ಯಾರಿಗೂ ಕಾಣದ ಪ್ರೀತಿ

image

ಒಬ್ಬನೇ ಒಬ್ಬ ಪ್ರಿಯಗೆಳೆಯ ನನಗೆ
ಸದಾ ನಗುವ ನಗಿಸುವ ನನ್ನ ಜೀವ

ಆಡುತ್ತಿದ್ದೆ, ಓದುತ್ತಿದ್ದೆ, ಸುತ್ತುತ್ತಿದ್ದೆ ಅವನೊಡನೆ
ಓರಗೆಯವರ ಚಾಡಿ ಹೋಯಿತು ಅಮ್ಮನವರೆಗೆ
ಬರೆ ಹಾಕಿದಳು, ಅವನು ಹಾಕಿದ್ದ ಬರೆ ಮನಸಿಗೆ
ಮಾಟ, ಮಂತ್ರವಂತೆ ಇರಬಹುದು ಅದು  ಮೋಡಿಯೆ

ಕೈ ಮೀರಿ ಹೋದೆನಂತೆ, ಹೋದರೆನಂತೆ
ಅನಿಸುತ್ತದೆ ಜಗತ್ತೆಲ್ಲಾ ಬರಿಯ ಮಾಯೆ
ನನಗೆ ಈಗ ಕಾಣುವುದು ಅವನೊಬ್ಬನೇ
ನೂರು ವಿಘ್ನಗಳಿದ್ದರೂ ದಾಟಿ ಸೇರುವುದು ಅವನನ್ನೇ

ಆಟ-ಪಾಠವಿಲ್ಲದೆ ಕೋಣೆಯಲ್ಲಿ ಬಂಧಿ ಹರೆಯ
ಅಲ್ಲಿಗೂ ಬರುತ್ತಾನೆ ಹುಡುಕಿಕೊಂಡು ನನ್ನ ಇನಿಯ
ಅದರೊಂದು ದಿನ ಘಟಿಸಿತು ಬದುಕಿನಲ್ಲಿ ಮಹಾ ಪ್ರಳಯ
ನಾನೊಬ್ಬಳು ಹುಚ್ಚಿಯಂತೆ ಅವನಿಗಿಟ್ಟ ಹೆಸರು ಸ್ಕಿಜೊಫ್ರೇನಿಯ

ಕಾಡಿಸಿ ಒಪ್ಪಿಸಿ ಆಗುವ ಮದುವೆಯ ಕನಸು ಕಂಡಿದ್ದೆ
ಆದರೆ ಪ್ರಿಯಕರನ ಸಾವಿಗಿಂತಲು ಹೆಚ್ಚು
ದುಃಖ ಉಂಡಿದ್ದೆ
ಮಾತ್ರೆಗಳು ಮೌನಗಳು ನನ್ನನ್ನು ಸರಿಮಾಡಿವೆಯಂತೆ ಈಗ
ಗೊತ್ತಿಲ್ಲ ಯಾರಿಗೂ ಬರುತ್ತಾನೆ ಒಬ್ಬಳೇ ಇದ್ದರೆ ಆಗಾಗ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s