ಓದಕ್ಕೆ ಕಷ್ಟ…ಆದರೂ ಇಷ್ಟ

image

“ಅಜಬಿರು” ತೀರ್ಥರಾಮ ವಳಲಂಬೆಯವರ ಕಾದಂಬರಿ. ಈ ಹೊಸ ಕಾದಂಬರಿಯನ್ನು ಆರಿಸಿಕೊಂಡಿದ್ದಕ್ಕೇ ಕಾರಣ ಅವರ ಹಿಂದಿನ ಪುಸ್ತಕ ದೇಶ,ಕಾಲ,ಬದುಕು ಮತ್ತು ದೇವರು. ವೈಜ್ಞಾನಿಕವಾಗಿ ಬರೆಯುವ ಲೇಖಕರ ಬರಹ ಅರಗಿಸಿಕೊಳ್ಳುವುದು ಕಷ್ಟವಾದರೂ ಅದರಲ್ಲಿನ ಜ್ಞಾನ ಅಗಾಧ.ಸದ್ಯಕ್ಕೆ ಇದು mybookadda.in ದಲ್ಲಿ ಲಭ್ಯವಿದೆ.

“ಅಜಬಿರು” ವಿನಲ್ಲಿ ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ಗೊಂದಲಗಳು ಕಥಾ ಹಂದರದಲ್ಲಿ ಅರ್ಥವತ್ತಾಗಿ ಮೂಡಿಬಂದಿದೆ. ಸಾಕಷ್ಟು ಕೃಷಿ ನಡೆಸಿ ಬರೆದುದರಿಂದ ಇದೊಂದು ಬರೀ ಹೊತ್ತು ಕಳೆಯುವ ಪುಸ್ತಕ ಅಲ್ಲ. ಪ್ರಾಮಾಣಿಕವಾಗಿ ಕ್ಲಿಷ್ಟ ವಿಚಾರಗಳಿಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಇಲ್ಲಿ ಕಾಣಬಹುದು.

ದೇವರು, ಧಾರ್ಮಿಕ ನಂಬಿಕೆ, ಭೂತ ಇವುಗಳನ್ನೆಲ್ಲಾ ವೈಜ್ಞಾನಿಕವಾಗಿ ವಿಶ್ಲೇಷಿಸಿ,  ನಂಬಿಕೆಯ ಆಳಕ್ಕೆ ಹೋಗಿ ವಿಚಾರ ಮಾಡಿದ್ದಾರೆ. ತುಳುನಾಡಿನ ಕಂಪಿನಲ್ಲಿ ಮುಂದುವರಿಯುವ ಕಥೆ ಅಲ್ಲಿನ ಆಚಾರ- ವಿಚಾರವನ್ನು ವಿವರಿಸುತ್ತದೆ. ಒಟ್ಟಿನಲ್ಲಿ ಸಂಪ್ರದಾಯಗಳಿಗೆ , ಅದರೊಂದಿಗೆ ಸಾಮಾಜಿಕ ಬದುಕಿಗೆ ವಿಜ್ಞಾನದ, ವಿಚಾರದ ದರ್ಶಕದಲ್ಲಿ ಅರ್ಥೈಸಿರುವುದು ಈ ಕಾದಂಬರಿಯ ವಿಶೇಷತೆ. ಆದರೆ ಮೊದಲೆ ಹೇಳಿದಂತೆ ಇದು ಮನೋರಂಜನೆಗಾಗಿ ಅಲ್ಲ . ವಿಚಾರಗಳು ಸ್ವಲ್ಪ ಹೆಚ್ಚೇ ಇರುವ ಇದನ್ನು ಕುಳಿತು ಓದಬೇಕಾಗುತ್ತದೆ, ಓದಿಸಿಕೊಂಡು ಹೋಗುವಂತ ಸುಲಲಿತ ಬರಹವಲ್ಲ.

3 thoughts on “ಓದಕ್ಕೆ ಕಷ್ಟ…ಆದರೂ ಇಷ್ಟ

  1. ಸಾಂಪ್ರದಾಯಿಕ ವಿಷಯಗಳನ್ನು ಬರೆವಂತೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ವಿಷಯವನ್ನು ಬರೆಯಲಾಗುವುದಿಲ್ಲ, ಅದರಲ್ಲು ಕನ್ನಡದಲ್ಲಿ. ಇನ್ನು ಅದನ್ನು ಸರಳವಾಗಿ ಬರೆಯಹೊರಡುವುದಂತು ಇನ್ನು ಕಷ್ಟದ ಕೆಲಸ.. ಒಂದು ಪ್ರಯೋಗ ಮಾಡೋಣವೆಂದು ಹಳೆ ಪುರಾಣ ಕಥೆಗಳ ನಂಬಿಕೆಗಳನ್ನೆ ವೈಜ್ಞಾನಿಕ ಸ್ತರದಲ್ಲಿ ವಿವರಿಸಲು ನಾನು ಯತ್ನಿಸಿದ್ದೆ. ಬೋರೆನಿಸುವ ಬರಹವಾಗದಿರಲೆಂದು ಅದಕ್ಕೊಂದು ಐಟಿ ಪ್ರಾಜೆಕ್ಟಿನ ಚೌಕಟ್ಟು ಕೊಟ್ಟು ಕಾದಂಬರಿಯಾಗಿಸಿದೆ – ಪರಿಭ್ರಮಣ ಅನ್ನುವ ಹೆಸರಿನಲ್ಲಿ. ಸಂಪದದಲ್ಲಿ 67 ಕಂತುಗಳಲ್ಲಿ ಮೂಡಿಬಂತು. ಸರಳವಾಗಿ ಎಂದೆ ನಾನಂದುಕೊಂಡರು , ನಿಮ್ಮ ಮಾತು ನಿಜ – ಒಂದೆ ಓದಿನ ಗುಟುಕಿಗೆ ದಕ್ಕುವಂತದ್ದಲ್ಲ ಈ ತರಹದ ಬರಹಗಳು 🙂

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s