ಏಕ್ ಥಾ ಟೈಗರ್!

ಇದು ಒಂದು ಕಥೆಯಾಗಿದ್ದರೆ ನೆಮ್ಮದಿಯೆನಿಸುತ್ತಿತ್ತು. ಆದರೆ ಇಂಥ ವಾಸ್ತವವಾಗಿ ದೇಶಕ್ಕಾಗಿಯೇ ಜೀವಿಸಿದಂಥ ಘಟನೆ ಕೇಳಿದರೆ ನಮ್ಮ ಸಣ್ಣತನದ ಅರಿವಾಗುತ್ತದೆ.
ಎಲ್ಲರಿಗೂ ಸೈನ್ಯಕ್ಕೆ ಸೇರಲು ಆಗದೆ ಇರಬಹುದು. ಆದರೆ ಪ್ರತಿಯೊಬ್ಬ ಭಾರತೀಯನು ಸೈನಿಕನೊಬ್ಬನನ್ನು ತನ್ನೊಳಗೆ ಪ್ರತಿಷ್ಠಾಪಿಸಿಕೊಳ್ಳಬೇಕು ಅನಿಸುತ್ತದೆ.

ನಿಲುಮೆ

– ರೋಹಿತ್ ಚಕ್ರತೀರ್ಥ

ರವೀಂದ್ರ ಕೌಶಿಕ್ - ಬ್ಲ್ಯಾಕ್ ಟೈಗರ್“ಹ್ಞೂ ಅಂತಿಯೋ ಊಹ್ಞೂ ಅಂತಿಯೋ?”
“ಏನೇ ಹೇಳುವ ಮೊದಲು ನನಗೆ ಸ್ವಲ್ಪ ಮಾಹಿತಿಯಾದರೂ ಇರಬೇಕು ತಾನೆ? ನನ್ನ ಕೆಲಸ ಏನು ಅಂತಾದ್ರೂ ಹೇಳಿ!”
“ನೀನು ಮೊನ್ನೆ ಕಾಲೇಜಲ್ಲಿ ಸ್ಟೇಜ್ ಮೇಲೆ ಏನು ಮಾಡಿದಿಯೋ ಅದೇ.”
“ಅಂದ್ರೆ??”
“ನಾಟಕ ಆಡೋದು”
“ನೀವೇನು ನಾಟಕ ಕಂಪೆನಿಯವರಾ? ನಾನಿಲ್ಲಿ ಬಿಕಾಂ ಮಾಡ್ತಿದೇನೆ. ಡಿಗ್ರಿ ಮುಗಿಸಿ ನಾಟಕ ಮಂಡಳಿ ಸೇರಿದೆ ಅಂತ ಹೇಳಿದರೆ ನನ್ನಪ್ಪ ಸಿಗಿದು ತೋರಣ ಕಟ್ತಾರೆ ಅಷ್ಟೆ.ಅಲ್ಲದೆ, ನಟನಾಗಿ ಹೆಸರು ಮಾಡೋ ಆಸೆ ಅಷ್ಟೇನೂ ಇಲ್ಲ ನನಗೆ”
“ನಮ್ಮಲ್ಲಿ ನಾಟಕಕ್ಕೆ ಸೇರಿದರೆ ನಿನ್ನ ಕಟೌಟನ್ನು ಎಲ್ಲೂ ನಿಲ್ಲಿಸೋಲ್ಲ. ಇನ್ನು ನಿನ್ನ ಕೆಲಸದ ಬಗ್ಗೆ ಹೊರಗೆಲ್ಲೂ ಹೇಳುವ ಹಾಗೂ ಇಲ್ಲ. ನಿನ್ನ ಜೀವನಪೂರ್ತಿ ಅದೊಂದು ರಹಸ್ಯವಾಗಿರುತ್ತೆ. ಆದರೆ ನೀನು ಆ ಉದ್ಯೋಗ ಮಾಡೋದು ನಿನಗಾಗಿ ಅಥವಾ ಕುಟುಂಬಕ್ಕಾಗಿ ಅಲ್ಲ; ಬದಲು ದೇಶಕ್ಕಾಗಿ. ಅದೊಂದು ಮಹೋನ್ನತ ಉದ್ಯೋಗ.”
“ಯಾ..ಯಾರು ನೀವು?”
“ರಾ ಅಧಿಕಾರಿಗಳು. ದೇಶದ ಹಿತ ಕಾಯುವ ಬೇಹುಗಾರರು.”

ರವೀಂದ್ರ ಕೌಶಿಕ್ ಬೆಚ್ಚಿಬಿದ್ದ. ಹಣೆಯ ನೆರಿಗೆಯ ಮೇಲೆ ಬೆವರಿನ ತೋರಣ ಕಟ್ಟಿತು. ಇವರು ನನ್ನನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ? ಎರಡು-ಮೂರು ಸಾವಿರ ವಿದ್ಯಾರ್ಥಿಗಳಿರುವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಾನೊಬ್ಬ ಗುಂಪಿನಲ್ಲಿ ಗೋವಿಂದನಾಗಿರುವ ಸಾಮಾನ್ಯ ಯುವಕ. ಕಾಮರ್ಸ್ ಪದವಿ ಮಾಡುತ್ತಿದ್ದೇನೆ. ಆಗೀಗ ಕಾಲೇಜಿನ ಟ್ಯಾಲೆಂಟ್ ಶೋಗಳಲ್ಲಿ ಸಣ್ಣಪುಟ್ಟ ಪ್ರಹಸನ ಮಾಡಿದ್ದುಂಟು. ಮೂರುದಿನದ ಹಿಂದೆ ಒಂದು ಕಾರ್ಯಕ್ರಮದಲ್ಲಿ, ಚೀನಾದ ಸೈನಿಕರಿಗೆ ಸಿಕ್ಕಿಯೂ ರಹಸ್ಯಗಳನ್ನು ಬಿಟ್ಟುಕೊಡದ ಭಾರತೀಯ ಸೈನಿಕನ ಪಾತ್ರ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದೆ. ಅಷ್ಟೆ! ಅಷ್ಟು ಮಾಡಿದ್ದು…

View original post 1,460 more words

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s