ಆಗಸ್ಟ್ 16 !!!!

ಆಗಸ್ಟ್ 15 ಕಳೆದು ಹೋಯಿತು. ಇನ್ನು ಎಲ್ಲಾ status, dp, FB updates ಮಾಮೂಲಿನಂತೆ film, hotel, check in, selfie ಗಳು ಅಂತ ತುಂಬಿಕೊಳ್ಳೋದು ಅಷ್ಟೆ. ನಮ್ಮದೇ ಜಾಸ್ತಿಯಾಗಿ ಹಾಸು ಹೊದ್ದು ಮಲಗಿಕೊಳ್ಳುವಷ್ಟಿರುವಾಗ ಒಂದು ದಿನವಾದರೂ ಯೋಚನೆ ಮಾಡಿದ್ದೇ ಹೆಚ್ಚು. ಇನ್ನು ಉಳಿದ ದಿನ ಮಾಡುವುದಕ್ಕಾದರೂ ಏನಿದೆ? ರಾಜಕೀಯ, ರಾಜಕಾರಣಿಗಳು ಇರೋದು ಅದಕ್ಕೆ ತಾನೆ, ನಮಗೆ ಸಿಗುವುದು weekend ಮಾತ್ರ ಆಗ ರಿಲ್ಯಾಕ್ಸ್ ಆಗಲಿಲ್ಲ ಅಂದರೆ ವಾರವಿಡೀ torture ತಡೆದುಕೊಳ್ಳೋಕೆ ಶಕ್ತಿ ಬೇಕಲ್ಲ. 

ಆದರೂ ಒಮ್ಮೊಮ್ಮೆ ಅನಿಸುತ್ತದೆ. ಈ ವಿದೇಶಿ ಕಂಪೆನಿಗಳಲ್ಲಿ ದುಡಿಯಲು ಶುರು ಮಾಡಿದ ಮೇಲೆ ದೇಶದ ಮೇಲೆ ಭಕ್ತಿ ಇರಲಿ ಆಸಕ್ತಿಯೇ ಹೊರಟು ಹೋಗಿದೆ.ಈ ರಾಜಕಾರಣದ ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಂಡು ಸಮಯ ಹಾಳು ಮಾಡುವುದಕ್ಕಿಂತ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂದು ವಾದ ಮಾಡುವುದೇ better.

ಇಂಥ ಟೈಮಲ್ಲಿ ಭಟ್ಟರು ಹೇಳಿದ್ದು ನೆನಪಾಗತ್ತೆ. ಅನಿಸಿದ್ದು ಮಾಡುವವನೆ ಪರಮಾತ್ಮ, ಮಾಡೋದು ಏನು ಅಂತ ನಮಗೆ ಗೊತ್ತಿಲ್ವೆ!!! ಹೀಗೆ ಎಷ್ಟೋ ಶಕ್ತಿ ಏನು ಮಾಡಬೇಕು ಅಂತ ಗೊತ್ತಿಲದೇನೆ ವೇಸ್ಟ್ ಆಗಿದೆ. ದಿನ ನಿತ್ಯ ಕುಳಿತು ನ್ಯೂಸ್ ನೋಡಿ, ಪೇಪರ್ ಓದಿ ಅದು ಸರಿ ಇಲ್ಲ,  ಇದು ಸರಿ ಇಲ್ಲ ಎಂದರೂ ಏನು ಮಾಡಿದಂತಾಗುವುದಿಲ್ಲ. ಗೆಳೆಯರ ಗುಂಪಿನಲ್ಲಿ ಟೀ ಕುಡೀತ ಆಧಾರ್ ಬೇಕಿತ್ತಾ, ಮೋದಿಯ ಯೋಜನೆಗಳು, ಯಡ್ಡಿ ಸಿದ್ದು ಏನೇ ಮಾತಾಡಿದರೂ ಸಾಕಾಗುವುದಿಲ್ಲ ಅನಿಸಿಬಿಡುತ್ತದೆ.

ಎಲ್ಲೋ ಒಳಗಿರುವ ಭಾರತ ಎಂಬ ಭಾವ ಸುಮ್ಮನಿದ್ದರೂ ಸುಮ್ಮನಿರಲು ಬಿಡುವುದಿಲ್ಲ. ನಮ್ಮ ಬಾವುಟ ನೋಡಿದರೆ ಸುಮ್ಮನೆ ಖುಷಿಯೆನಿಸುತ್ತದೆ. ಈ ಮನಸ್ಥಿತಿಯನ್ನು ಜಾಗೃತಗೊಳಿಸ ಬೇಕಾಗಿದೆ. ಭಾರತ ಎಂದರೆ ಭಾರತೀಯರು. ತಾಯಿಯನ್ನು ಬಿಟ್ಟು ಬೇರೆಯವರ ಮನೆ ಆಂಟಿಯನ್ನು ನೋಡುವುದು ಅರ್ಥಹೀನ. ನಾವು ಸುಮ್ಮನಿದ್ದರೂ ಮಕ್ಕಳಿಂದ ಮಾರ್ಗ ಸಿದ್ಧವಾಗಿದೆ.  ಅವರೊಂದಿಗೆ ಹೆಜ್ಜೆ ಹಾಕಿ ಭವ್ಯ ಭಾರತದ ಶ್ರೇಷ್ಠ ಕನಸಿಗೆ ಜೊತೆಯಾಗಿವುದು ಈಗ ನಮ್ಮ ಆಯ್ಕೆ.

‘ವಿಶ್ವ ಗುರು ಭಾರತ’ ಎನ್ನುವ ಅದ್ಭುತ ಗುರಿಯನ್ನು ಇರಿಸಿಕೊಂಡು ಸಾಗುತ್ತಿರುವ ಯುವ ಬ್ರಿಗೇಡ್ ಇದಕ್ಕೆ ಒಳ್ಳೆಯ ವೇದಿಕೆ. ದಿನವಿಡೀ ಹೇಳಿದರೂ ಮಿಕ್ಕುವ ಇದರ ಕಾರ್ಯ ಕಲಾಪಗಳು  ಅಗಾಧ. ಇದರೊಂದಿಗೆ ಹೆಣ್ಣು ಮಕ್ಕಳಿಗಾಗಿ ಇರುವ ಸಹೋದರಿ ನಿವೇದಿತ ಪ್ರತಿಷ್ಠಾನ ಕೂಡ ದೊಡ್ಡ ಕನಸಿನೊಂದಿಗೆ ಸಾಗುತ್ತಿದೆ. ರಾಜ್ಯದೆಲ್ಲೆಡೆ ಲಭ್ಯವಿರುವ ಇದು ಹುಮ್ಮಸನ್ನು ಸರಿಯಾದ ದಾರಿಯಲ್ಲಿ ಹರಿಸಬೇಕೆಂದಿದ್ದರೆ  ಅತ್ಯುತ್ತಮ ಕಾಲುವೆ. ಇನ್ನು ಹೆಚ್ಚಿನ ಎಲ್ಲಾ ಮಾಹಿತಿ, ಅನುಮಾನ, ಪ್ರಶ್ನೆ, ಉತ್ತರ ಗಳಿಗಾಗಿ FB ಅಥವಾ Google ಹುಡುಕಾಡಿದರೆ ಸಿಗುತ್ತದೆ.

Advertisements

2 thoughts on “ಆಗಸ್ಟ್ 16 !!!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s