ಓದಿನ ಬಂಡಿಯ ಮತ್ತೆ ಹತ್ತಿ.. 

ಹಪ್ಪಳ ಸಂಡಿಗೆಯ ಜೊತೆ ಊಟ ಮಾಡಿಸಿ ಅಮ್ಮ ನಿದ್ದೆ ಮಾಡು ಎಂದು ಹೊದ್ದಿಸಿ ಹೋಗಿದ್ದಳು. ನಿದ್ದೆ ಮಾಡಬೇಕೆಂದಾಗ ಹೇಗೆ ತಾನೆ ನಿದ್ದೆ ಬಂದೀತು? ಅಪ್ಪನ ಕೈಯಲ್ಲಿ ಅಲ್ಲಾಡುತ್ತಿದ್ದ ಪೆನ್ನನ್ನು ನೋಡಿದಾಗಲೇ ಅವರನ್ನು ಕರೆಯಲು ಭಯವಾಗಿ TV ನೋಡುತಿದ್ದ ಅಜ್ಜಿಯನ್ನು ಕೂಗಿದೆ.ನಾನು ಒಂದು ಕಥೆ ಹೇಳ್ತೀನಿ ಅಂತ ಅವಳು ಎಲೆ ಅಡಿಕೆ ಹಾಕಿಕೊಂಡಳು. ಆಗ ಶುರು ಮಾಡಿದ್ದೇ ವಿನತೆ-ಕದ್ರುವಿನ ಕಥೆ.ಅಲ್ಲಿಂದಲೇ ಓದಿನ ಪಯಣದ ಬಯಕೆ ಚಿಗುರಿಕೊಂಡಿದ್ದು.

ಸ್ಕೂಲು ಬುಕ್ಕುಗಳನ್ನು ಓದು ಎಂದು ಅಮ್ಮ ತಿವಿಯುವುದಕ್ಕೋ ಏನೋ.. ಹೆಚ್ಚಿನ ಜನರಿಗೆ ಓದು ಎಂದರೆ ತಲೆನೋವು.ಆದರೆ ನೀವು ಈ ಆರ್ಟಿಕಲ್ ಓದುತ್ತಿರುವಿರಾದರೆ ಎಲ್ಲೊ ಓದಿನ ತುಡಿತ ಇದೆ ಎನ್ನಬಹುದು.ಮೊದ ಮೊದಲು ಬೇಸರಕ್ಕೆ ಮದ್ದಾಗಿ ಕಥೆಯಂತೆ ಓದಿಸಿಕೊಂಡು ಹೋಗುವ ಪುಸ್ತಕಗಳು ಹೆಚ್ಚು ಹಚ್ಚಿಕೊಳ್ಳುತ್ತವೆ.ಇಂಥ ಕಥೆಗಳಿಂದ ಒಂದಿಷ್ಟು ವಿಚಾರಗಳು,ಆದರ್ಶಗಳು ನಮಗೆ ಗೊತ್ತಿಲ್ಲದಂತೆ ನಮ್ಮೊಳಗೆ ಸೇರುತ್ತದೆ.ನಂತರದಲ್ಲಿ ಕಾವ್ಯ,ವಿಚಾರಧಾರೆ,ಆತ್ಮ ಕಥೆಗಳು, ವ್ಯಕ್ತಿ ವಿಕಸನ ಹೀಗೆ ಹತ್ತು ಹಲವು ರೆಂಬೆಗಳಲ್ಲಿ ಸಸಿ ಮರವಾಗಿ ಬೆಳೆಯುತ್ತದೆ.

ಆದರೆ ಓದಿನ ಪ್ರತಿ ಶುರುವಿನಲ್ಲಿ ಏನೋ ವಿಚಾರದ ಹುಡುಕಾಟವಿರುತ್ತದೆ, ತುಡಿಯುತ್ತಿರುವ ಅಜ್ಞಾತ ಪ್ರಶ್ನೆಗೆ ಉತ್ತರದ ತವಕವಿರುತ್ತದೆ.ಒಂದು ಪುಸ್ತಕದ ಹಾಳೆಯ ಗಲ್ಲಿಯಲ್ಲಿ ತಿರುಗಿ ಬಂದರೆ ಯಾವುದೋ ಜಗತ್ತನ್ನು ನೋಡಿದ ಅನುಭವ. ಯಾವುದೋ ನೋವಿಗೆ ಆ ಅನುಭವದಿಂದ ಸಾಂತ್ವನ. ಇದಕ್ಕೆಲ್ಲಾ ದೊಡ್ಡ ದೊಡ್ಡ ಪುಸ್ತಕಗಳ ನಡುವೆ ತಲೆ ಕೆರೆದು ಕೊಂಡು ಕೂರಬೇಕಾಗಿಲ್ಲ. ಯೋಚನೆಗಳ ನಡುವೆ ಚಿಂತನೆ ಎಂಬ ಬಾಗಿಲನ್ನು ತೆರದಿಟ್ಟರಾಯಿತು, ಮನಸನ್ನು ಇನ್ನೂ ಕಲಿಯುವ ವಿದ್ಯಾರ್ಥಿಯಂತೆ ಇಟ್ಟು ಕೊಂಡರಾಯಿತು.

ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ ಎಷ್ಟು ತಿಳಿದುಕೊಳ್ಳಲು ಸಾಧ್ಯ?  ಈ ತಿಳುವಳಿಕೆಯನ್ನು ಬರಹವೊಂದು ನಮಗೆ ತೋರಿಸುತ್ತದೆ. ಒಂದು ಕಾಲಮಾನಕ್ಕೆ ಕೊಂಡೊಯ್ದು ಗುಟ್ಟೊಂದನ್ನು ಹೇಳಿ ಕಳಿಸುತ್ತದೆ. ಇಂಥ ಆಸಕ್ತಿ ಈಗ ಇಂಟರ್ನಟ್,ಚಾಟಿಂಗ್, ಗೇಮಿಂಗ್ ಮುಂತಾದ ಡಿಜಿಟಲ್ ಲೋಕದಲ್ಲಿ ಕಳೆದು ಹೋಗಿದೆ.ಹಾಗೆಂದು ಪುಸ್ತಕ ಬದನೆಕಾಯಿಯದೇ ಊಟವಾಗಬೇಕೆಂದಲ್ಲ. ಓದಿನ ಹವ್ಯಾಸ ಮನಸಿನ ಸರೋವರಕ್ಕೆ ಹೊಸ ನೀರು ಹರಿಸಿ ಕೊಳೆ ತೊಳೆದು ಹೊಳೆಯುವಂತೆ ಮಾಡುತ್ತದೆ.

4 thoughts on “ಓದಿನ ಬಂಡಿಯ ಮತ್ತೆ ಹತ್ತಿ.. 

  1. ಓದುವ ಹವ್ಯಾಸದಿಂದ ದೂರಾಗಿ ಅಥವಾ ಆ ಹವ್ಯಾಸಕ್ಕೆ ಬೀಳದೆ ಡಿಜಿಟಲ್ ಲೋಕದಲ್ಲಿ ಕಳುವಾಗುವವರಿಗೆ ಅದರಿಂದಾಗುವ ನಷ್ಟವನ್ನು ಡಿಜಿಟಲ್ ಲೋಕವೆ ತುಂಬಿಕೊಡಬೇಕೊ ಏನೊ ? ಇ-ಓದಾಟದಿಂದಾದರು ಈ ಕೊರತೆ ತುಂಬುವಂತಾದರೆ ಒಳಿತು. ಕನ್ನಡದ ಮಟ್ಟಿಗೆ ಸದ್ಯಕ್ಜೆ ಕೇವಲ ಬ್ಲಾಗುಗಳೆ ಈ ನಿಟ್ಟಿನ ಪೂರಕ ಸಾಧನಗಳಾಗಬೇಕೊ ಏನೊ..

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s