ಭಾರತೀಯ ಚಿಂತನೆಗಳು ಜಗವನ್ನೆ ಆಳಲಾರಂಭಿಸಿವೆ…!

ಭಾರತೀಯ ಚಿಂತನೆಗಳು ವಿಜ್ಞಾನದ ಪರೀಕ್ಷೆಯಲ್ಲಿ

ನೆಲದ ಮಾತು

ರಮಣ ಮಹರ್ಷಿಗಳ ಬದುಕಿನ ಈ ಘಟನೆ ಬಲು ಜನಜನಿತ. ಅದೊಮ್ಮೆ ಅವರು ಭಕ್ತರೊಂದಿಗೆ ಮಾತಾಡುತ್ತ ಕುಳಿತಿದ್ದರು. ಅವರ ತೋಳಿನ ಹುಣ್ಣಿಗೆ ಚಿಕಿತ್ಸೆ ನೀಡಲೆಂದು ಅದೇ ಹೊತ್ತಿಗೆ ವೈದ್ಯರು ಬಂದರು. ಚಿಕಿತ್ಸೆ ಸಮಯದಲ್ಲಿ ತೀವ್ರ ನೋವು ಉಂಟಾಗುತ್ತದೆಯಾದ್ದರಿಂದ ಅರೆವಳಿಕೆ ಮದ್ದು ಕೊಡುವುದು ಒಳ್ಳೆಯದೆಂದು ವೈದ್ಯರ ಅಭಿಮತ. ರಮಣರು ನಿರಾಕರಿಸಿದರು.

ramana01

“ತೋಳಿನಿಂದ ಮನಸ್ಸನ್ನು ತೆಗೆದುಬಿಡುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಒಂದು ನಿಮಿಷ ಕಣ್ಮುಚ್ಚಿ ತೆರೆದರು. ಭಕ್ತರೊಂದಿಗೆ ಮಾತುಕತೆ ಮುಂದುವರೆಯಿತು. ಅತ್ತ ವೈದ್ಯರು ತಮ್ಮ ಉಪಚಾರ ಶುರು ಮಾಡಿದರು. ರಮಣರ ಮುಖದಲ್ಲಿ ಒಂದು ಗುಲಗಂಜಿಯಷ್ಟೂ ನೋವು ಕಾಣಿಸಲಿಲ್ಲ. ಎಲ್ಲ ಮುಗಿಯಿತೆಂದು ವೈದ್ಯರು ಹೇಳಿದ ಮೇಲೆ ರಮಣರು ನಕ್ಕು ನಮಸ್ಕರಿಸಿದರು, ಅಷ್ಟೆ.

ಮೊದಲೆಲ್ಲ ಇದು ಭಕ್ತರ ಕಪೋಲಕಲ್ಪಿತ ಕತೆ ಎಂದು ನಾನು ಭಾವಿಸಿದ್ದೆ. ನನಗೆ ಗೊತ್ತು, ನಿಮ್ಮಲ್ಲನೇಕರು ಈ ಕಥೆ ಓದುತ್ತ ಮೂಗು ಮುರಿದಿರುತ್ತೀರಿ. ಆದರೆ ಹಿಮಾಲಯದ ಪರ್ವತಗಳಲ್ಲಿ ಕೊರೆವ ಚಳಿಯಲ್ಲಿ ಮಂಜಿನ ರಾಶಿಯ ನಡುವೆ ನಗುನಗುತ್ತ ಕೌಪೀನದಲ್ಲಿ ಕುಳಿತಿರುವ ಸಾಧುಗಳನ್ನು ಕಂಡ ಮೇಲೆ ಈ ಪ್ರಕ್ರಿಯೆ ಸಾಧ್ಯವೆನ್ನಿಸಿತ್ತು. ನಾನು – ನೀವು ನಂಬುವುದನ್ನು ಬಿಡಿ. ಪಶ್ಚಿಮದ ಅನೇಕ ವಿಜ್ಞಾನಿಗಳು ಇಂದು ನಂಬಲು ಶುರು ಮಾಡಿದ್ದಾರೆ. ಮೆದುಳಿನ ಅಧ್ಯಯನದ ವಿಜ್ಞಾನ ಬೆಳೆದಂತೆಲ್ಲ ಭಾರತೀಯ ಚಿಂತನೆಗಳು ಜಗತ್ತನ್ನು ಆಳಲಾರಂಬಿಸಿವೆ.
ಹಾಗೆ ನೋಡಿದರೆ ಅಮೆರಿಕಾ – ಯುರೋಪಿನ ಬುದ್ಧಿವಂತ ವರ್ಗದ ಬುಡವನ್ನು ಮೊದಲ ಬಾರಿಗೆ ತೀವ್ರವಾಗಿ ಅಲುಗಾಡಿಸಿದವರು ಸ್ವಾಮಿ ವಿವೇಕಾನಂದರೇ. ನಿಕೊಲಸ್ ಟೆಸ್ಲಾರಂತಹ ವಿಜ್ಞಾನಿಗಳ ಮೇಲೆ ಅವರ ಪ್ರಭಾವ ಹೇಳತೀರದಷ್ಟು. ಇನ್ನು, ನಮ್ಮ ಕಾಲದಲ್ಲಿ ವೈಜ್ಞಾನಿಕ ಲೋಕದ ದೃಷ್ಟಿಕೋನ…

View original post 859 more words

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s