ಮೌನ ಮಾತು ಮೌನ ……

ಹೆಪ್ಪುಗಟ್ಟಿದ ಮೌನದ ಮನೆಯೊಳಗೆ
ಶೀಥಲ ಸಮರಕೆ ಸನ್ನದ್ಧ ಗೋಡೆಗಳು
ಶಬ್ದಗಳ ಕಂಪನವಿಲ್ಲ ಶೂನ್ಯ ಎದೆಯೊಳಗೆ
ನಿಟ್ಟಸಿರು ಕೂಡ ಅಂಜಿದೆ ಹೊರಬರಲು

ಮಾತು ಬೇಕೆನಿಸಿದೆ ಏಕಾಂತ ಸಾಕಾಗಿರಲು
ನಿಶ್ಯಬ್ದದ ನಗಾರಿಯೇ ನಡುಗಿಸುವ ಸದ್ದಾಗಿ
ಇನ್ನು ಸಹಿಸಲಾರದೆ ಕಿತ್ತೆದ್ದು ಹೊರಬಂದು
ಬಂಧು ಬಳಗ ಮನೆಯವರ ಅರೆಸಿ ಹೋಗಿ

ಅಪ್ಪುಗೆಯ ಒಪ್ಪುಗೆಯ ಅದ್ದೂರಿ ಸ್ವಾಗತ
ನಗುವಿನ ಅಲೆಗಳ ಭರದಲ್ಲಿ ಬೇಸರ ಕರಗಿ
ಪ್ರೀತಿಯ ಪಾಕ ಬೆರೆಸಿದ ಭೂರಿ ಭೋಜನ
ಎಲ್ಲಾ ಒಮ್ಮೆ ಶಾಂತ ಉದರದ ಆರ್ಭಟದಲ್ಲಿ

ಸಮಯ ಕಳೆದಂತೆ ತಾಳ ಲಯ ತಪ್ಪಿತ್ತು
ನಗುವಿನಲ್ಲಿ ಕಂಡಿದ್ದು ಕುಹಕದ ವಂಚನೆ
ಸುಳ್ಳಿನ ಗಂಟಲಿನಿಂದ ಬಂದ ಶಬ್ದವದು
ಮನ ಮುದುಡಿ ಮೌನಕ್ಕೆ ಶರಣು ಮತ್ತೆ

Advertisements

2 thoughts on “ಮೌನ ಮಾತು ಮೌನ ……

  1. ಎರಡು ಮೌನಗಳ ನಡುವಿನ ಮಾತ ಸೇತುವೆಯ ಕೃತಿಮತೆಯೆಲ್ಲ ಬಯಲಾಗುವುದು, ಮೊದಲ ಕೃತಕ ಅಪ್ಪುಗೆ, ಒಪ್ಪುಗೆಯೆ ಕಾಟಾಚಾರಗಳೆಲ್ಲ ಮುಗಿದ ಮೇಲೆ ತಾನೆ ? ಅದರಲ್ಲು ಬಂಧು ಬಳಗದ ಒಡನಾಟದಲ್ಲಿ ಸೂಕ್ಷ್ಮವಾಗಿ ಚೆಲ್ಲಿಕೊಳ್ಳುವ ಕುಹಕ, ಅವಹೇಳನ, ಉದಾಸೀನತೆಗಳನ್ನು ಕಂಡಾಗ, ಯಾಕೆ ಜನರಿಗೆ ಬರಿಯ ಸಹಜ ಮಾನವರಂತಿರುವುದೂ ಕಷ್ಟವೆಂದು ಗೊಂದಲವೆದ್ದುಬಿಡುತ್ತದೆ. ಯಾಕೆಂದರೆ ಬೇಕಿರಲಿ ಬಿಡಲಿ ಅಲ್ಲಿ ಎದ್ದು ಕಾಣುವುದು ಸ್ಥಾನಮಾನ ಅಂತಸ್ತುಗಳ ತಾರತಮ್ಯ.. ಅದರಲ್ಲು ಸಾಧಾರಣ ಸ್ಥಾನಮಾನದವರಾಗಿ ಹೋದರೆ, ನಿರ್ಲಕ್ಷ್ಯದಲ್ಲೆ ಆಗುವ ಅವಮಾನ ಮಾತಿನಲ್ಲಿ ಹೇಳಿಕೊಳ್ಳಲಾಗದ ತಳಮಳ. ವಿಚಿತ್ರವೆಂದರೆ ದೂರವಿದ್ದಾಗ ಎಲ್ಲರೊಡನೆ ಬೆರೆತು ಮಾತಾಡುವ ತಪನೆ ಮಾತ್ರ ಮೌನವನ್ನು ತಿವಿಯುತ್ತಿರುತ್ತದೆ. ಆ ಮೌನ ಮುರಿದು ಮಾತಿಗಿಳಿದರೆ, ಮತ್ತೆ ಮೌನದ ಸೆರಗ್ಹಿಡಿದರೆ ಸಾಕಪ್ಪ ಎನಿಸುವಂತೆ ಮಾಡಿಬಿಡುತ್ತದೆ. ಅದನ್ನು ಕವಿತೆಯ ಶೀರ್ಷಿಕೆ ಚೆನ್ನಾಗಿ ಹಿಡಿದಿದೆ. ಅರ್ಥಪೂರ್ಣ ಮತ್ತು ಅರ್ಥಗರ್ಭಿತ ಕವನ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s