ಆಧುನಿಕ ಪ್ರಪಂಚದ ಪ್ರಶ್ನೆಗಳಿಗೆ ತಕ್ಕ ಉತ್ತರ ಕೊಟ್ಟು ಬಾಳುವಷ್ಟು ಜೀವಾಳ ಪುರಾತನ ಹಿಂದು ಧರ್ಮದಲ್ಲಿರುವುದೇ? ಪಾಶ್ಚಾತ್ಯ ಆಡಂಬರ,ಚಮತ್ಕಾರಗಳೆದುರಿಗೆ ತಲೆಯತ್ತಿ ನಿಲ್ಲುವಷ್ಟರ ಬೆನ್ನುಮೂಳೆ ಆ ಸನಾತನ ಸಂಸ್ಕೃತಿಗಿರುವುದೇ? ವೈಜ್ಞಾನಿಕ ಆವಿಷ್ಕಾರಗಳ ಪ್ರವಾಹಕ್ಕೆ ಮುಳುಗದೆ,ಕದಲದೆ ಉಳಿಯಲು ಬೇಕಾದ ಸತ್ವ ವೇದಗಳಲ್ಲಿ ಇದೆಯೇ?
ಈಗಿನ ಕಾಲಕ್ಕೂ ಇದು ಹೊಂದಿಕೆಯಾಗುತ್ತಿದೆಯಾದರೂ ಈ ಪ್ರಶ್ನೆಗಳು ಮೊದಲು ಉದ್ಭವಿಸಿದ್ದು ಒಂದು ಮಹಾಶಂಕೆ,ಮರಣ ಭೀತಿ ಹಿಂದು ಸಮಾಜಕ್ಕೆ ತಟ್ಟಿದ್ದ ಕಾಲದಲ್ಲಿ. ಲೋಕದಲ್ಲಿ ಯಾರ ಬಲವು ಒಂದು ಕ್ಷಣವಿದ್ದಂತೆ ಮತ್ತೊಂದು ಕ್ಷಣವಿರಲಾರದು. ಹೀಗೆ ಸೋತ ಭಯದಲ್ಲಿ ಮುಳುಗುತ್ತಿರಬೇಕಾದರೆ ಶ್ರೀ ವಿವೇಕಾನಂದರು ಆತ್ಮಶ್ರದ್ದೆಯನ್ನು ಮರಳಿ ಬದುಕಿಸಿದರು. ಇಡೀ ಪ್ರಪಂಚಕ್ಕೆ ಘಂಟಾಘೋಷವಾಗಿ ಪ್ರತ್ಯುತ್ತರ ನೀಡಿ ಎದ್ದು ನಿಂತರು. ಇದು ಪ್ರತಿಯೊಬ್ಬ ಹಿಂದುವಿಗೆ ವಿಜಯದ ದಿವಸ . ಪ್ರಪಂಚದಲ್ಲಿ ಪ್ರತಿಧ್ವನಿಸಿದ ವಿಜಯ ಭೇರಿ ಇಂದು ನಮ್ಮ ಎದೆಗಳಲ್ಲಿ ಮತ್ತೆ ಮೊಳಗಬೇಕಿದೆ. ಬನ್ನಿ ಈ ಆತ್ಮ ಪರಿಶೋಧನೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಿ..