ಈ ಕಥೆ ನಿಮಗೆ ಗೊತ್ತಾ?

ಸಾಗರದಾಚೆಯಲೊಂದು ಸುಭಿಕ್ಷ ನಾಡು
ಪರಮ ಶಿವಭಕ್ತ ರಾಜ ಕಾಯುವ ಬೀಡು
ದೊರೆಗೊಬ್ಬಳು ಮುದ್ದಿನ ತಂಗಿ ಜೊತೆಗೆ
ವಿಧವೆ ಅವಳ ಬಾಳೇ ಬೇಸರ ಅವಗೆ

ತವರಲ್ಲೇ ಇದ್ದವಳು ಹೊರಟಳು ಹೊರಗೆ
ಸುಮ್ಮನೆ ವಾಯುವಿಹಾರ ಕಾಲಹರಣಕೆಂದೆ
ಸಂಜೆಯ ತಂಗಾಳಿಗೆ ಎದೆಯ ಆಸೆಯುಕ್ಕಿ
ವಿರಹದ ಬೇಗೆಯು ಕಾಯಿಸಿತು ಬಡದೇಹವ

ಕಂಡಳಾಗ ನೀಳ ಸುಂದರ ಪುರುಷನೊಬ್ಬನ
ಮಾಡಿಕೊಂಡಳು ತಾನೇ ಪ್ರೇಮ ನಿವೇದನೆ
ಆದರೇನು? ಅವ ವಿವಾಹಿತನೆಂದ ನಸು ನಕ್ಕು
ಅವನೇ ತೋರಿದ ಜೊತೆಯಲ್ಲಿದ್ದ ಇನ್ನೋರ್ವನ

ಮನದ ಕಾವನಿಳಿಸಿ ನಾಚುತ್ತಾ ಕೇಳಿದಳು
ಅನುರಾಗದ ಅರ್ಪಣೆ ಕೇಳದೆ ಕುಪಿತಗೊಂಡ
ಮಾತಿಗೆ ಮಾತು ಬೆಳೆದು ಗಾಯವಾಯಿತು
ಅಳುತ್ತಾ ಹಿಂದಿರುಗಿದಳು ಪರಿತ್ಯಕ್ತ ನಾರಿ

ವಿಷಯ ಮುಟ್ಟಿತು ಕೊನೆಗೆ ರಾಜನಿಗೆ
ಮಮತೆ ಹರಿದು ಕೋಪದಲ್ಲಿ ಉರಿದುರಿದು
ಅಬ್ಬರಿಸಿ ಬಂಧಿಸಿ ಹಾರಿಸಿಕೊಂಡು ಬಂದ
ಸೋಗಿನಲಿ ವಿವಾಹಿತನ ಪ್ರೀತಿಯ ವನಿತೆಯನು

ಪತಿವ್ರತೆಯ ಬಂಧನವ ಬಿಡಿಸಲು ಆಯಿತು
ಮಹಾಯುದ್ಧ ಸಾಗರಕೆ ಸೇತುವೆ ಕಟ್ಟಿ
ಮುತ್ತಿದರು ರಾಜ್ಯವ ವಧಿಸಿದರು ಅಣ್ಣನ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ ಎಂಬ ಸುಖಾಂತದಲ್ಲಿ

6 thoughts on “ಈ ಕಥೆ ನಿಮಗೆ ಗೊತ್ತಾ?

  1. ಚೆನ್ನಾಗಿದೆ, but I disagree with that last line of yours, think about it this way- ಸುಭಿಕ್ಷವಾಗಿ ರಾಜ್ಯಭಾರ ಮಾಡುತ್ತಿದ್ದ ಪರಮ ಶಿವಭಕ್ತನಲ್ಲವೇ ರಾಜ (ರಾವಣ right?) ಅವನನ್ನು ದುಷ್ಟನೆನ್ನುವುದು ಎಷ್ಟು ಸರಿ? ಪರಸ್ತ್ರೀ ಅಪಹರಣ ತಪ್ಪೆನ್ನಿವುದಾದರೆ ಕನ್ಯೆಯೊಬ್ಬಳನ್ನು ವಿರೂಪಗೊಳಿಸುವುದೂ ವೀರರಿಗೂ ರಾಜಪುತ್ರರಿಗೂ ಅಥವಾ ಅವತಾರ ಪುರುಷನೆನಿಸಿಕೊಂಡವರಿಗಂತೂ ಖಂಡಿತಾ ಶೋಭಾಯಮಾನವಲ್ಲ ಅಲ್ಲವೇ..
    ದುಷ್ಟ ಶಿಕ್ಷಣೆ ಅನ್ನುವದಕ್ಕಿಂತ ಇದೊಂದು ಪುರುಷಾಹಮಿಕೆಯ ಜಿದ್ದಾಜಿದ್ದಿ ಎನಿಸುತ್ತದೆ ಕೆಲವೊಮ್ಮೆ. .ಅಂಥಾ ಉದ್ಗ್ರಂಥವನ್ನು ಇಷ್ಟು ಸರಳವಾಗಿ ನಿರೂಪಿಸಿರುವುದು ತುಂಬಾ ತುಂಬಾ ಹಿಡಿಸಿತು. 😊

    Liked by 1 person

    1. ನಾನು ಕೊನೆ ಸಾಲನ್ನು ವ್ಯಂಗ್ಯವಾಗಿಯೇ ಸೇರಿಸಿರುವುದು… ಆದರೆ ನಾನು ರಾವಣನ ಪರ ಮಾತನಾಡುತ್ತಿಲ್ಲ… ಏಕ ಪಕ್ಷೀಯವಾಗಿ ಹೇಳಿರುವ ಕಥೆ ಅಷ್ಟೇ …

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s