‘ಕರ್ವಾಲೊ’ ದಾರಿಯಲ್ಲಿ ನಿಗೂಢತೆಯೆಡೆಗೆ

ಸೃಷ್ಟಿ ಯು ಒಂದು ಅದ್ಭುತ. ಈ ಪ್ರಕೃತಿ ಅದರಲ್ಲಿನ ಅಗಾಧ ಜೀವರಾಶಿಗಳು ಇವೆಲ್ಲಾ ಉತ್ತರವಿಲ್ಲದ ಕೌತುಕಗಳು. ಇದಕ್ಕೆ ಹೋಲಿಸಿದರೆ ಮಾನವ ಸಮಾಜ,  ಅದರಲ್ಲಿಯ ವ್ಯಾಪಾರಗಳೆಲ್ಲಾ ಗೌಣವೆನಿಸಿಬಿಡುತ್ತದೆ.
ಎಂತಹ ಸಾಮಾನ್ಯ ಮನುಷ್ಯನನ್ನು ಕೂಡ ಕಾಡುವಂತ ಪ್ರಶ್ನೆಗಳು ಈ ಸೃಷ್ಟಿ ರಹಸ್ಯದಲ್ಲಿ ಅಡಗಿದೆ.ಆದರೂ ಕಂಡು ಕಾಣದಂತೆ ನಾವು ಇದನ್ನೆಲ್ಲಾ ಕಡೆಗಣಿಸಿ ನಮ್ಮದೇ ಊಹಾಪ್ರಪಂಚದಲ್ಲಿ ಬಂಧಿಯಾಗಿರುತ್ತೇವೆ.

image

ಇಂಥ ಬಾಹ್ಯಪ್ರಪಂಚದ ಬಲೆಯನ್ನು ಕಣ್ಣಿಂದ ಬಿಡಿಸುವಂತ ಪುಸ್ತಕ ಕರ್ವಾಲೊ. ಸೃಷ್ಟಿಯ ಅದ್ಭುತಗಳನ್ನು ಹಿಂದೆ ಹೊರಟು ಪ್ರಶ್ನೆಗಳಿಗೆ ಉತ್ತರವಾಗಿ ಯೋಚನೆ ಮಾಡುವ ದಿಕ್ಕನ್ನೇ ಬದಲಿಸುತ್ತದೆ ಈ ಕಥೆ. ಕಣ್ಣು ಬಿಟ್ಟು  ನೋಡಿದರೆ ಮತ್ತಷ್ಟು ಮಗದಷ್ಟು ಕುತೂಹಲ ಕೆರಳಿಸುವ ಪರಿಸರ ಬದುಕಿನ ಏಕತಾನತೆಯಿಂದ,  ಮೌಢ್ಯತೆಯಿಂದ ಹೊರಗೆಳೆದು ಒಂದು ಯೋಚನಾ ರಂಗದಲ್ಲಿ ನಿಲ್ಲಿಸುತ್ತದೆ ಅನಿಸುತ್ತದೆ.
ಓದಿದಷ್ಟು ವಿಭಿನ್ನ ಎನಿಸುವ ಹೊಚ್ಚ ಹೊಸ ದೃಷ್ಟಿಕೋನದ ಹಳೆಯ ಪುಸ್ತಕ.

Advertisements

15 thoughts on “‘ಕರ್ವಾಲೊ’ ದಾರಿಯಲ್ಲಿ ನಿಗೂಢತೆಯೆಡೆಗೆ

 1. ಮನು sigh! for your thoughts…. ತಿಳಿಯ ಹೋದಂತೆಲ್ಲ ಪ್ರಕೃತಿ ತನ್ನ ರಹಸ್ಯವನ್ನ ಬಿಚ್ಚಿಡ್ತಾ ಹೋಗ್ತಾಳೆ.. ನಾವೆಷ್ಟು ಸಣ್ಣವರು ಆಗಿ ಹೋಗ್ತಿವಲ್ವ ಅದರಲ್ಲಿ? ….. “ಜೀವ ವಿಕಾಸಕ್ಕೆ ಕೊನೆಯಲ್ಲಿ…..” ಎಷ್ಟು ಚೆನ್ನಾಗಿ ಶುಭಂ ಹೇಳಿ ನಮ್ಮ ಕೌತುಕಕ್ಕೆ ನಾಂದಿ ಹಾಡಿದ್ದಾರೆ.. ತೇಜಸ್ವಿ ಅವರಿಗೆ ಒಂದು ದೊಡ್ಡ ನಮಸ್ಕಾರ! for the wonderful book..

  ಡಿವಿಜಿಯವರ ಕಗ್ಗ ನೆನಪಾಯ್ತು :

  ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ |
  ಕಡಲೊಳೆತ್ತಲೊ ಹೊಸ ದ್ವೀಪವೇಳುವುದು ||
  ಕಳೆಯುತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊ |
  ಅಳಿವಿಲ್ಲ ವಿಶ್ವಕ್ಕೆ – ಮಂಕುತಿಮ್ಮ ||

  Liked by 4 people

 2. ನಾ ಇದುವರೆಗೂ ಪೂ.ಚಂ.ತೇ ಅವರ ಚಿದಂಬರ ರಹಸ್ಯ ಬಿಟ್ಟು ಬೇರೆ ಯಾವ್ದು ಓದಿಲ್ಲ. I think I should pick this book 🙂 ಚಿದಂಬರ ರಹಸ್ಯ ಓದಿ ನಾ ಅವ್ರ fan ಆದೆ. ಎಷ್ಟು ಅದ್ಭುತವಾಗಿ ಬರೀತಿದ್ರು. ಅವರ ಹಾಸ್ಯಪ್ರಜ್ಞೆ, ತಾತ್ವಿಕ ಆಲೋಚನೆಗಳು, ಪ್ರಕೃತಿ ಬಗೆಗಿನ ವಿಶೇಷ ಪ್ರೀತಿ, ಇವೆಲ್ಲವನ್ನೂ ಬರವಣಿಗೆಯಲ್ಲಿ ವ್ಯಕ್ತಪಡಿಸುವ ಪರಿಗೆ ನಾ ನಿಜಕ್ಕೂ ಬೆರಗಾದೆ.

  Liked by 3 people

   1. ಖಂಡಿತಾ ಓದ್ತೀನಿ ಸುಪರ್ಣ. ನೀನು ಮತ್ತೆ ಮನು ಎಷ್ಟೋಂದ್ books ಓದಿದ್ದೀರ ಅಲ್ವ! ನಾನೂ ಓದ್ತೀನಿ ಇನ್ಮೇಲೆ 🙂
    ನಿಜಾ ಖುಷಿಯಾಗತ್ತೆ ನೀನು ಆಗಾಗ ಸಂದರ್ಭಕ್ಕೆ ತಕ್ಕ ಸಾಲುಗಳನ್ನ quote ಮಾಡ್ದಾಗ. ನಾನ್ ಕೂಡ ನಿಮ್ಮಿಬ್ರು ತರ ಹೆಚ್ಚೆಚ್ಚು ಓದ್ಬೇಕು ಅಂತ ಉತ್ಸಾಹ ಬರುತ್ತೆ 🙂

    Liked by 2 people

   2. ನೀನು ಮನು ಯೋಚಿಸುವ ರೀತಿ ನನಿಗೆ ತುಂಬಾ ಇಷ್ಟಾ ಆಗತ್ತೆ…….excitement ಇರತ್ತೆ ನೀವಿಬ್ರು ಬರೆದಿದ್ದನ್ನ ಓದೋದ್ರಲ್ಲಿ…

    Like

   3. ಏನಿಲ್ಲ ಸುಮ್ನಿರು. ನಿಮ್ ಕವಿತೆಗಳನ್ನ ಓದುವಾಗ ನನ್ಗೆ ನನ್ ಆಲೋಚನೆಗಳು ತೀರಾ ಸರಳ ಮತ್ತೆ ನನ್ ಬರವಣಿಗೆ ಸಾಧಾರಣ ಅನ್ಸತ್ತೆ.

    Liked by 1 person

 3. Lekhaka bere oduga bere ansatte… Tumba odi odi nange ondond sala sruja sheelate kaldu hogatte ansatte..
  Adre ondond sala ella nam anubhavakke baralla.. Ododrinda sariyad darili nirbhiti inda nadi bahudu ansatte…
  Nan prakara prati pustakanu putta pranati

  Liked by 2 people

  1. ಒಳ್ಳೆ point ಹೇಳ್ದೆ ಮನು. ನನ್ಗಿರೊ ಭಯ ಅದೇ. ಆ ಕಾರಣಕ್ಕೆ ಕೆಲವೊಮ್ಮೆ ಹೆಚ್ಚಾಗಿ ಓದೋದಕ್ಕೆ ಹಿಂದೇಟು ಹಾಕತ್ತೆ ಮನಸು. ಎಲ್ಲಿ influence ಆಗಿ, ನನ್ ಬರವಣಿಗೆಯಲ್ಲಿ ನನ್ಗೆ ಅರಿವಿಲ್ಲದಂತೆ ಇತರರ ಬರವಣಿಗೆಯ ಛಾಯೆ ಎದ್ದು ಕಾಣೋ ಹಾಗಾಗಿ ನನ್ನತನ ಮಾಯ ಆಗತ್ತೆ ಅಂತ!
   ಆದ್ರೂ ಉತ್ತಮ ಲೇಖಕರೆಲ್ಲಾ ಉತ್ತಮ ಓದುಗರೇ ಅನ್ನೋದೊಂದು ಸಮಾಧಾನ.

   Liked by 4 people

 4. ನಿಮ್ಮ ತೇಜಸ್ವಿ ಸಂವಾದ ನೋಡಿ, ತೇಜಸ್ವಿಯವರ ಹುಟ್ಟುಹಬ್ಬಕ್ಕೆಂದು ನಾ ಬರೆದಿದ್ದ ಎರಡು ಕವನಗಳ ನೆನಪಾಯ್ತು – ಪುಸ್ತಕದ ಹೆಸರು, ಪಾತ್ರಗಳನ್ನು ಬಳಸಿ.. ಉದ್ದದ ಕವನ ಕಾಮೇಂಟಿಗೆ ಕ್ಷಮೆ ಇರಲಿ 🙂

  ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ)

  ___________________________________

  ಪೂಚಂತೆ ಯಾರಂತೆ? ನಿಮಗೇನಾದರು ಗೊತ್ತೆ?
  ಲಿಂಗ ಬಂದಾ ನೋಡಿ, ಅವನಿಗೆ ಗೊತ್ತಿರುವ ಕಥೆ..

  ಅಬಚೂರಿನ ಪೋಸ್ಟಾಫೀಸಿಗೆ ಹಾಕಿದ್ದೆಷ್ಟು ಪತ್ರ
  ಹೊಡೆದ ಹಂದಿ ಹೊತ್ತೊಡಿದ್ದು ನೆನಪಲಿನ್ನು ಮಿತ್ರ!

  ಯಾರಪ್ಪಾ ಈ ಕರ್ವಾಲೊ – ಮೂಡಿಗೆರೆನೊ, ನೈನಿತಾಲೊ ?
  ಹಾರುವ ಅಳಿಲೆ ಬಂತಲ್ಲೊ, ಮನಗಳಲೆ ವಿಜ್ಞಾನದ ಗುಲ್ಲೊ..

  ಶಿಕಾರಿ ಬೇಟೆ ಆಡಿದ ಕಾಡು, ಜಿಗುಟು ಲಂಟಾನದ ಮೇಡು
  ಸುತ್ತಿ ಸುಳಿದೆಲ್ಲ ಕಿವಿಯೊಡಗೂಡಿ, ಈಗೆಲ್ಲ ಖಾಲಿ ಜಾಡು..

  ಚಿದಂಬರ ರಹಸ್ಯದ ಸ್ವರೂಪ, ಒಗಟು ಜುಗಾರಿಕ್ರಾಸು
  ಎಣ್ಣೆಹೊಳೆಯಲೆ ತೇಲಿಸಿದರೂ, ನಪಾಸಿಗರು ಟೈಮ್ಪಾಸು!

  ಅಜ್ಞಾನಿಗಳಿಗೆ ವಿಜ್ಞಾನ ಕನ್ನಡ ಪುಸ್ತಕದಲೆ ಪರಿಸರ
  ಪುಸ್ತಕ ಪ್ರಕಾಶನದಿಂದಾಗ ಬಂತೆಷ್ಟೊಂದು ಸರಸರ..

  ಅಲೆಮಾರಿಯಾಗಿ ಅಂಡಮಾನಿನಲಿ, ಸೋಮಾರಿಯ ಗಾಳ
  ಹಿಡಿದಿದ್ದೆಷ್ಟೊ ಮೀನು, ಒಂದೊಂದು ಸಾಹಿತ್ಯದ ಹವಳ..

  ಪರಲೋಕದವರು ಬಿಡಲಿಲ್ಲ, ಹಾರುವ ತಟ್ಟೆಯನಟ್ಟಿ
  ಹಕ್ಕಿಗಳ ಹಿಡಿದಂತೆ ಚಿತ್ರದೆ, ಚಿತ್ರಪಟವಾಗಿಸಿ ಗಟ್ಟಿ..

  ಯಾರೀ ನಿಗೂಢ ಮನುಷ್ಯ, ಕನ್ನಡದಾ ತಬರ
  ತಬ್ಬಲಿ ತಾ ಬಲಿಯಾಗ್ಹೋಯ್ತೆ ಸಾಹಿತ್ಯದ ಸಾಗರ..

  ಪೂಚಂತೆ ಯಾರಂತೆ? ಹುಟ್ಟು ಹಬ್ಬದ ನಮಸ್ತೆ…
  ಗೊತ್ತಾಗಬೇಕೇಕಂತೆ, ಅವರ ಕಥೆಗಳೆ ಕಥೆ ಬರೆಯುತ್ತೆ..

  ಯಾಕೆ ಬರೆಯುವುದಿಲ್ಲ, ತೇಜಸ್ವಿ ?
  ____________________________

  ಮೂಡಿಗೆರೆಯ, ಕಾಡುಗಳಲಿ
  ನಡು ಮಧ್ಯಾಹ್ನದ, ಬಿರು ಬಿಸಿಲಲಿ
  ಕಿವಿಯ ಕಿವಿಯ, ಬೆನ್ಹಿಡಿದು
  ಶಿಕಾರಿಗ್ಹೊರಟ, ಮಾಂತ್ರಿಕನ ಜಾದು ||

  ಕಂಡನೆಲ್ಲೊ ಹಕ್ಕಿ, ಕೋಳಿ ಪುಕ್ಕ
  ಯಾವುದೊ ಹೊಲದ, ಹಂದಿಯು ಸಖ
  ಹೊತ್ತೊಡುವ ಪರಿ, ಬೆನ್ನಲಿ ಭಾರ
  ದಢೂತಿಯನ್ಹೊತ್ತ, ದಢೂತಿಯ ಪ್ರವರ ||

  ಯಾರದೊ ಸ್ವರೂಪ, ಬಿಚ್ಚಿಟ್ಟಂತೆ
  ಕಥೆ ಬಿಚ್ಚಿ ಬೇಟೆ, ಅಂತರಾಳದ ಕಂತೆ
  ಬೇಟೆಯೇನೊ, ಹುಲಿಗೆ-ಮೊಲಕೆ
  ಬೇಟೆಯಾದವರ ಪಾಡು, ಓದಿದ ಜನಕೆ ||

  ಬರೆವನೇನು ಬದುಕ, ತಾನೆ ಅಜ್ಞಾನಿ
  ಬದುಕನೆ ಮಗುವಾಗಿಸಿಬಿಟ್ಟನಲ್ಲಾ, ವಿಜ್ಞಾನಿ
  ಸ್ಕೂಟರ ಬಾಣಲಿಗೆ, ಬಿಚ್ಚಿಟ್ಟನೆ ಭೂಪ
  ಇಲ್ಲವತರಿಸಿದದ್ಯಾವ, ದೇವತೆಯ ಅಭಿಶಾಪ ||

  ಶಾಪವೊ ವರವೊ, ನೀನ್ಹೊರಟೆ
  ಹುಡುಕಲಿತ್ತೇನು ಅಲ್ಲಿ, ಹಾರಾಡುವ ತಟ್ಟೆ?
  ಈಗರಿವಾಗಿರಬೇಕಲ್ಲಾ, ಸತ್ಯವೆಲ್ಲ –
  ಅಲ್ಲಿಂದಲೆ ಯಾಕೆ, ನೀ ಬರೆಯುವುದೆ ಇಲ್ಲಾ? ||

  ————————————————————————————
  ನಾಗೇಶ ಮೈಸೂರು,

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s