ತಪ್ಪು ದಾರಿಯಲಿ ಓಡೋದು ಎಲ್ಲಿಗೆ????

ಹೆಜ್ಜೆಯ ಮೇಲೊಂದು ಹೆಜ್ಜೆ ಹಾಕಿ ಶುರು ಮಾಡಿದ್ದು ಈ ಬದುಕು. ಇಲ್ಲಿನ ಸುಂದರ ಓಡಾಟವೆಂದುಕೊಂಡಿದ್ದು ಬರೀ ಓಟವಾಗಿದ್ದಾದರೂ ಯಾವಾಗ? ಮಾರ್ಕ್ಸ ಹಿಂದೆ, ಕಾಲೇಜು ಹಿಂದೆ,  ಕೆಲಸದ ಹಿಂದೆ, ಬಡ್ತಿಯ ಹಿಂದೆ, ಹಣದ ಹಿಂದೆ, ಹೆಸರಿನ ಹಿಂದೆ ಓಡುತ್ತಲೇ ಇದ್ದರೆ ಓಡುವ ದಾರಿಯ ಸವಿ ಸವಿಯುವುದು ಹೇಗೆ?

image

ಇನ್ನು ಇದರಲ್ಲಿಯೂ ಜೊತೆಗೆ ಓಡುವ, ಹಿಂದೆ ಬಿದ್ದಿರುವ, ಮುಂದೆ ಎಗರಿರುವ, ಹಾರುತ್ತಿರುವ,ಬೀಳುತ್ತಿರುವ,ಏರುತ್ತಿರುವ,ದಾರಿ ತಪ್ಪುತ್ತಿರುವ, ಓಡಲೇ ಮರೆತಿರುವ, ನಿಲ್ಲದೆ ಓಡುತ್ತಿರುವ ಕೋಟ್ಯಾಂತರ ಜನರನ್ನು ನೋಡುತ್ತಾ ಹಿಂಬಾಲಿಸಿದರೆ ಮುಗ್ಗರಿಸದೆ ಇರುತ್ತೇವೆಯೇ? ಇಷ್ಟಲ್ಲದೆ ಕೈ ಹಿಡಿದ,  ಕೈ ಕೊಟ್ಟ, ಎಂದೋ ಮರೆತ, ದೂರದಲ್ಲಿ ಕಣ್ಮರೆಯಾದ, ದಾರಿಯೇ ಬೇರೆಯಾದವರನ್ನು ನೆನಸಿಕೊಂಡು ಅಲೆಯುತ್ತಿರುವುದು. ಇದೆಲ್ಲಾ ಸೇರಿ ದಿಕ್ಕು ದೆಸೆಯಿಲ್ಲದ ಹುಚ್ಚರ ಓಟದಂತೆ ಆಗುತ್ತದೆ.

ಆದರೂ ಹೀಗೆ ಗುರಿಯೊಂದರ ಕಡೆ ಚಲಿಸದಿದ್ದರೆ ಜೀವನ ನಿಂತ ನೀರಾಗಿ ಕೊಳೆಯುತ್ತದೆ. ಅದಕ್ಕೆಂದೇ ರಭಸದ ಓಟದಲ್ಲಿ ಒಂದಾದ ನಂತರ ಇನ್ನೊಂದಕ್ಕೆ.ನೆಗೆಯುತ ಒಂದು ಕಡಲೆ ಕಾಯಿಗೆ ಕೈಯಲ್ಲಿದ್ದ ಅಷ್ಟೂ ಕಡಲೆ ಚೆಲ್ಲಿದ ಮಂಗನಂತೆ ಬದುಕುತ್ತೇವೆ. 

ಈ ಎಲ್ಲಾ ಗೊಂದಲಗಳಿಗೂ ಪರಿಹಾರ ಏನು ಎಂದು ಯೋಚಿಸಿದರೆ ಒಂದು ಸೂತ್ರ ಕಾಣಿಸುತ್ತದೆ. ಅದೇ ಗುರಿಯು ಸ್ಪಷ್ಟವಾದರೆ ದಿಕ್ಕು ಸ್ಪಷ್ಟವಾದಂತೆ ಆ ದಿಕ್ಕಿನಲ್ಲಿ ಓಡಿಯೋ, ನಡೆದೋ ಸರಿಯಾದ ಗಮ್ಯವನ್ನು ತಲುಪಬಹುದು. ಅಲ್ಲಿಗೆ ತನ್ನತನವನ್ನು ಉಳಿಸಿಕೊಂಡು ತನ್ನದಲ್ಲದಕ್ಕೆ ತಲೆ ಕೆಡಿಸಿಕೊಳ್ಳದೆ ಗುರಿಯನ್ನು ಗುರುತಿಟ್ಟ ಕಡೆ ಜೀವನವನ್ನು ತಿರುಗಿಸ ಬಹುದು. ಸ್ವಲ್ಪ ಯೋಚಿಸಿ, ವಿಶ್ಲೇಷಿಸಿ ಬದುಕಿದರೆ ಈ ಜೀವನ ಪಯಣವನ್ನು ಅದರ ಹೂರಣವನ್ನೂ ಅನುಭವಿಸ ಬಹುದು.

One thought on “ತಪ್ಪು ದಾರಿಯಲಿ ಓಡೋದು ಎಲ್ಲಿಗೆ????

  1. ಜೀವಗತಿಗೊಂದು ರೇಖಾಲೇಖವಿರಬೇಕು ।
    ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ॥
    ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? ।
    ಆವುದೀ ಜಗಕಾದಿ? – ಮಂಕುತಿಮ್ಮ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s