.

image

ಕವಿತೆಯಲ್ಲವಿದು ಗೆಳತಿ ಪ್ರೀತಿಯನ್ನು ನಿನಗಾಗಿ ಭಾಷಾಂತರಿಸುತ್ತಿರುವೆ

ಕೇಳುತ್ತಿದೆಯೇ ಎದೆ ಬಡಿತದ ಸದ್ದು
ಪ್ರತಿ ಪದಗಳಲ್ಲಿ

ಪ್ರಾಸವಿಲ್ಲ ಇಲ್ಲಿ ಪ್ರಾಣವೇ ಇಟ್ಟಿರುವೆ ಜೋಪಾನವಾಗಿಡು

ನಿನ್ನ ಪ್ರೇಮ ಎಲ್ಲ ನಿಯಮ ಮೀರಿರಲು
ಇನ್ನೇತಕೆ ವ್ಯಾಕರಣ

ನಾನು ಒಲವಿನ ನಶೆಯಲ್ಲಿರಲು ಹೇಗೆ
ಕಾಯಲಿ ಛಂದಸ್ಸನ್ನಿಲ್ಲಿ

ಕ್ಲಿಷ್ಟ ಶಬ್ದಗಳ ಮೇಳವೇಕೆ ಸರಳ
ಅನುರಾಗದ ನಿವೇದನೆಯಿದು

ಅದ್ಭುತ ಕಲ್ಪನೆಯಿಲ್ಲ ಇರುವುದೆಲ್ಲಾ
ಗುಟ್ಟಾಗಿ ಬಿಚ್ಚಿಟ್ಟ ಕನಸುಗಳು

ನಿನ್ನ ಹೆಸರೊಂದೆ ಮನ ತುಂಬಿರಲು
ಶೀರ್ಷಿಕೆ ಏನೆಂದು ಇಡಲಿ

ಇದು ಕವನ ಹೇಗಾದೀತು ನಾನು
ಕವಿಯೇ ಅಲ್ಲದಿರುವಾಗ

ನಿನ್ನ ನೋಡಿ ಎಲ್ಲ ಮರೆತು ಹೋದ
ಅನಕ್ಷರಸ್ಥ ನಾನೀಗ

Advertisements

10 thoughts on “.

  1. ಪ್ರೀತಿಗೆ ಭಾಷೆ ಇಲ್ಲ ಎ೦ದು ಕೇಳಿದ್ದೆ… ಆದರೆ ನಿಮ್ಮ ಪ್ರೀತಿಯ ಭಾಷೆ, ಭಾಷಾ೦ತರ, ಅದರಲ್ಲಿನ ಭಾವ ಎಲ್ಲವೂ ಸು೦ದರ…..

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s