ಯಾಕೆ ಹೀಗೆ

#.Life is so busy, have no time for personal life. But personal life is advising be busy here you have nothing.

#.ಪ್ರೀತಿ ಇಲ್ಲದ ಮೇಲೂ ಪ್ರೇಮಿ ಪ್ರೇಮಿಯಾಗಿಯೇ ಉಳಿಯುವುದೇಕೆ…

12 thoughts on “ಯಾಕೆ ಹೀಗೆ

 1. ಪ್ರೇಮಿ ಪ್ರೀತಿಯ ಕಳೆದುಕೊಂಡಿರಬಹುದು ಆದರೆ ಆ ಪ್ರೀತಿಯನ್ನು ತನ್ನ ಮನಸಿನ ಯಾವುದೋ ಒಂದು ಮೂಲೆಯಲ್ಲಿ ಅಡಗಿಸಿಕೊಳ್ಳುವನು. ಪ್ರೀತಿಸಿದ ಮೇಲೆ ಆ ಪ್ರೀತಿಯ ಹೇಗೆ ಕೊಲ್ಲುವನು?! ಅದಕ್ಕೆ ಪ್ರೇಮಿಯಾಗಿಯೇ ಉಳಿವನು.

  Liked by 2 people

 2. ನಾಗೇಶ ಮೈಸೂರು says:
  December 29, 2015 at 10:50 am
  ನನಗೆ ಪುಸ್ತಕವೊಂದರಲ್ಲಿ ಓದಿದ ಸಾಲು ನೆನಪಾಗುತ್ತಿದೆ – ಪ್ರೇಮಿ ಭೌತಿಕವಾಗಿ ಪ್ರೇಮಿಸುವುದಕ್ಕಿಂತ, ತಾನು ಪ್ರೇಮಿಸುತ್ತಿದ್ದೇನೆಂಬ ‘ಭಾವವನ್ನು’ ಹೆಚ್ಚು ಪ್ರೇಮಿಸುತ್ತಾನಂತೆ.. ಅದು ಹುಟ್ಟಿಸುವ ನಿರೀಕ್ಷೆ, ತರಲೆ – ತಾಪತ್ರಯ, ಸರಸ – ವಿರಸ – ಸಂತಸಗಳೆಲ್ಲದರ ಭಾವೋತ್ಕರ್ಷ ಬಗೆಬಗೆಯ ಆಶಯಗಳಾಗಿ ಹೃದಯದಲ್ಲಿ ಠೇವಣಿಯಾಗುತ್ತಲೆ ಇರುತ್ತದೆಯೇನೊ ಅನಿಸುತ್ತದೆ. ಹೀಗಾಗಿ ಭೌತಿಕ ಪ್ರೇಮ ಕಳಚಿಕೊಂಡರು ಖಾಲಿಯಾಗದೆ ಪೇರಿಸಿಕೊಂಡಿದ್ದ ‘ಭಾವ ಠೇವಣಿ’ ಆ ಮೊದಲಿನ ಕಲ್ಪನಾ ಲೋಕದ ಲಹರಿಯಿಂದ ಹೊರಬರಬಿಡದೆ ಅಲ್ಲೆ ಸುತ್ತು ಹೊಡೆಸುತ್ತಿರುತ್ತದೆ – ಪ್ರಾಯಶಃ ಅದರದೆ ಆದ ‘ರೇ’ ಪ್ರಪಂಚದಲ್ಲಿ… ಆ ಮಿಕ್ಕುಳಿದ ಭಾವ ಠೇವಣಿ ಖಾಲಿಯಾಗುವತನಕ (ಅಥವಾ ಅದನ್ನು ವ್ಯಯಿಸಲು ಸಾಧ್ಯವಾಗುವ ಮತ್ತೊಂದು ಪ್ರೇಮ ದೊರಕುವತನಕ) ಪ್ರೇಮಿಯ ‘ಪ್ರೇಮಲೋಕ’ ಅಸ್ತಿತ್ವದಲ್ಲಿದ್ದುಬಿಡುತ್ತದೆಯೆನ್ನೋಣವೆ ? ಕೆಲವರಲ್ಲಿ ಅದು ದುರಂತ ಪ್ರೇರಕವಾದರೆ ಮತ್ತಲವರಿಗೆ ಮತ್ತೇನೊ ಸಾಧನೆಯ ಏರುಮೆಟ್ಟಿಲೂ ಆಗಬಹುದು.. ಮತ್ತೆ ಕೆಲವರನ್ನು ಅತಂತ್ರವಾಗಿಸಿಬಿಡಲೂಬಹುದು.. ಹೀಗಾಗಿ ಒಂದುವೇಳೆ ಪ್ರೇಮಿತ್ವ ಉಳಿದರೂ ಅದೇ ಒರಿಜಿನಲ್ ಪ್ರೇಮಿಯ ಸತ್ವ-ತತ್ವ ಉಳಿದಿರಲಾರದು ಎನಿಸುತ್ತದೆ.. ಕಾಲಾನುಕ್ರಮೇಣ ಅದು ತಾಳುವ ರೂಪವೆ ಬದಲಾದರೂ ಅಚ್ಚರಿಯಿಲ್ಲ. ಅದೇನೆ ಆದರೂ ಪ್ರೇಮವೆನ್ನುವ ವಸ್ತು ಸದಾ ನಿರಂತರ ಚರ್ಚೆಯ ವಸ್ತುವಾಗಿ ಕಾಡುವುದರಲ್ಲಿ ಅನುಮಾನವಿಲ್ಲ – ಪರ ವಿರೋಧಗಳ ಹುಟ್ಟು ಹಾಯಿಸುತ್ತ…

  ಇದೇ ಬ್ಲಾಗಿನಲ್ಲಿ ಓದಿದ ‘ಕೊನೆಯನೆಂದು ಮುಟ್ಟದಿರು ‘ ಕವನದ ಈ ಸಾಲುಗಳು ಪ್ರೇಮಕ್ಕೂ ಕೂಡ ಅನ್ವಯಿಸುವ ವ್ಯಾಖ್ಯಾನವಾಗಬಹುದೆನಿಸುತ್ತದೆ (ಪ್ರೇಮವೆನ್ನುವ ರಾಮಾಯಣವೂ ಒಂದು ತರಹ ನಿರಂತರ ಭಾರತದಂತೆಯೆ ತಾನೆ !?)

  ಇಲ್ಲಿ ಸೊತವರೆಲ್ಲಾ ಸತ್ತರು, ಗೆದ್ದವರೆಲ್ಲಾ ಸೋತರು
  ಯುದ್ಧ ಮಾಡುವಾಗ ಇದ್ದದ್ದು ಭಾರಿ
  ಹುಮ್ಮಸ್ಸು
  ಗುರಿ ಮುಟ್ಟಿದಾಗ ನಕ್ಕಿದ್ದು ಬರೀ
  ಶೂನ್ಯಭಾವ
  ಕತ್ತಲು-ಬೆಳಕಿನ ಆಟದಲ್ಲಿ ಜಯ ಅಪಜಯಕ್ಕೆ
  ಅರ್ಥವೇನು
  ಮನದ ಸೂರ್ಯ ಮುಳುಗದಂತೆ ಸಾಗುತಿರಲಿ ಭಾರತ ನಿರಂತರ
  ( this comment got wrongly posted under koneyaneMdu muTTadiru, hence reposted here)

  Liked by 1 person

 3. #.Life is so busy, have no time for personal life. But personal life is advising be busy here you have nothing.
  ಈ ಮಾತು ಬಹುಪಾಲು ನಿಜ – ಕೆಲಸಕ್ಕೆ ಹೋಗಿ ಅಭ್ಯಾಸವಾದ ಮೇಲೆ ಸುಮ್ಮನೆ ಕೆಲವು ದಿನ ರಜೆ ಹಾಕಿದರೂ ಏನು ಮಾಡಲೂ ತೋಚದೆ ಮತ್ತೆ ಕೆಲಸಕ್ಕೆ ಹೋಗಬೇಕೆನಿಸುತ್ತದೆ ಕೆಲವರಿಗೆ. ಮತ್ತೆ ಕೆಲವರು ಅದನ್ನು ಸದ್ವಿನಿಯೋಗಿಸಿಕೊಳ್ಳುವ ಏನಾದರು ಯೋಜನೆ ಹಾಕಿರುತ್ತಾರಾದರು ಅದು ಎಲ್ಲ ಕಾಲಕ್ಕು , ಎಲ್ಲರಿಗು ಅನ್ವಯವಾಗುವ ಗುಣ ಲಕ್ಷಣವಿದ್ದಂತೆ ಕಾಣುವುದಿಲ್ಲ – ಅದರಲ್ಲು ಈ ಬಿಜಿ ಪ್ರೊಫೆಶನಲ್ ಜೀವನದಲ್ಲಿ..

  Liked by 1 person

 4. ಪ್ರೀತಿಗೆ ಕೊನೆಯಿಲ್ಲ. ಅದರದೆ ಆದರದೇ ಅಸ್ತಿತ್ವ ಇದೆ. ಅದನ್ನು ಯಾರಿಂದಲೂ ಪೂತಿ೯ ವಣಿ೯ಸಲು ಸಾಧ್ಯವೇ ಇಲ್ಲ. ನಾನಂತೂ ಮುದುಕಿಯಾದರು ಪ್ರೀತಿಯಿಂದ ಹೊರ ಬರಲು ಸಾಧ್ಯ ಇಲ್ಲ ಮನು. ಯಾಕೆ ಗೊತ್ತಾ ನಾನಷ್ಟು ಭಾವುಕ ವ್ಯಕ್ತಿ.. ಪ್ರೀತಿಯನ್ನೇ ಪ್ರೀತಿಸು. ಎಷ್ಟು ನೆಮ್ಮದಿ ಸಿಗುತ್ತೆ ನೋಡಿ. ನೂರೆಂಟು ಬರಹಗಳು ಹುಟ್ಟುವುದು ಈ ಪ್ರೀತಿಯಿಂದ. ಸಕಲ ಜೀವ ಚರಾಚರ ವಸ್ತುಗಳನ್ನೂ ಪ್ರೀತಿಸುವ ಮನಸ್ಸು ಮಾನವ ಮೊದಲು ಹೊಂದಬೇಕು. ಅಲ್ಲಿಯೆ ಇದೆ ಈ ಬರಹದ ಗುಟ್ಟು, ನೆಮ್ಮದಿ.

  Liked by 1 person

 5. @ಸಂಗೀತಾ: ಇರಬಹುದು ಆದರೆ ನಂಗಿನ್ನೂ ಅರ್ಥ ಆಗಿಲ್ಲ…
  @ನಾಗೇಶ : ಕೊನೆಯನೆಂದು ಮುಟ್ಟದಿರು ನಾನು ಪ್ರೀತಿ ಭಾವ ಇಟ್ಟು ಬರೆಯಲಿಲ್ಲ, ಆದರೆ ಅದು ಆ ಭಾವ ಸ್ಪುರಿಸಿದರೆ ಆಕಸ್ಮಿಕ ಅಷ್ಟೆ. ನಿಮ್ಮ analysis ಗೆ ಧನ್ಯವಾದಗಳು

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s