಿನ ಟೀವಿ ಪರದೆಯ ಮೇಲೆ ಮೂಡಿಬಂದಿದ್ದ ಈ ಚಿತ್ರವನ್ನು ಅರ್ಧಂಬರ್ಧ ಮಾತ್ರವೆ ನೋಡಲು ಸಾಧ್ಯವಾಗಿತ್ತು – ಸಿಕ್ಕ ಕಾಲಾವಕಾಶದಲ್ಲಿ. ನಿಮ್ಮ ಬರಹ ನೋಡುತ್ತಿದ್ದಂತೆ ಆ ಮಿಕ್ಕರ್ಧದ ಕುತೂಹಲ ಮತ್ತೆ ಕೆರಳಿ ಆ ಭಾಗವನ್ನು ನೋಡಲು ಪ್ರೇರೇಪಿಸಿತು.. ವಿಕಲ ಚೇತನಾದಿ ದೌರ್ಬಲ್ಯಗಳು ಕೇವಲ ದೈಹಿಕ ಮಾತ್ರವೆ ಹೊರತು ಮಾನಸಿಕ ಶಕ್ತಿಯ ಬಲದ ಮುಂದೆ ಅವೇನು ಅಲ್ಲಾ ಎನ್ನುವುದಕ್ಕೆ ಸ್ಟೀಫನ್ ಹಾಕಿಂಗ್ಸನ ಜೀವನವೆ ಒಂದು ದೊಡ್ಡ ಉದಾಹರಣೆ. ಕಾಲದ ಮೂಲದ ಕುರಿತಾದ ಅವನ ಸಂಶೋಧನೆ ಕಾಲಾತೀತವಾಗಿ ನಿಲ್ಲುವಂತದ್ದು ಎನ್ನುವುದು ಕೇವಲ ಅತಿಶಯೋಕ್ತಿಯೇನಲ್ಲ. ಇದೇ ರೀತಿ ಈಚೆಗೆ ನಾನು ನೋಡಿದ ಮತ್ತೊಂದು ಚಿತ್ರ ಸ್ಟೀವ್ ಜಾಬ್ಸ್ ಜೀವನ ಚರಿತ್ರೆ ಆಧರಿಸಿದ್ದು. ಈ ಅಪರೂಪದ ವ್ಯಕ್ತಿಗಳನ್ನು ಒಂದಲ್ಲಾ ಒಂದು ರೀತಿಯ ದೈಹಿಕ ದೌರ್ಬಲ್ಯ ಕಾಡಿ ಕಣ್ಮರೆಯಾಗಿಸುವುದು ಮಾತ್ರ ವಿಪರ್ಯಾಸವೆ ಸರಿ. ಸೊಗಸಾದ ಕಿರು ಪರಿಚಯಾತ್ಮಕ ವಿಮರ್ಶೆ – ಹಾಗೂ ನೋಡಲೇಬೇಕಾದ ಅಪರೂಪದ ‘ನಿಜ ಜೀವನದ’ ಚಿತ್ರ !

  >

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s