ಹೇಳುವುದಕ್ಕು ಕೇಳುವುದಕ್ಕು ಇದು ಸಮಯವಲ್ಲ!!

image

image

ಸುಮಾರು ವರುಷಗಳ ಹಿಂದೆ ಕಲರ್ ಟಿವಿಯನ್ನು ಕಣ್ಣರಳಿಸಿ ನೋಡುತ್ತಿದ್ದ ಕಾಲ. ಪ್ರತಿ ಮನೆಯಲ್ಲೂ ಗುನುಗುತ್ತಿದ್ದುದು
ಬಾನಿಗೊಂದು ಎಲ್ಲೆ ಎಲ್ಲಿದೆ, ನಾವಾಡುವ ನುಡಿಯೆ,ಮುತ್ತಿನಂಥ ಮಾತೊಂದು, ಗೊಂಬೆ ಆಟವಯ್ಯಾ … ಹೀಗೆ ನೂರಾರು ಹಾಡುಗಳು. ಈ ಎಲ್ಲಾ ಗೀತೆಗಳಲ್ಲಿಯೂ ಸುಂದರ ಸಂದೇಶವೊಂದು ಮನೆ ಮುಟ್ಟುತ್ತಿತ್ತು.ಬರೀ ಹಾಡೇ ಅಲ್ಲದೆ ಪ್ರತಿ ಚಿತ್ರದಲ್ಲಿ ಸತ್ವ ತುಂಬಿರುತಿತ್ತು.

ಅದರಲ್ಲೂ ರಾಜ್ ಅಭಿನಯದಲ್ಲಿ ಕರ್ನಾಟಕದ ಪ್ರತಿ ಮನೆಗೂ, ಮನಸಿಗೂ ನೀತಿಯ ಪಾಠ. ತೊಂಭತ್ತರ ದಶಕದಲ್ಲಿ ಅಪ್ಪನ ಜೊತೆ ಕುಳಿತು ಸಿನಿಮಾ ನೋಡುವಾಗ ಆರ್ಭಟಿಸುವ ಬಭ್ರುವಾಹನ, ಕಷ್ಟ ಪಡುವ ರೈತ,ಬುದ್ಧಿವಂತ ಪೋಲಿಸ್,ನಿಷ್ಠಾವಂತ ಅಧಿಕಾರಿ,ಮಹಾಭಾರತದ ಕೃಷ್ಣ, ತಾಯಿಗೆ ಮಗ, ಪ್ರೀತಿಯ ನಾಯಕ ಹೀಗೆ ಹತ್ತು ಹಲವು ರೀತಿ ಕಥೆ ಹೇಳುವ ನಲ್ಮೆಯ ಹೀರೊ. ಗೊತ್ತೆ ಆಗದಂತೆ ಸದ್ಭಾವನೆ ಮನಸಲಿ ಮೂಡಿ ಉತ್ತಮ ಮನುಷ್ಯನೊಬ್ಬ ರೂಪುಗೊಳ್ಳುತ್ತಿದ್ದ.

ಅಂತರಾತ್ಮವೇ ಸದ್ಗರು ಎನ್ನುವ ನೆಚ್ಚಿನ ಈ ಅಭಿನಯ ಚಕ್ರವರ್ತಿಯ ನೆನಪುಗಳಲ್ಲಿ. ಗುರು ಪೂರ್ಣಿಮೆಯೆಂದು ಬಂದ ಈ ವಾಟ್ಸಾಪ್ ಚಿತ್ರ ಇಷ್ಟೆಲ್ಲಾ ನೆನಪಿಸಿತು.

Advertisements

5 thoughts on “ಹೇಳುವುದಕ್ಕು ಕೇಳುವುದಕ್ಕು ಇದು ಸಮಯವಲ್ಲ!!

  1. ಬಹುತೇಕರಿಗೆ ಇದರ ಅರಿವಿರುತ್ತದೊ ಇಲ್ಲವೊ ಗೊತ್ತಿಲ್ಲ. ನಾವಂತು ಬೆಳೆದು ದೊಡ್ಡವರಾದದ್ದೆ ರಾಜ್ ಚಿತ್ರಗಳನ್ನ ನೋಡುತ್ತ. ನಮ್ಮ ಸಂಸ್ಕೃತಿ, ಭಾಷೆ, ನೀತಿ, ನಡುವಳಿಕೆ, ನಿಜಾಯತಿ, ಪ್ರೀತಿ, ಪ್ರೇಮ, ಗುನುಗುಗಳಿಗೆಲ್ಲ ಯಾವುದೆ ಕ್ಲಾಸ್ ರೂಮಿನ ಹಂಗಿಲ್ಲದೆ ಬುನಾದಿ ಹಾಕಿದ್ದು ಈ ಚಿತ್ರಗಳು ಮತ್ತದರ ಪಾತ್ರಗಳು. ಮನೆಯಲ್ಲಿ, ಸ್ಕೂಲಿನಲ್ಲಿ ಅಥವಾ ಮತ್ತೊಲ್ಲೊ ಹೊರಗೆ ದೊರಕದೆ ಇದ್ದ ಎಷ್ಟೊ ಪಾಠಗಳು ಅಂತರ್ಗತವಾಗಿ ನಮ್ಮನ್ನು, ನಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಾಗಿಸಿದ್ದು ಈ ಅದೃಶ್ಯ ಪ್ರಭಾವಗಳೆ. ಈಗಲೂ ಅದರ ತುಣುಕುಗಳಾಗಿ ನಮ್ಮನ್ನು ಕಾಡುವ ನೆನಪುಗಳೆಂದರೆ – ಆ ಹಳೆ ಹಾಡುಗಳ ಲಹರಿ.

    Liked by 1 person

      1. ಹೇಳುವುದಕ್ಕು ಕೇಳುವುದಕ್ಕು ಇದು ಸುಸಮಯ ‘ಅಂತಲಾ ? ಬೇಡ ಬಿಡಿ ಕಾಳಿದಾಸನ ಚಿತ್ರ ಪಾತ್ರವನ್ನು ಅಮರವಾಗಿಸಿದ ಆ ಸಾಲುಗಳು ಹಾಗೆಯೆ ಇರಲಿ 🙂

        Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s