ಅನಂತವನರಿಯದೆ ಅಂತವ ಹುಡುಕಿದರು

ಇಲ್ಲಿ ಜಗದಾದಿ ಅಂತ್ಯವ ಕಂಡವರಾರು
ನಿಲ್ಲದ ಕಾಲದ ಚಲನೆಯ ಬಲ್ಲವರಾರು
ಬಂದುಹೋಗುವ ನಾಲ್ಕು ದಿನಗಳ ತಿಳಿದವರಾರು

ಸಂಸ್ಕಾರದಿ ಗಟ್ಟಿ ಅಡಿಪಾಯ ಬರೆದು
ಧರ್ಮಸೂತ್ರದಿ ನೀತಿಯ ಮಹಲು ಕೊರೆದು
ಶಾಂತಿನೆಮ್ಮೆದಿಯ ಸರಳ ಬದುಕ ಬರೆದಿಟ್ಟರು

ಸಂಸಾರ ಸಾಗರದಿ, ಅಪರಿಚಿತ ಹಾದಿಯಲಿ
ದೀಪನೆಟ್ಟು ತನ್ನನ್ನೇ ಕಳೆದುಕೊಳ್ಳದಂತೆ ಮುನ್ನೆಡೆಸಿ
ಶ್ರೇಷ್ಠ ಬದುಕಿನ ಸ್ಪಷ್ಟ ಚಿತ್ರಣವ ಆದರ್ಶಿಸಿ

ತನ್ಮಧ್ಯೆ ಸತ್ವಪರೀಕ್ಷೆಯ ಹಾಗೆ ದಾರಿತಪ್ಪಿಸಲು
ಬರುವನೊಬ್ಬನು ಗ್ರಂಥಗಳ ಸುಡಿರೆನ್ನುತ
ಎಲ್ಲಾ ಸುಳ್ಳೆನುತ ತನ್ನ ಮೂಲವನೇ ಜರೆಯುತಾ

ಹೊಸ ಚಿಂತನೆಯ ಅನುಮೋದನೆ ಸಹಜ
ಅದರೊಡನೆ ತಳ್ಳಿದರು ಸನಾತನ ಸತ್ಯವ
ಈಗ ನಿಂದನೆಗೆ ಬಿರುದು ಬಾವಲಿಗಳ ಅಲಂಕಾರ

ಚಿಂತಿಸಿರಿ ಯೋಚಿಸಿರಿ ಪ್ರಶ್ನಿಸಿರಿ ಪ್ರತಿಕ್ರಿಯಿಸಿರಿ
ಸಮಾಜದ ರೋಗವಿದು ಮನಸಿನ ಕೊಳೆಯಿದು
ದೋಣಿಯ ಮುಳುಗಿಸಲು ಕುತಂತ್ರದ ರಂಧ್ರವಿದು

Advertisements

7 thoughts on “ಅನಂತವನರಿಯದೆ ಅಂತವ ಹುಡುಕಿದರು

  1. I know to whom was this written for. ಶತಮಾನಗಳಿಂದ ನಡೆದು ಬಂದದ್ದು ಯಾರೋ ವಿಬಿನ್ನ ವಿಚಾರಧಾರೆ ಇರುವವರು ಎಂದು ನಾಶವಾಗಿಬಿಡಲ್ಲ ರೀ! ಅದು ಒಬ್ಬನಿಂದಲ್ಲ ಇಡಿ ಪ್ರಪಂಚದ ಶಕ್ತಿ ಕೂಡಿದರು ಸೋಲಿಸಲಾಗುವುದಿಲ್ಲ! ಹಾಗೆ ಇವರು ಕೂಡ ಅಡಗಿ ಹೋಗುತ್ತಾರೆ!

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s