ಸಕ್ರಿಯ ಸತ್ಸಂಗ

ಆಗಿನ್ನು ಸ್ಕೂಲಿನಲ್ಲಿ ಹೇಳಿದ್ದು ವೇದ ವಾಕ್ಯವೆಂದು ಪರಿಪಾಲಿಸುತ್ತಿದ್ದ ಸಮಯ. ಪುಸ್ತಕದಲ್ಲಿ ಭಾರತ ದೇಶ ಒಂದು ಪರ್ಯಾಯ ದ್ವೀಪ, ಇಲ್ಲಿ ಅನೇಕ ಧರ್ಮಗಳು ಸಹಬಾಳ್ವೆಯಿಂದ ವಿವಿಧತೆಯಲ್ಲಿ ಏಕತೆಯಂತೆ ಬಾಳುತ್ತಿದೆ ಎಂದೆಲ್ಲಾ ಓದಿದ ನೆನಪು. ಆಗೆಲ್ಲಾ ಭಾರತ ಎಂದೊಡನೆ ಎದೆಯುಬ್ಬಿಸಿ ನಿಲ್ಲುತ್ತಿದ್ದೆವು. ಸ್ವತಂತ್ರ ದಿನಾಚರಣೆ, ಗಣ ರಾಜ್ಯೋತ್ಸವ ಎಲ್ಲಾ ಹಬ್ಬಗಳಲ್ಲಿ ಏನೋ ಒಂದು ಸಡಗರ. ರಾಷ್ಟ್ರಗೀತೆಯೆಂದರೆ ಎಲ್ಲಿದ್ದರೂ ಎದ್ದು ನಿಲ್ಲುವ ತವಕ. ದೇಶ ಭಕ್ತಿ ಗೀತೆಗಳು, ನಾಟಕಗಳು, ಭಾಷಣಗಳು ಇವೆಲ್ಲಾ ಅತ್ಯಂತ ಹೆಮ್ಮೆಯ ವಿಷಯಗಳಾಗಿದ್ದವು. ವಿದ್ಯಾರ್ಥಿಗಳಾಗಿದ್ದಾಗ ಇಂತ ಕೆಲವು ಭಾವನೆಗಳು ಎಲ್ಲರಿಗೂ ಸಾರ್ವತ್ರಿಕವಾಗಿ ಮೈಗಂಟಿಕೊಂಡಿತ್ತು.

ಆದರೆ ಈಗ ಕಾಲೇಜಿನ ರಂಗಿನಲ್ಲಿ, ಡಿಗ್ರಿಯ ಪ್ರಾಜೆಕ್ಟ್ ಗಳಲ್ಲಿ, ಕೆಲಸದ ಒತ್ತಡದಲ್ಲಿ ಈ ಒಳ್ಳೆಯ ಯೋಚನೆಗಳೆಲ್ಲಾ ಮಂಕಾಗತೊಡಗಿದೆ. ಇದರೊಂದಿಗೆ  ವಿಜ್ಞಾನದ ಅತೀವ ಬೆಳವಣಿಗೆಯಿಂದಾಗಿ, ಟೆಕ್ನಾಲಜಿಯ ದೈತ್ಯ ಹೆಜ್ಜೆಗಳಿಂದಾಗಿ ಇಡೀ ವಿಶ್ವವೇ ಚಿಕ್ಕದಾಗುತ್ತಿದೆ. ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಮುಂದೋಡುವುದು ಅಗತ್ಯವಾಗಿದೆ. ಇದಕ್ಕಾಗಿಯೇ ನಾನು, ನನ್ನ ಸಂಸಾರದ ಪರಿಧಿ ಬಿಟ್ಟು ಹೊರಗೆ ಯೋಚಿಸುವುದೇ ಕಷ್ಟವಾಗಿದೆ.

ಇಷ್ಟೆಲ್ಲ ಉಸಿರುಗಟ್ಟಿ ಓಡಿದರೂ ಕೂಡ ಸಂಪೂರ್ಣ ತೃಪ್ತಿ ಸಿಕ್ಕಿದೆ ಎನ್ನುವುದು ಕಷ್ಟವೆ. ಹೀಗೆ ಇನ್ನು ಏನಾದರೂ ಮಾಡಬೇಕೆಂಬ ಹಂಬಲದಿದ್ದಾಗಲೇ ನಾನು ‘ಸೋದರಿ ನಿವೇದಿತ ಪ್ರತಿಷ್ಠಾನ'(SNP) ದ ಸಂಪರ್ಕಕ್ಕೆ ಬಂದಿದ್ದು. SNP ಈ ಅಪೂರ್ಣತೆಯನ್ನು ಪೂರ್ಣಗೊಳಿಸುತ್ತದೆ ಎಂದು ನಾನು ಅನುಭವದಿಂದ ಕಂಡುಕೊಂಡಿದ್ದು. ಮಹೋನ್ನತ ಗುರಿಗಳನ್ನಿಟ್ಟುಕೊಂಡು ಸಾಗುವ ಈ ಪ್ರತಿಷ್ಠಾನ. ಹೆಣ್ಣು ಮಕ್ಕಳಿಗಾಗಿಯೇ ಇದೆ. ವ್ಯಯಕ್ತಿಕ ಬದುಕಿನ ಜೊತೆ ಜೊತೆಯಲ್ಲೇ ನಿಭಾಯಿಸಬುಹುದಾಗಿದೆ. ಮಾನಸಿಕವಾಗಿ ಉನ್ನತ ಸ್ತರದಲ್ಲಿ ಚಿಂತಿಸಲು, ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಇದು ಅತ್ಯುತ್ತಮ ವೇದಿಕೆ.

ನಾಡಿನ ಪ್ರಮುಖ ಆಗು ಹೋಗುಗಳ ಬಗೆಗಿನ ಚರ್ಚೆಗಳಿಂದಾಗಿ ಸಾಮಾಜಿಕ ಯೋಚನೆಗಳು ಇನ್ನಷ್ಟು ಹದಗೊಳ್ಳುತ್ತದೆ. ಇಲ್ಲಿರುವ ಸ್ಟಡಿ ಸರ್ಕಲ್ ಗಳ ನಿರಂತರ ಓದಿನಿಂದಾಗಿ ಜ್ಞಾನ ಹೆಚ್ಚುತ್ತದೆ. ಇನ್ನು ಕಾರ್ಯಕರ್ತರಾಗಿ ಭಾಗವಹಿಸಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸಂಪರ್ಕ,ಯೋಚನೆ, ವ್ಯಕ್ತಿತ್ವ ಎಲ್ಲದಕ್ಕೂ ಒಂದು ಹೊಸ ಆಯಾಮ ನೀಡುತ್ತದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಒಮ್ಮೆ ಬಂದು ಈ ಸಮೂಹದಲ್ಲಿ ಸೇರಿಕೊಂಡರೆ ಮಾತ್ರ ಅರ್ಥವಾಗುವ ಅನುಭೂತಿ ಇದು.

ಉತ್ಸಾಹಕ್ಕೆ,ಉತ್ತಮ ಯೋಚನೆಗಳಿಗೆ ಇದೊಂದು ಸಕ್ರಿಯ ಸತ್ಸಂಗ. ಸಹೋದರಿ ನಿವೇದಿತಾ ಮತ್ತು ವಿವೇಕಾನಂದರ ಜೀವನದ ಮಾರ್ಗದರ್ಶನದಲ್ಲಿ ಸಾಗುತ್ತಿದೆ. ಇಂದು ನಿವೇದಿತಾಳ ಜನ್ಮ ದಿನವಾಗಿದೆ. ಆದರ್ಶದ ದಾರಿಯಲ್ಲಿ ಸಾಗಲು ಪ್ರೇರಣೆ ನೀಡುತ್ತಿರುವ 
ಆಕೆಗೆ ವಂದನೆಗಳು.

Advertisements

2 thoughts on “ಸಕ್ರಿಯ ಸತ್ಸಂಗ

  1. ಹಿಂದೆಲ್ಲ ಸ್ಕೂಲು ಸೇರಿದಂತೆ ಅದೊಂದು ಬಗೆಯ ವಾತಾವರಣ ಇರುತ್ತಿತ್ತು – ಇವನ್ನೆಲ್ಲ ಪೋಷಿಸೊಕೆ. ಈಗೆಲ್ಲ ವೇಗದ ಜೀವನದ ಹಿಂದೆ ಬಿದ್ದು ಗೊತ್ತು ಗುರಿಯಿಲ್ಲದ ಓಟ ಆಗ್ಬಿಟ್ಟಿದೆ. ನೈತಿಕ , ಭಾವಾತ್ಮಿಕ ಸಾಂಗತ್ಯಕ್ಕಿಂತ ಯಾಂತ್ರಿಕ, ಆಧುನಿಕ ವೈಭವೋಪೇತ ಬದುಕಿನ ಆಕರ್ಷಣೆ ಹೆಚ್ಚು ಪ್ರಿಯವಾಗುವ ಪರಿಸರ. ಸೋದರಿ ನಿವೇದಿತಾರಂತಹ ವಿದೇಶಿ ಮಹಿಳೆಯನ್ನು ಆಕರ್ಷಿಸಿ ತಮ್ಮ ತತ್ವದ ತೆಕ್ಕೆಗೆ ಬರಮಾಡಿಕೊಂಡ ವಿವೇಕಾನಂದರಂತಹ ವ್ಯಕ್ತಿತ್ವಗಳೂ ಇಲ್ಲದಿರುವುದು ಮತ್ತೊಂದು ದುರಂತ.. ಲೇಖನ ಸತ್ವಪೂರ್ಣ, ಮತ್ತು ಪ್ರಭಾವಶಾಲಿಯಾಗಿದೆ.

    Keep it up !

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s