ಹೊಸ ಜನ್ಮದಂತೆ…

ಪ್ರಾಣ ದೇಹ ತೊರೆಯುವಾಗ ನವರಂಧ್ರಗಳಲ್ಲಿ ಒಂದರಿಂದ ಹೊರ ಹೋಗುತ್ತದೆ. ಹಾಗಾದರೆ ಜೀವಿಯ ಜನನ ಆಗುತ್ತಾ ಕೂಡ ಹೀಗೆ ಅನೇಕ ದ್ವಾರಗಳಿಂದ ಪ್ರಾಣ ಶಕ್ತಿ ಒಳ ಬರುವ ಸಾಧ್ಯತೆ ಇದೆಯೇ? ಇಲ್ಲಿ ಜನನ ಎಂದರೆ ತಾಯಿ ಕೊಟ್ಟ ಒಂದೇ ಜನುಮ ಎಂದಲ್ಲ.ನಮ್ಮನ್ನು ನಾವು ತಿದ್ದಿಕೊಳ್ಳುತ್ತಾ, ಕಂಡು ಕೊಳ್ಳುತ್ತಾ ಪಡೆದ ಪ್ರತಿ ತಿರುವು ಕೂಡ ಒಂದು ಜನ್ಮದಂತೆ. ಈ ಜನ್ಮ ಯಾರೊ ಕೈ ಕೊಟ್ಟ ಮೇಲೆ ಬಂದಿರಬಹುದು, ನಾವು ಎಡವಿ ಬಿದ್ದಾಗ ಅನಿಸಿರಬಹುದು,ಏಕತಾನತೆಯಿಂದ ಬೇಸರವಾಗಿ ಆದ ಬದಲಾವಣೆಯಾಗಿರಬಹುದು, ಪುಸ್ತಕದ ಹಾಳೆಯಿಂದಲೊ, ನೆಚ್ಚಿನ ಸಿನಿಮಾದಿಂದಲೊ, ಯಾರದೋ ಅನುಕರಣೆಯಿಂದಲೊ ಹೀಗೆ ಯಾವ ರೀತಿಯಿಂದಲಾದರು ನಾವು ಅನೇಕ ಬಾರಿ ನಮ್ಮನ್ನೇ ಮರು ಸೃಷ್ಟಿಸಿಕೊಂಡಿರುತ್ತೇವೆ.ಬದುಕೇ ಒಂದು ಬೆಳವಣಿಗೆ ಇಲ್ಲಿ ಪ್ರತಿ ಕ್ಷಣವೂ ಹೊಸತನವು ಅರಳುತ್ತಿರುತ್ತದೆ.ನಿನ್ನೆಗಳ ಅಡಿಪಾಯದ ಮೇಲೆ ಕಟ್ಟುವ ಸುಂದರ ಆಕೃತಿಯೇ ಬದುಕು.ಈ ಸೃಷ್ಟಿ ಸಾಗುತ್ತಿರಲಿ ಆತ್ಮ ಶುದ್ಧಿಗೊಂಡು ಮರುಜನ್ಮ ಪಡೆಯುತ್ತಿರಲಿ.

Advertisements

3 thoughts on “ಹೊಸ ಜನ್ಮದಂತೆ…

  1. ಮರುಸೃಷ್ಟಿ ಬಗ್ಗೆ ಗೊತ್ತಿಲ್ಲ. ಜ್ಞಾನೋದಯಗಳು, ಬದಲಾವಣೆಗಳು ಸಂಭವಿಸುತ್ತಲೇ ಇರುತ್ತವೆ. ಆ ಕ್ಷಣಕ್ಕೆ ಸಂಪೂರ್ಣ ಬದಲಾದೆ ಅಥವಾ ಆಲೋಚನಾ ಲಹರಿಯೇ ಬದಲಾಯಿತೆಂದೆನಿಸಿದರೂ, ಅರಿವು ನಿಧಾನವಾಗಿಯೇ ಆವರಿಸುವುದು (ಸಾಮಾನ್ಯ ಜನರ ಪಾಡಿದು). ಅಸಾಮಾನ್ಯರಿರುತ್ತಾರೆ, ಯಾವುದೂ ಅಸಾಧ್ಯವಲ್ಲ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s