‘ಸ್ವಪ್ನ ಸಾರಸ್ವತ’ದ ಪುಟಗಳಲ್ಲಿ..

image

“ಸ್ವಪ್ನ ಸಾರಸ್ವತ” ಒಂದು ಸುಂದರ ಸುಧೀರ್ಘ ಕಾದಂಬರಿ. ಸುಮಾರು ಐದು ತಲೆಮಾರುಗಳ ಸಾರಸ್ವತ ಕುಟುಂಬದ ಇತಿಹಾಸ ಹೇಳುವಂತ ಕಥೆ. ಇದು ಬರೀ ಆ ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಸಂಘಜೀವಿ ಮನುಷ್ಯನ ಪರಿಸರ ಪ್ರೀತಿಯನ್ನು, ಪ್ರಕೃತಿಯನ್ನು ಹಚ್ಚಿಕೊಳ್ಳುವ ರೀತಿಯನ್ನು ಬಿಂಬಿಸುತ್ತದೆ.

ಗೋವಾದಲ್ಲಿ ಪೋರ್ಚುಗೀಸರ ಆಕ್ರಮಣಕ್ಕೆ ಸಿಕ್ಕು ದಿಕ್ಕಾಪಾಲಾಗುವ ಸಾರಸ್ವತ ಬ್ರಾಹ್ಮಣರ ಕಷ್ಟ-ಕಾರ್ಪಣ್ಯದಿಂದ ಈ ಕಥೆ ಪ್ರಾರಂಭವಾಗುತ್ತದೆ. ದಾಳಿಯಿಂದಾಗುವ ದೇವಸ್ಥಾನಗಳ ಹಾನಿ, ಆಸ್ತಿ-ಪಾಸ್ತಿಗಳ ನಷ್ಟ, ಸಂಸ್ಕೃತಿಯ ಪತನ ಮುಂತಾದವುಗಳನ್ನು ಲೇಖಕರು ಯಶಸ್ವಿಯಾಗಿ,ಸೂಕ್ಷವಾಗಿ ಚಿತ್ರಿಸಿದ್ದಾರೆ. ಇನ್ನು ಧರ್ಮಹಾನಿಯ ಸಮಯದಲ್ಲಿ ಮನದಲ್ಲಿನ ತೊಳಲಾಟ, ಗೊಂದಲಗಳನ್ನು ಸಾಮಾನ್ಯ ಮನುಷ್ಯನೊಬ್ಬ ಎದುರಿಸುವ ಪರಿ ಮನ ಮುಟ್ಟುವಂತಿದೆ.

ಸ್ನೇಹದ ಹಳಿಯಲ್ಲಿ ಬದುಕಿನ ಬಂಡಿ ಸಾಗುವುದು.ದೌರ್ಬಲ್ಯದಲ್ಲೇ ಮುಂದೆ ಸಾಗಿ ಮನಸಲ್ಲೇ ಮುಚ್ಚಿಟ್ಟು ಕೊಳ್ಳುವ ಪಶ್ಚಾತ್ತಾಪ. ದ್ವೇಷದ ಚಿಕ್ಕ ಕಿಡಿಯಿಂದ ಹೊತ್ತಿ ಉರಿವ ಮನೆ, ಮನಸ್ಸು.ಅಷ್ಟೈಶ್ವರ್ಯಗಳಿದ್ದೂ ಎಲ್ಲವನ್ನು ಕಳೆದುಕೊಂಡು ವಲಸೆಬಂದು ಪರಸ್ಥಳದಲ್ಲಿ ನೆಲೆನಿಂತು ಬದುಕು ಕಟ್ಟಿಕೊಳ್ಳುವ ಜೀವನ ಪ್ರೀತಿ. ಮನುಷ್ಯನ ಮೋಹ,ಲೋಭ,ದ್ವೇಷಗಳು, ದಾರಿ ತಪ್ಪುವ ಮನಸ್ಸಿನ ಹೊಯ್ದಾಟಗಳು,ಪರಿಣಾಮಗಳು,ಜಿಜ್ಞಾಸೆಗಳು ಯಥಾವತ್ತಾಗಿ ಜೀವನವೇ ಹಾಳೆಯ ಮೇಲೆ ಮೂಡಿ ಬಂದಂತಿದೆ.

ಕಾದಂಬರಿಯ ಅಂಶಗಳನ್ನು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ.ಪ್ರತಿ ಪುಟದಲ್ಲೂ  ಪಾತ್ರಗಳನ್ನು ಹತ್ತಿರದಿಂದ ಕಂಡಾಗ ಬದುಕು ಭೀಕರ, ನಿಗೂಢ ಅನಿಸುತ್ತದೆ. ಅದೇ ಪುಸ್ತಕ ಮುಗಿದಾಗ ಇವು ಪೂರ್ಣ ಬದುಕಿನ ಹಲವು ಮುಖಗಳು ಎಂದು ಅರಿವಾಗುತ್ತದೆ. ನೋವು -ನಲಿವು, ಸುಖ-ದುಃಖ ಎಲ್ಲಾ ತಾತ್ಕಲಿಕ ಮತ್ತು ಸ್ವಾಭಾವಿಕ ಎಂಬ ನಿಲುವು ಮೂಡುತ್ತದೆ.

ಇಲ್ಲಿ ನಾಗ್ಡೂ ಬೇತಾಳನ ಪಾತ್ರವೇ ಒಂದು ಸಂದೇಶ. ಎಷ್ಟೇ ಬದಲಾವಣೆ, ಅನಿರೀಕ್ಷಿತ ತಿರುವುಗಳಿದ್ದರೂ ಬದುಕು ತನ್ನ ನಿಯಮಗಳನ್ನು ಕಾಯ್ದುಕೊಳ್ಳುತ್ತದ ಎಂಬುದಕ್ಕೆ ಒಂದು ಉದಾಹರಣೆ. ಗೊಂದಲಗಳಿಗೆ ಸಿಕ್ಕಿಕೊಂಡಾಗ ಪ್ರಶ್ನೆ ಕೇಳಿ ಅದರಲ್ಲಿಯೇ ಉತ್ತರ ಹೇಳುವ ಈ ಮಾಯಾವಿ ಗುರಿಯ ಕಡೆ ಜನರನ್ನು ನಡೆಸುವುದು ಇಲ್ಲಿನ ಸ್ವಾರಸ್ಯಗಳಲ್ಲಿ ಒಂದು.
ಕೊನೆಯಲ್ಲಿ ನಾಗ್ಡೂ ಬೇತಾಳನ ಮಾತುಗಳು ದಾರಿದೀಪದಂತೆ ಯುಗ-ಯುಗಾಂತರಕ್ಕೂ ಬೆಳಕು ಬೀರುತ್ತದೆ.

ಕಥೆಯ ಮಡಿಕೆಗಳಲ್ಲಿ ಜೀವನದ ಹಲವು ಮುಖಗಳನ್ನು ಹುದುಗಿಸಿದ,ವಿಚಾರ ಮಾಡುವಂತೆ, ಉತ್ತಮ ಸಾರಾಂಶದ ಒಳ್ಳೆಯ ಕೃತಿ. ದಿನ ನಿತ್ಯದ ಜೀವನದಲ್ಲಿ ಕಳೆದು ಹೋದಾಗ ಒಂದು ಮನೆತನದ ನಾನೂರು ವರುಷದ ಕಥೆ ಕೇಳಿದರೆ ಜೀವನದ ಒಂದು ಪೂರ್ಣ ಚಿತ್ರ ಕಂಡಂತಾಗುತ್ತದೆ. ನಾನೂರು ಪುಟಗಳ ಓದು ಆಯಾಸ ನೀಗಿಸಿ ಹೊಸ ಹುರುಪು ನೀಡುತ್ತದೆ.

Advertisements

3 thoughts on “‘ಸ್ವಪ್ನ ಸಾರಸ್ವತ’ದ ಪುಟಗಳಲ್ಲಿ..

  1. ಪುಸ್ತಕ ಪರಿಚಯದ ಚೌಕಟ್ಟಿನಲ್ಲೆ ಅದರ ಸಾರ ಸಂಗ್ರಹವನ್ನು ಹಿಡಿಯಲ್ಲಿ ಕಟ್ಟಿಕೊಟ್ಟ ರೀತಿ ಇಷ್ಟವಾಯ್ತು. ಮುಂದಿನ ಬಾರಿ ಊರಿಗೆ ಭೇಟಿಯಿತ್ತಾಗ ಪುಸ್ತಕ ಕೊಂಡು ಓದುತ್ತೇನೆ. ನಿಮ್ಮ ಈ ಕೆಳಗಿನ ಸಾಲುಗಳು ಓದುವ ಆಸಕ್ತಿಯನ್ನು ಕೆರಳಿಸಿ ಕುತೂಹಲ ಹುಟ್ಟಿಸಿವೆ 🙂

    “ಇಲ್ಲಿ ನಾಗ್ಡೂ ಬೇತಾಳನ ಪಾತ್ರವೇ ಒಂದು ಸಂದೇಶ. ಎಷ್ಟೇ ಬದಲಾವಣೆ, ಅನಿರೀಕ್ಷಿತ ತಿರುವುಗಳಿದ್ದರೂ ಬದುಕು ತನ್ನ ನಿಯಮಗಳನ್ನು ಕಾಯ್ದುಕೊಳ್ಳುತ್ತದ ಎಂಬುದಕ್ಕೆ ಒಂದು ಉದಾಹರಣೆ. ಗೊಂದಲಗಳಿಗೆ ಸಿಕ್ಕಿಕೊಂಡಾಗ ಪ್ರಶ್ನೆ ಕೇಳಿ ಅದರಲ್ಲಿಯೇ ಉತ್ತರ ಹೇಳುವ ಈ ಮಾಯಾವಿ ಗುರಿಯ ಕಡೆ ಜನರನ್ನು ನಡೆಸುವುದು ಇಲ್ಲಿನ ಸ್ವಾರಸ್ಯಗಳಲ್ಲಿ ಒಂದು. ಕೊನೆಯಲ್ಲಿ ನಾಗ್ಡೂ ಬೇತಾಳನ ಮಾತುಗಳು ದಾರಿದೀಪದಂತೆ ಯುಗ-ಯುಗಾಂತರಕ್ಕೂ ಬೆಳಕು ಬೀರುತ್ತದೆ.”

    Liked by 1 person

  2. ಓದಲು ಶುರು ಮಾಡಿ ಹಲವೇ ವಾರಗಳು ಕಳೆದಿವೆ. ಮತ್ತೆ ಶುರು ಮಾಡಬೇಕಿದೆ. ಪುಸ್ತಕದ ಗಾತ್ರ ಮಾತ್ರ ಭಯಬೀಳಿಸುತ್ತದೆ 🙂

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s